ಸ್ಯಾನ್ ಫ್ರಾನ್ಸಿಸ್ಕೋ : ಮೈಕ್ರೊಸಾಫ್ಟ್ ಆಪರೇಟಿಂಗ್ ಸಿಸ್ಟಂನಲ್ಲಿನ ಬಹುತೇಕ ಇನ್-ಬಾಕ್ಸ್ ಅಪ್ಲಿಕೇಶನ್ಗಳನ್ನು ಅನ್ ಇನ್ಸ್ಟಾಲ್ ಮಾಡುವ ಹಾಗೂ ಬಳಕೆದಾರರು ತಮಗೆ ಬೇಕಾದ ಸಾಫ್ಟ್ವೇರ್ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳುವ ಆಯ್ಕೆಯನ್ನು ಈಗ ಮೈಕ್ರೊಸಾಫ್ಟ್ ನೀಡಿದೆ. ಯುರೋಪಿಯನ್ ಎಕನಾಮಿಕ್ ಏರಿಯಾ (ಇಇಎ) ಪ್ರದೇಶದಲ್ಲಿ ಡಿಜಿಟಲ್ ಮಾರ್ಕೆಟ್ಸ್ ಆಕ್ಟ್ (ಡಿಎಂಎ) ನ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಮೈಕ್ರೊಸಾಫ್ಟ್ ತನ್ನ ಆಪರೇಟಿಂಗ್ ಸಿಸ್ಟಮ್ (ಒಎಸ್) ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ.
ಮೈಕ್ರೊಸಾಫ್ಟ್ ಎಡ್ಜ್ ವೆಬ್ ಬ್ರೌಸರ್ ಅನ್ನು ಅನ್ ಇನ್ಸ್ಟಾಲ್ ಮಾಡುವ ಮತ್ತು ವಿಂಡೋಸ್ ಸರ್ಚ್ ಪೇನ್ನಲ್ಲಿ Bing ಸರ್ಚ್ ಅನ್ನು ತೆಗೆದುಹಾಕುವ ಆಯ್ಕೆಗಳು ಇದಲ್ಲಿ ಸೇರಿವೆ ಎಂದು ವಿಂಡೋಸ್ ಸೆಂಟ್ರಲ್ ವರದಿ ಮಾಡಿದೆ. ಅಂದರೆ ಬಳಕೆದಾರರು ತಮಗೆ ಬೇಡವಾದ ಅಪ್ಲಿಕೇಶನ್ಗಳನ್ನು ತೆಗೆದುಹಾಕುವ ಅಪ್ಲಿಕೇಶನ್ಗಳ ಪಟ್ಟಿ ಈಗ ವಿಸ್ತಾರವಾಗಿದೆ. ಸದ್ಯ ಫೈಲ್ ಎಕ್ಸ್ ಪ್ಲೋರರ್ ಮತ್ತು ಫೋನ್ ಲಿಂಕ್ ಈ ಎರಡು ಇನ್-ಬಾಕ್ಸ್ ಅಪ್ಲಿಕೇಶನ್ಗಳನ್ನು ಮಾತ್ರ ಅನ್ ಇನ್ಸ್ಟಾಲ್ ಮಾಡಲು ಸಾಧ್ಯವಿಲ್ಲ.
ಇದಲ್ಲದೆ, ಮೈಕ್ರೊಸಾಫ್ಟ್ ವಿಜೆಟ್ ಬೋರ್ಡ್ಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಬಿಡುಗಡೆ ಮಾಡುತ್ತಿದ್ದು, ಇದರ ಮೂಲಕ ಬಳಕೆದಾರರು ಮೈಕ್ರೊಸಾಫ್ಟ್ ಸುದ್ದಿ ಮತ್ತು ಜಾಹೀರಾತು ಫೀಡ್ ಅನ್ನು ನಿಷ್ಕ್ರಿಯಗೊಳಿಸಬಹುದಾಗಿದೆ. ಆದಾಗ್ಯೂ ಬೇಕಾದವರು ಅವುಗಳ ಬಳಕೆ ಮುಂದುವರಿಸಬಹುದು. ಈ ಬದಲಾವಣೆಗಳು ಇಇಎಯಲ್ಲಿನ ವಿಂಡೋಸ್ 11 ಪಿಸಿಗಳಿಗೆ ನಿರ್ದಿಷ್ಟವಾಗಿರುತ್ತವೆ ಎಂದು ಕಂಪನಿ ಹೇಳಿದೆ. ಹೀಗಾಗಿ ಈ ಪ್ರದೇಶದ ಹೊರಗಿನ ಬಳಕೆದಾರರಿಗೆ ಈ ಬದಲಾವಣೆಗಳು ಅನ್ವಯವಾಗುತ್ತವೆಯಾ ಎಂಬುದು ಅಸ್ಪಷ್ಟವಾಗಿದೆ ಎಂದು ವರದಿ ತಿಳಿಸಿದೆ.
ಈ ಬದಲಾವಣೆಗಳು ಮುಂದಿನ ವರ್ಷದ ಆರಂಭದಲ್ಲಿ ಎಲ್ಲರಿಗೂ ಲಭ್ಯವಾಗುವ ಮೊದಲು, ಮುಂಬರುವ ವಾರಗಳಲ್ಲಿ ಇನ್ಸೈಡರ್ ಬೀಟಾ ಚಾನೆಲ್ ಮೂಲಕ ವಿಂಡೋಸ್ 11 ನಲ್ಲಿ ಪೂರ್ವವೀಕ್ಷಣೆಗೆ ಲಭ್ಯವಿರುತ್ತವೆ. ಮಾರ್ಚ್ 6, 2024 ರ ವೇಳೆಗೆ ವಿಂಡೋಸ್ 11 ಸಂಪೂರ್ಣವಾಗಿ ಡಿಎಂಎ ಕಂಪ್ಲೈಯಂಟ್ ಆಗಲಿದೆ ಎಂದು ಮೈಕ್ರೊಸಾಫ್ಟ್ ಹೇಳಿಕೊಂಡಿದೆ. ಆ ಹೊತ್ತಿಗೆ ವಿಂಡೋಸ್ 10 ನಲ್ಲಿ ಇದೇ ರೀತಿಯ ಅನೇಕ ಬದಲಾವಣೆಗಳನ್ನು ಕಾಣಿಸಿಕೊಳ್ಳಲಿವೆ.
ಏತನ್ಮಧ್ಯೆ, ಮೈಕ್ರೊಸಾಫ್ಟ್ ವಿಷನ್ ಸಾಮರ್ಥ್ಯದ ಹೊಸ ಟೆಕ್ಸ್ಟ್-ಟು-ಸ್ಪೀಚ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದನ್ನು ಬಳಸಿ ಟೆಕ್ಸ್ಟ್ ಇನ್ಪುಟ್ ನೀಡಿ ಮಾತನಾಡುವ ಅವತಾರ್ ವೀಡಿಯೊಗಳನ್ನು ರಚಿಸಬಹುದು ಮತ್ತು ಮಾನವ ಚಿತ್ರಗಳನ್ನು ಬಳಸಿಕೊಂಡು ತರಬೇತಿ ಪಡೆದ ನೈಜ-ಸಮಯದ ಸಂವಾದಾತ್ಮಕ ಬಾಟ್ಗಳನ್ನು ಸೃಷ್ಟಿಸಬಹುದು.
ಇದನ್ನೂ ಓದಿ : ಮಾನವರಂತೆ ಮಾತನಾಡುವ ಟೆಕ್ಸ್ಟ್ ಟು ಸ್ಪೀಚ್ ಪರಿಚಯಿಸಿದ ಮೈಕ್ರೊಸಾಫ್ಟ್