ETV Bharat / science-and-technology

ವಿಂಡೋಸ್​ 11 ಉಚಿತ ಡೌನ್ಲೋಡ್​ ನಿಲ್ಲಿಸಿದ ಮೈಕ್ರೊಸಾಫ್ಟ್​; ಹಣ ಪಾವತಿ ಕಡ್ಡಾಯ!

ವಿಂಡೋಸ್​ 7 ಮತ್ತು 8ರ ಬಳಕೆದಾರರು ವಿಂಡೋಸ್​ 11 ಅಪ್​ಡೇಟ್ ಪಡೆಯಬೇಕಾದರೆ ಹಣ ಪಾವತಿಸುವುದು ಇನ್ನು ಮುಂದೆ ಕಡ್ಡಾಯವಾಗಲಿದೆ.

Microsoft Finally Blocks Free Windows 11 Update Option For Windows 7 Users

author img

By ETV Bharat Karnataka Team

Published : Oct 13, 2023, 4:18 PM IST

ಬೆಂಗಳೂರು : ಹಳೆಯ ವಿಂಡೋಸ್ ಪಿಸಿ ಬಳಕೆದಾರರು ಇನ್ನು ಮುಂದೆ ತಮ್ಮ ಕಂಪ್ಯೂಟರ್​ಗಳಲ್ಲಿ ವಿಂಡೋಸ್ 11 ಇನ್​ಸ್ಟಾಲ್ ಮಾಡಬೇಕಾದರೆ ಹಣ ಪಾವತಿಸುವುದು ಕಡ್ಡಾಯ ಎಂದು ಮೈಕ್ರೋಸಾಫ್ಟ್ ಹೇಳಿದೆ.

ವಿಂಡೋಸ್ 7 ಮತ್ತು 8 ಬಳಕೆದಾರರು ಇತ್ತೀಚಿನವರೆಗೆ ಉಚಿತವಾಗಿಯೇ ವಿಂಡೋಸ್​ 11 ಗೆ ಅಪ್​ಗ್ರೇಡ್ ಮಾಡಿಕೊಳ್ಳಬಹುದಿತ್ತು. ಆದರೆ ಇನ್ನು ಮುಂದೆ ಉಚಿತವಾಗಿ ವಿಂಡೋಸ್​ 11 ಡೌನ್ಲೋಡ್​ ಮಾಡುವುದನ್ನು ಮೈಕ್ರೊಸಾಫ್ಟ್​ ನಿರ್ಬಂಧಿಸಿದೆ. ಮೈಕ್ರೊಸಾಫ್ಟ್​ ತಂತ್ರಾಂಶ ವ್ಯವಸ್ಥೆಯಲ್ಲಿನ ಯಾವುದೋ ಒಂದು ದೋಷದಿಂದ ವಿಂಡೋಸ್ 7 ಮತ್ತು 8 ಬಳಕೆದಾರರಿಗೆ ಇಷ್ಟು ದಿನ ಉಚಿತವಾಗಿ ವಿಂಡೋಸ್​ 11 ಗೆ ಅಪ್​ಗ್ರೇಡ್​ ಮಾಡಲು ಸಾಧ್ಯವಾಗಿತ್ತು ಎನ್ನಲಾಗಿದೆ.

ಹಳೆಯ ವಿಂಡೋಸ್ ಪಿಸಿ ಬಳಕೆದಾರರು ಈಗ ಹೊಸ ಆವೃತ್ತಿಯನ್ನು ಇನ್​ಸ್ಟಾಲ್ ಮಾಡಬೇಕಾದರೆ ವಿಂಡೋಸ್ 11 ಕೀ ಪಡೆಯಬೇಕಾಗುತ್ತದೆ. ಅಂದರೆ ಅವರು ತಮ್ಮ ಪಿಸಿಗೆ ವಿಂಡೋಸ್ 11 ಪಡೆಯಲು ಶುಲ್ಕ ಪಾವತಿಸಬೇಕಾಗುತ್ತದೆ.

ಮೈಕ್ರೋಸಾಫ್ಟ್ ಖಚಿತಪಡಿಸಿದಂತೆ, ವಿಂಡೋಸ್ 7 ಕೀ ಗಳನ್ನು ಬಳಸಿ ವಿಂಡೋಸ್​ 11 ಇನ್​​ಸ್ಟಾಲ್ ಮಾಡುವುದನ್ನು ಈಗ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಮೈಕ್ರೊಸಾಫ್ಟ್​ ಡೇಟಾಬೇಸ್ ನೊಂದಿಗೆ ನಿಮ್ಮ ಸಿಸ್ಟಂ ಅನ್ನು ನೋಂದಾಯಿಸಲು ಕೀ ಸಕ್ರಿಯಗೊಳಿಸುವುದು ಅತ್ಯಗತ್ಯ ಮತ್ತು ಕೀ ಇಲ್ಲದಿದ್ದರೆ ನಿಮ್ಮ ಸಿಸ್ಟಂನಲ್ಲಿ ರನ್ ಆಗುತ್ತಿರುವ ವಿಂಡೋಸ್​ ಆವೃತ್ತಿಯು ಅಮಾನ್ಯವಾಗುತ್ತದೆ.

ಆದರೇ ಈಗಾಗಲೇ ತಮ್ಮ ವಿಂಡೋಸ್​ 7 ಅಥವಾ 8 ಕೀಯನ್ನು ಬಳಸಿ ವಿಂಡೋಸ್​ 11 ಇನ್​ಸ್ಟಾಲ್ ಮಾಡಿಕೊಂಡು ಸಾಫ್ಟ್​ವೇರ್​ ಅನ್ನು ಬಳಸುತ್ತಿರುವ ಗ್ರಾಹಕರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂಬುದು ಸಮಾಧಾನದ ಸಂಗತಿಯಾಗಿದೆ. ವಿಂಡೋಸ್ 11 ಇದು ಮೈಕ್ರೋಸಾಫ್ಟ್​ನ ಹೊಸ ಆಪರೇಟಿಂಗ್ ಸಿಸ್ಟಮ್ ಆವೃತ್ತಿಯಾಗಿದೆ ಮತ್ತು ಇದು ವಿಂಡೋಸ್ 10 ನಂತರದ ಆವೃತ್ತಿಯಾಗಿದೆ. ವಿಂಡೋಸ್​ 10 ಬಿಡುಗಡೆಯಾಗಿ 6 ವರ್ಷಗಳ ನಂತರ ವಿಂಡೋಸ್​ 11 ಬಂದಿದ್ದು ಗಮನಾರ್ಹ.

ವಿಂಡೋಸ್ 11 ಆಪರೇಟಿಂಗ್​ ಸಿಸ್ಟಮ್ ತಯಾರಿಕಾ ಕಂಪನಿಯಾಗಿರುವ ಮೈಕ್ರೊಸಾಫ್ಟ್​ ವಿಶ್ವದ ಅತಿದೊಡ್ಡ ಕಂಪ್ಯೂಟರ್ ಸಾಫ್ಟ್​ವೇರ್​ ಕಂಪನಿಯೂ ಆಗಿದೆ. Word ಮತ್ತು Excel ನಂತಹ ಡೆಸ್ಕ್ ಟಾಪ್ ಆಫೀಸ್ ಅಪ್ಲಿಕೇಶನ್​ಗಳಿಂದ ಹಿಡಿದು ಕ್ಲೌಡ್ ಪ್ಲಾಟ್ ಫಾರ್ಮ್ ಗಳು ಮತ್ತು Outlook ನಂತಹ ಇಮೇಲ್ ಸೇವೆಗಳವರೆಗೆ ಹಲವಾರು ಉತ್ಪನ್ನಗಳನ್ನು ಕಂಪನಿ ತಯಾರಿಸುತ್ತದೆ. ಮೈಕ್ರೋಸಾಫ್ಟ್ ಯುಎಸ್ ಮೂಲದ ತಂತ್ರಜ್ಞಾನ ಕಂಪನಿಯಾಗಿದೆ. ಇದನ್ನು 1975 ರಲ್ಲಿ ಬಿಲ್ ಗೇಟ್ಸ್ ಮತ್ತು ಪಾಲ್ ಅಲೆನ್ ಸ್ಥಾಪಿಸಿದರು.

ಇದನ್ನೂ ಓದಿ : ಜಿಯೋಭಾರತ್ B1 4G ಫೀಚರ್ ಫೋನ್ ಬಿಡುಗಡೆ: ಬೆಲೆ ₹__ರೂ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.