ETV Bharat / science-and-technology

ಇತಿಹಾಸದಲ್ಲೇ ಅತಿ ದೊಡ್ಡ ಡಿಡಿಒಎಸ್​ ಸೈಬರ್ ದಾಳಿ ತಡೆದ ಮೈಕ್ರೋಸಾಫ್ಟ್​ ಅಜ್ಯೂರ್

author img

By

Published : Feb 1, 2022, 7:44 AM IST

ಅಜ್ಯೂರ್ ಕ್ಲೌಡ್​ ಅಪ್ಲಿಕೇಷನ್ ಆಗಿದ್ದು, ಈ ಅಪ್ಲಿಕೇಷನ್​ನಲ್ಲಿ ಗ್ರಾಹಕರು ತಮ್ಮ ತಮ್ಮ ದಾಖಲೆಗಳು, ಖಾಸಗಿ ಮಾಹಿತಿಯನ್ನೂ ಕೂಡಾ ಶೇಖರಿಸಿಟ್ಟಿಕೊಳ್ಳಬಹುದಾಗಿದೆ. ಒಂದು ವೇಳೆ ಸರ್ವರ್ ಕುಸಿದರೆ, ಗ್ರಾಹಕರ ಮಾಹಿತಿಗಳು ಹ್ಯಾಕರ್​ಗಳ ಪಾಲಾಗುವ ಸಾಧ್ಯತೆ ಇರುತ್ತದೆ.

Microsoft stops biggest ever DDoS cyber attack in history
ಇತಿಹಾಸದಲ್ಲೇ ಅತಿ ದೊಡ್ಡ ಡಿಡಿಒಎಸ್​ ಸೈಬರ್ ದಾಳಿಯನ್ನು ತಡೆದ ಮೈಕ್ರೋಸಾಫ್ಟ್​ ಅಜ್ಯೂರ್

ನವದೆಹಲಿ: ಸಾಫ್ಟ್​ವೇರ್ ದೈತ್ಯ ಮೈಕ್ರೋಸಾಫ್ಟ್​​ ಒಡೆತನದ ಕ್ಲೌಡ್ ಕಂಪ್ಯೂಟಿಂಗ್ ಸರ್ವೀಸ್ ಮೈಕ್ರೋಸಾಫ್ಟ್​ ಅಜ್ಯೂರ್ ಅತಿದೊಡ್ಡ ಡಿಡಿಒಎಸ್​ ದಾಳಿಯನ್ನು ತಡೆದಿದೆ. ಈ ದಾಳಿ ಸೆಕೆಂಡ್​ಗೆ 3.47 ಟೆರ್ರಾಬೈಟ್ ವೇಗದಲ್ಲಿ ನಡೆಸಲು ಯತ್ನಿಸಲಾಗಿತ್ತು ಎಂದು ತಿಳಿದು ಬಂದಿದೆ.

3.47 ಟಿಬಿಪಿಎಸ್​ ವೇಗದಲ್ಲಿ ಏಷ್ಯಾದಲ್ಲಿ ಅಜ್ಯೂರ್ ಕ್ಲೌಡ್ ಕಂಪ್ಯೂಟಿಂಗ್ ಅಪ್ಲಿಕೇಷನ್ ಬಳಸುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಈ ದಾಳಿಯನ್ನು ನಡೆಸಲಾಗಿತ್ತು. ಈ ದಾಳಿಯನ್ನು ಸುಮಾರು 10 ಸಾವಿರ ಮೂಲಗಳಿಂದ ನಡೆಸಲಾಗಿತ್ತು.

ಏನಿದು ಡಿಡಿಒಎಸ್​ ದಾಳಿ? ಹೇಗೆ?

ಡಿಡಿಒಎಸ್ ದಾಳಿಯನ್ನು ಸರಳವಾಗಿ ಅರ್ಥ ಮಾಡಿಕೊಳ್ಳಬೇಕಾದರೆ, ತಂತ್ರಜ್ಞಾನದ ಬಗ್ಗೆ ಸ್ವಲ್ಪ ಮಟ್ಟದ ಅರಿವಿರಬೇಕಾಗುತ್ತದೆ. ಡಿಡಿಒಎಸ್​​ ಅನ್ನು ವಿಸ್ತೃತ ರೂಪದಲ್ಲಿ ಹೇಳುವುದಾದರೆ ಸೇವೆ ವಿತರಣೆಯ ನಿರಾಕರಣೆ (Distributed Denial Of Service) ಎಂದು ಕರೆಯಲಾಗುತ್ತದೆ. ಅಂದರೆ 'ಬೇಕಾಗಿರುವ ಸೇವೆ ನೀಡಲು ಸಾಧ್ಯವಿಲ್ಲ' ಎಂದು ಅರ್ಥ.

ಒಂದು ವೇಳೆ ನೀವು ಯಾವುದಾದರೊಂದು ವೆಬ್​ಸೈಟ್​ ಅಥವಾ ಅಥವಾ ಬ್ಲಾಗ್​​ಗಳಿಗೆ ಹೋದಾಗ 'ನಿಮಗೆ ಈ ಸೇವೆ ನೀಡಲು ಸಾಧ್ಯವಿಲ್ಲ' ಎಂಬ ಸೂಚನೆಯನ್ನು ಕೆಲವೊಮ್ಮೆ ನೀಡಿರುತ್ತೀರಿ. ಅದೇ ರೀತಿ ಕೆಲವೊಂದು ಸಾಫ್ಟ್​ವೇರ್ ಅಪ್ಲಿಕೇಷನ್​ಗಳಿಗೆ ತೆರಳಿದಾಗಲೂ ಈ ರೀತಿಯ ಸೂಚನೆಗಳನ್ನು ನಾವು ನೋಡಬಹುದು.

ಯಾವ ಯಾವ ಸೇವೆಗಳನ್ನು ನೀಡಬೇಕು ಎಂಬುದು ಸಾಫ್ಟ್​ವೇರ್ ಅಪ್ಲಿಕೇಷನ್​ ಸರ್ವರ್​​​ನಲ್ಲಿ ನಿಗದಿ ಮಾಡಲಾಗಿರುತ್ತದೆ. ಒಂದು ಬಾರಿ ಕಳಿಸಿದರೆ, ಅದು 'ನಿಮಗೆ ಈ ಸೇವೆ ನೀಡಲು ಸಾಧ್ಯವಿಲ್ಲ' ಎಂದು ಸೂಚನೆ ನೀಡುತ್ತದೆ. ಹತ್ತು ಬಾರಿ ನೀವು ಆ ಸೇವೆಗೆ ತೆರಳಲು ಮುಂದಾದರೂ, ಅದು 'ನಿಮಗೆ ಈ ಸೇವೆ ನೀಡಲು ಸಾಧ್ಯವಿಲ್ಲ' ಎಂದು ಸೂಚಿಸುತ್ತದೆ.

ಇದೇ ರೀತಿಯಾಗಿ 10 ಸಾವಿರ ಮೂಲಗಳಿಂದ ಸೆಕೆಂಡ್​ಗೆ 3.47 ಟೆರ್ರಾಬೈಟ್ ವೇಗದಲ್ಲಿ ಆ ಸೇವೆಗೆ ಯತ್ನಿಸಿದರೆ?.. ಅದನ್ನು ದಾಳಿ ಎನ್ನುತ್ತೇವೆ. ಅಂದರೆ 'ನಿಮಗೆ ಈ ಸೇವೆ ನೀಡಲು ಸಾಧ್ಯವಿಲ್ಲ' ಎಂಬ ಸೂಚನೆಯನ್ನು ಅಷ್ಟೂ ಪ್ರಮಾಣದಲ್ಲಿ ನೀಡಲು ಸಾಧ್ಯವಾಗದ ಕಾರಣ ಆ ಕಂಪ್ಯೂಟರ್​​ನ ಸರ್ವರ್​ ಕುಸಿಯುತ್ತದೆ. ಅಂದಹಾಗೆ ಈ ದಾಳಿಗೆ ಬೋಟ್​ಗಳೆಂಬ ಸ್ವಯಂಚಾಲಿತ ಮಾಲ್ವೇರ್​ಗಳನ್ನು ಬಳಸಲಾಗುತ್ತದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಈಗ ಕೂಡಾ ನಡೆದಿರುವುದು ಅಂತಹುದ್ದೇ ದಾಳಿ. ಮೈಕ್ರೋಸಾಫ್ಟ್​ ಅಜ್ಯೂರ್ ಇಂಥದ್ದೇ ದಾಳಿಯ್ನು ತಡೆದಿದೆ. ಅಜ್ಯೂರ್ ಕ್ಲೌಡ್​ ಅಪ್ಲಿಕೇಷನ್ ಆಗಿದ್ದು, ಈ ಅಪ್ಲಿಕೇಷನ್​ನಲ್ಲಿ ಗ್ರಾಹಕರು ತಮ್ಮ ತಮ್ಮ ದಾಖಲೆಗಳು, ಖಾಸಗಿ ಮಾಹಿತಿಯನ್ನೂ ಕೂಡಾ ಶೇಖರಿಸಿಟ್ಟಿಕೊಳ್ಳಬಹುದಾಗಿದೆ. ಒಂದು ವೇಳೆ ಸರ್ವರ್ ಕುಸಿದರೆ, ಗ್ರಾಹಕರ ಮಾಹಿತಿಗಳು ಹ್ಯಾಕರ್​ಗಳ ಪಾಲಾಗುವ ಸಾಧ್ಯತೆ ಇರುತ್ತದೆ.

15 ನಿಮಿಷದಲ್ಲಿ ಈ ದಾಳಿಯನ್ನು ತಡೆದ ಅಜ್ಯೂರ್: ಮೈಕ್ರೋಸಾಫ್ಟ್​ ಅಜ್ಯೂರ್ ಈ ದಾಳಿಯನ್ನು ತಡೆಯಲು 15 ನಿಮಿಷಗಳ ಸಮಯವನ್ನು ತೆಗೆದುಕೊಂಡಿದೆ. ಇತಿಹಾಸದಲ್ಲಿ ಇದು ಅತ್ಯಂತ ದೊಡ್ಡ ದಾಳಿ ಎಂದು ಅಜ್ಯೂರ್ ನೆಟವರ್ಕಿಂಗ್​​ನ ಪ್ರಾಡಕ್ಟ್​ ಮ್ಯಾನೇಜರ್ ಅಲಿಥಿಯಾ ಟೊಹ್ ತಿಳಿಸಿದ್ದಾರೆ.

ಕಳೆದ ಅಕ್ಟೋಬರ್ ತಿಂಗಳಲ್ಲಿ ಸೆಕೆಂಡಿಗೆ 2.4 ಟೆರಾಬೈಟ್ ವೇಗದಲ್ಲಿ ದಾಳಿ ನಡೆಸಲಾಗಿದ್ದು, ಆ ದಾಳಿಯನ್ನು ಯಶಸ್ವಿಯಾಗಿ ತಡೆಯಲಾಗಿತ್ತು. ಡಿಸೆಂಬರ್​ ತಿಂಗಳಲ್ಲಿ ಸೆಕೆಂಡ್​ಗೆ 2.5 ಟೆರಾಬೈಟ್ ವೇಗದಲ್ಲಿ ನಡೆದ ದಾಳಿಯನ್ನು ತಡೆಯಲಾಗಿದ್ದು, ಇನ್ಮುಂದೆ ಇಂತಹ ದಾಳಿಗಳು ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ಅಲಿಥಿಯಾ ಟೊಹ್ ಭರವಸೆ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆ ಚುನಾವಣೆಗಳ ವೇಳೆ ಮತದಾರರಿಗೆ ಬಲ್ಕ್‌ ಸಂದೇಶಗಳ ರವಾನೆಗೆ ಹೊಸ ಟೂಲ್‌ - ವಾಟ್ಸ್‌ಆ್ಯಪ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.