ಹೈದರಾಬಾದ್: ಖಗೋಳ ಘಟನೆಗಳು ಸದಾ ಮನುಷ್ಯರಲ್ಲಿ ವಿಸ್ಮಯವನ್ನು ಮೂಡಿಸುತ್ತಲೇ ಇರುತ್ತದೆ. ಇಂತಹ ಕೌತುಕದ ಸನ್ನಿವೇಶವೊಂದು ಇದೀಗ ನಡೆಯಲಿದೆ ಎಂದು ಹೈದರಾಬಾದ್ನ ಭಾರತೀಯ ಬಾಹ್ಯಾಕಾಶ ಸೊಸೈಟಿ ನಿರ್ದೇಶಕ ಶ್ರೀರಘುನಂದನ್ ಕುಮಾರ್ ತಿಳಿಸಿದ್ದಾರೆ. ಇದೇ ಡಿಸೆಂಬರ್ 16 ರಿಂದ 20ರವರೆಗೆ ಭೂಮಿಯ ಮೇಲೆ ಉಲ್ಕಾಪಾತಗಳ ಮಳೆ ಸುರಿಯಲಿದೆ. ಈ ಉಲ್ಕಾಪಾತದ ಘಟನೆಯನ್ನು ರಾತ್ರಿ 9ರಿಂದ ಬೆಳಗ್ಗೆ 5 ಗಂಟೆಯವರೆಗೆ ಬರೀಗಣ್ಣಿನಲ್ಲಿ ಪ್ರತಿಯೊಬ್ಬರು ಕಾಣಬಹುದಾಗಿದೆ ಎಂದಿದ್ದಾರೆ.
ಸೂರ್ಯನ ಸುತ್ತ ಸುತ್ತುತ್ತಿದ್ದ ಪೇಥಾನ್ ಎಂಬ ಕ್ಷುದ್ರಗ್ರಹವೊಂದು ಕಳೆದು ಕೆಲವು ತಿಂಗಳಿನಿಂದ ಭೂಮಿಯ ಕಕ್ಷೆಗೆ ಪ್ರವೇಶ ಮಾಡಿದೆ. ಇದು ಯಾವುಧೋ ಗಾಳಿಯೊಂದಿಗೆ ಘರ್ಷಣೆ ನಡೆಸಿ ಡಿಕ್ಕಿ ಹೊಡೆದು, ಸಣ್ಣ ಸಣ್ಣ ಉಲ್ಕಾಪಾತಗಳು ಭೂಮಿ ಮೇಲೆ ಬೀಳಲಿದೆ ಎಂದಿದ್ದಾರೆ. ಅಂತಾರಾಷ್ಟ್ರೀಯ ಹವಾಮಾನ ಸಂಘಟನೆ (ಐಎಂಒ) ವೆಬ್ಸೈಟ್ ಪ್ರಕಾರ, ಇದು ಗಂಟೆಗೆ 150 ಲೈಟ್ಬೀಮ್ಗಳಲ್ಲಿ ಹೊಳೆಯುತ್ತದೆ. ಈ ಉಲ್ಕಾಪಾತವೂ ನಗರಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪ್ರಖರವಾಗಿ ಕಾಣಿಸಲಿದೆ.
ಫೋಟೋ ಅಪ್ಲೋಡ್ ಮಾಡಿ: ಡಿಸೆಂಬರ್ ಮಾಸದಲ್ಲಿ ಖಗೋಳ ವಿದ್ಯಾಮಾನಗಳು ಹೆಚ್ಚು ಸ್ಪಷ್ಟವಾಗಿ ಗೋಚರಿಸಲಿದೆ. ಈ ಖಗೋಳ ವಿಸ್ಮಯ ಘಟನೆ ಯಾರಿಗೆ ಈ ಕ್ಷಣಗಳು ಕಾಣುತ್ತವೆಯೋ ಅವರು ಈ ಚಿತ್ರ ಅಥವಾ ವಿಡಿಯೋವನ್ನು ಸೆರೆ ಹಿಡಿದು ಐಎಂಒ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬಹುದು ಎಂದು ಕುಮಾರ್ ತಿಳಿಸಿದ್ದಾರೆ.
ಖಗೋಳದಲ್ಲಿ ವೀಕ್ಷಿಸಿ ಈ ಕೌತುಕ: ಸಾಮಾನ್ಯವಾಗಿ ಪ್ರತಿ ಡಿಸೆಂಬರ್ನಲ್ಲಿ ಈ ರೀತಿಯ ಉಲ್ಕೆಗಳನ್ನು ಕಾಣಬಹುದಾಗಿದೆ. ಆದರೆ, ಎಲ್ಲ ಉಲ್ಕೆಗಳು ಹೆಚ್ಚು ಪ್ರಖರತೆಯಿಂದ ಕೂಡಿರುವುದಿಲ್ಲ. ಈ ವರ್ಷ ಜೆಮಿನಿಡ್ ಉಲ್ಕಾಪಾತವಾಗುತ್ತದೆ. ಇದು ಬಣ್ಣ ಬಣ್ಣದಲ್ಲಿ ಬೆಳಕಿನಿಂದ ಕೂಡಿರುತ್ತದೆ.
ಪೇಥಾನ್ ವಿಶೇಷತೆ: ಸೂರ್ಯನ ಸುತ್ತ ಗ್ರಹಗಳು ಸೇರಿದಂತೆ ಕ್ಷುದ್ರಗ್ರಹಗಳು ಸುತ್ತುತ್ತಿರುತ್ತದೆ. ಪೇಥಾನ್ ಕ್ಷುದ್ರಗ್ರಹವೂ ಸೂರ್ಯನ ಸುತ್ತ ದೀರ್ಘ ವೃತ್ತಾಕಾರದಲ್ಲಿ ಸುತ್ತುತ್ತಿರುತ್ತದೆ. ಈ ವೃತ್ತಾಕಾರದ ಕಕ್ಷೆಯು ಭೂಮಿ ಕಕ್ಷೆಯನ್ನು ಪ್ರವೇಶಿಸಿದಾಗ ಇದು ಧೂಳಿನ ಕಣದ ಘರ್ಷಣೆಯಿಂದ ಉರಿದು ಹೋಗುತ್ತದೆ. ಈ ಉರಿದು ಹೋಗಿ ಕೆಳಗೆ ಬೀಳವಾಗ ಭಿನ್ನ ಭಿನ್ನ ಬಣ್ಣದಲ್ಲಿ ಇದು ಆಗಸದಿಂದ ನೆಲಕ್ಕೆ ಬೀಳುವುದನ್ನು ಕಾಣಬಹುದು. ಇದುವೇ ಉಲ್ಕಾಪಾತ ಎಂದು ಕಾಣಬಹುದು. ಈ ಪೇಥಾನ್ ಗಾತ್ರದಲ್ಲಿ ದೊಡ್ಡದಾಗಿರುವ ಹಿನ್ನಲೆ ಇದರ ಗೋಚರತೆ ಮತ್ತು ಉಲ್ಕೆಗಳು ಬೀಳುವ ಸಂಖ್ಯೆ ಹೆಚ್ಚಿನ ಮಟ್ಟದಲ್ಲಿ ಇದೆ.
ಇದನ್ನೂ ಓದಿ: 2024ರ ಚಂದ್ರಯಾನಕ್ಕಾಗಿ ನಾಲ್ವರು IAF ಪೈಲಟ್ಗಳ ನಿಯೋಜನೆ; ಇಸ್ರೊ ಅಧ್ಯಕ್ಷ