ETV Bharat / science-and-technology

ವಿಂಡೋಸ್ 11 ಬಳಕೆದಾರರಿಗೆ IOS ಫೋನ್ ಲಿಂಕ್ ವೈಶಿಷ್ಟ್ಯ ಲಭ್ಯ: ಮೈಕ್ರೊಸಾಫ್ಟ್​ ಹೊಸ ಅಪ್ಡೇಟ್ - iMessage ಎಂಬುದು ನಿಮ್ಮ ಐಫೋನ್

ಈಗ ಎಲ್ಲ ವಿಂಡೋಸ್​ 11 ಬಳಕೆದಾರರಿಗೆ ಐಓಎಸ್​ ಫೋನ್ ಲಿಂಕ್ ವೈಶಿಷ್ಟ್ಯ ಬಳಸಲು ಸಾಧ್ಯವಾಗಲಿದೆ. ಫೋನ್ ಲಿಂಕ್ ವೈಶಿಷ್ಟ್ಯವು ಕರೆಗಳು, ಸಂದೇಶಗಳು ಮತ್ತು ಸಂಪರ್ಕಗಳಿಗೆ ಮೂಲಭೂತ ಬೆಂಬಲವನ್ನು ನೀಡುತ್ತದೆ.

Microsoft new feature will allow setting default apps in Windows 11

author img

By

Published : May 17, 2023, 6:52 PM IST

ಸ್ಯಾನ್ ಫ್ರಾನ್ಸಿಸ್ಕೊ: IOS ಫೋನ್ ಲಿಂಕ್ ಈಗ ಎಲ್ಲ ವಿಂಡೋಸ್ 11 ಗ್ರಾಹಕರಿಗೆ ಲಭ್ಯವಿದೆ ಎಂದು ಮೈಕ್ರೊಸಾಫ್ಟ್​ ಇಂದು ಘೋಷಿಸಿದೆ. ಇದು ಐಫೋನ್ ಬಳಕೆದಾರರಿಗೆ ಫೋನ್ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು, iMessage ಮೂಲಕ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು, ತಮ್ಮ ಕಾಂಟ್ಯಾಕ್ಟ್​ಗಳನ್ನು ನೋಡಲು ಮತ್ತು ತಮ್ಮ ಫೋನ್‌ನ ನೋಟಿಫಿಕೇಶನ್​ಗಳನ್ನು ತಮ್ಮ ವಿಂಡೋಸ್ ಪಿಸಿಯಲ್ಲಿ ನೇರವಾಗಿ ನೋಡಲು ಅವಕಾಶ ನೀಡುತ್ತದೆ.

ಇಂಥ ಫೋನ್ ಲಿಂಕ್ ಈ ಹಿಂದೆ ಆ್ಯಂಡ್ರಾಯ್ಡ್​ ಫೋನ್‌ಗಳೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಕಂಪನಿಯು ಕಳೆದ ತಿಂಗಳು 85 ಮಾರುಕಟ್ಟೆಗಳಲ್ಲಿ 39 ಭಾಷೆಗಳಲ್ಲಿ ವಿಂಡೋಸ್​ 11 ನಲ್ಲಿ iOS ಫೋನ್ ಲಿಂಕ್ ಜಾರಿಗೊಳಿಸಲು ಪ್ರಾರಂಭಿಸಿತ್ತು ಮತ್ತು ಇದು ಎಲ್ಲ ಗ್ರಾಹಕರನ್ನು ತಲುಪಲು ಕೆಲ ವಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ.

ಫೋನ್ ಲಿಂಕ್ ವೈಶಿಷ್ಟ್ಯವು ಕರೆಗಳು, ಸಂದೇಶಗಳು ಮತ್ತು ಸಂಪರ್ಕಗಳಿಗೆ ಮೂಲ ಬೆಂಬಲವನ್ನು ನೀಡುತ್ತದೆ. ಆದರೆ ಇದು ಕೆಲವು ಮಿತಿಗಳನ್ನು ಹೊಂದಿದೆ. ಇದು ಗ್ರೂಪ್ ಮೆಸೇಜುಗಳಿಗೆ ಪ್ರತ್ಯುತ್ತರಿಸಲು ಅಥವಾ ಚಿತ್ರಗಳು ಮತ್ತು ವಿಡಿಯೋಗಳನ್ನು ಕಳುಹಿಸುವ ಸೌಲಭ್ಯವನ್ನು ಸಪೋರ್ಟ್ ಮಾಡುವುದಿಲ್ಲ. ಮೆಸೇಜುಗಳು ಸೆಷನ್ ಆಧಾರಿತವಾಗಿರುತ್ತವೆ ಮತ್ತು ನಿಮ್ಮ ಫೋನ್ ನಿಮ್ಮ ಪಿಸಿ ಗೆ ಸಂಪರ್ಕಗೊಂಡಾಗ ಮಾತ್ರ ಬರುತ್ತವೆ ಎಂದು ಮೈಕ್ರೊಸಾಫ್ಟ್ ಹೇಳಿದೆ. ವಿಂಡೋಸ್ ನೋಟಿಫಿಕೇಷನ್​ಗಳ ಮೂಲಕ ಪಿಸಿಗೆ ನೋಟಿಫಿಕೇಶನ್​ಗಳನ್ನು ತಲುಪಿಸಲಾಗುತ್ತದೆ. ಅಂದರೆ ಬಳಕೆದಾರರು ಅವುಗಳನ್ನು ವಿಂಡೋಸ್ ಇಂಟರ್ಫೇಸ್‌ನಿಂದ ನೋಡಬಹುದು, ಪಿನ್ ಮಾಡಬಹುದು ಮತ್ತು ವಜಾಗೊಳಿಸಬಹುದು.

ಫೋನ್ ಲಿಂಕ್‌ ವೈಶಿಷ್ಟ್ಯವನ್ನು ಬಳಸಬೇಕಾದರೆ ಬಳಕೆದಾರರು ತಮ್ಮ ಐಫೋನ್ ಅನ್ನು ಬ್ಲೂಟೂತ್ ಮೂಲಕ ತಮ್ಮ ಪಿಸಿ ಗೆ ಜೋಡಿಸಬೇಕಾಗುತ್ತದೆ. ಇದಕ್ಕಾಗಿ ಡಿವೈಸ್​ನಲ್ಲಿ ಮಾರ್ಗದರ್ಶನ ಲಭ್ಯವಿರುತ್ತದೆ. iOS ಫೋನ್ ಲಿಂಕ್‌ ಬಳಸಬೇಕಾದರೆ iOS 14 ಅಥವಾ ಹೆಚ್ಚಿನ ಆವೃತ್ತಿ ಹೊಂದಿರುವ iPhone, Windows 11 ಸಾಧನ, ಬ್ಲೂಟೂತ್ ಸಂಪರ್ಕ ಮತ್ತು ಫೋನ್ ಲಿಂಕ್ ಅಪ್ಲಿಕೇಶನ್‌ನ ಇತ್ತೀಚಿನ ಆವೃತ್ತಿಯ ಅಗತ್ಯವಿದೆ. ಸದ್ಯಕ್ಕೆ IOS ಫೋನ್ ಲಿಂಕ್ ವೈಶಿಷ್ಟ್ಯ iPad (iPadOS) ಅಥವಾ MacOS ಗೆ ಲಭ್ಯವಿಲ್ಲ.

iMessage ಎಂಬುದು ನಿಮ್ಮ ಐಫೋನ್, ಐಪ್ಯಾಡ್, ಆ್ಯಪಲ್ ವಾಚ್ ಅಥವಾ ಮ್ಯಾಕ್ ಲ್ಯಾಪ್‌ಟಾಪ್‌ನಲ್ಲಿ ಬಳಸಬಹುದಾದ ಉಚಿತ ಮತ್ತು ಸುರಕ್ಷಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ಆಗಿದೆ. ಇದು ಐಒಎಸ್ 5 ಬಿಡುಗಡೆಯೊಂದಿಗೆ 2011 ರಲ್ಲಿ ಆರಂಭವಾಗಿತ್ತು. ಪ್ರಾರಂಭದ ವರ್ಷಗಳಲ್ಲಿ iMessage ಮೂಲಕ, ಇಂಟರ್ನೆಟ್ ಬಳಸಿ ಸಂದೇಶಗಳು, ವೀಡಿಯೊಗಳು, ಫೋಟೋಗಳು ಮತ್ತು ಸ್ಟಿಕ್ಕರ್‌ಗಳನ್ನು ಇತರ ಆ್ಯಪಲ್ ಸಾಧನಗಳಿಗೆ ಕಳುಹಿಸಬಹುದಾಗಿತ್ತು.

iMessage ಇದು ನಿಮ್ಮ ಫೋನ್‌ನಲ್ಲಿ ಇರುವ ಡೀಫಾಲ್ಟ್ ಮೆಸೇಜಿಂಗ್ ಆ್ಯಪ್​ಗಿಂತ ಭಿನ್ನವಾಗಿದೆ. ಓವರ್ ದ ಟಾಪ್ (OTT) ಅಪ್ಲಿಕೇಶನ್ ಎಂದು ಕರೆಯಲ್ಪಡುವ, ಐಮೆಸೇಜ್​ಗೆ ಕೆಲಸ ಮಾಡಲು ಸೆಲ್ ಡೇಟಾ ಅಗತ್ಯವಿಲ್ಲ. ಇದಕ್ಕಾಗಿ ಇಂಟರ್ನೆಟ್ ಸಂಪರ್ಕ ಇದ್ದರೆ ಸಾಕು. ನೀವು ವೈ ಫೈ ಮೂಲಕ ಸಂದೇಶಗಳನ್ನು ಕಳುಹಿಸಿದರೆ, ಆ ಸಂದೇಶವನ್ನು ಕಳುಹಿಸಲು ನಿಮಗೆ ಯಾವುದೇ ವೆಚ್ಚ ಆಗುವುದಿಲ್ಲ.

ಇದನ್ನೂ ಓದಿ : ಪಿವಿಆರ್​-ಐನಾಕ್ಸ್​ಗೆ 333 ಕೋಟಿ ರೂ. ನಷ್ಟ: 50 ಸ್ಕ್ರೀನ್​ ಸ್ಥಗಿತಕ್ಕೆ ನಿರ್ಧಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.