ಸ್ಯಾನ್ ಫ್ರಾನ್ಸಿಸ್ಕೋ : ಮೆಟಾ (ಈ ಹಿಂದೆ ಫೇಸ್ಬುಕ್) ತನ್ನ ಮೂರು ವರ್ಚುವಲ್ ರಿಯಾಲಿಟಿ (ವಿಆರ್) ಗೇಮ್ಗಳಾದ ಡೆಡ್ ಆ್ಯಂಡ್ ಬರೀಡ್ (Dead and Buried), ಡೆಡ್ ಆ್ಯಂಡ್ ಬರೀಡ್ II (Dead and Buried II) ಮತ್ತು ಬೋಗೊ (Bogo) ಇವನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದೆ. ಆದರೆ ಈ ಗೇಮ್ಗಳನ್ನು ಏಕಾಏಕಿ ಸ್ಥಗಿತಗೊಳಿಸುವುದರ ಹಿಂದಿನ ಕಾರಣವೇನು ಎಂಬುದನ್ನು ಮೆಟಾ ಹೇಳಿಲ್ಲ.
ಸದ್ಯ ಅಸ್ತಿತ್ವದಲ್ಲಿರುವ ಗೇಮ್ ಮಾಲೀಕರಿಗೆ ಮೆಟಾ ಇಮೇಲ್ ಕಳುಹಿಸಿದ್ದು, ಮಾರ್ಚ್ 15, 2024 ರಂದು ಮೂರೂ ಗೇಮ್ಗಳ ಸಪೋರ್ಟ್ ಅನ್ನು ನಿಲ್ಲಿಸಲಾಗುವುದು ಎಂದು ತಿಳಿಸಿದೆ. "ಮಾರ್ಚ್ 15, 2024 ರ ಶುಕ್ರವಾರದ ನಂತರ ಡೆಡ್ ಅಂಡ್ ಬರೀಡ್ ಆಡಲು ಲಭ್ಯವಿರುವುದಿಲ್ಲ ಎಂದು ಈ ಮೂಲಕ ನಾವು ನಿಮಗೆ ತಿಳಿಸುತ್ತಿದ್ದೇವೆ" ಎಂದು ಗೇಮ್ ಮಾಲೀಕರಿಗೆ ಕಳುಹಿಸಲಾದ ಸಂದೇಶದಲ್ಲಿ ತಿಳಿಸಲಾಗಿದೆ.
"ನಿಮ್ಮ ರಿಫ್ಟ್, ರಿಫ್ಟ್ ಎಸ್ ಅಥವಾ ಕ್ವೆಸ್ಟ್ (ಲಿಂಕ್ ಮೂಲಕ) ಸಾಧನಗಳಲ್ಲಿ ಆ ದಿನಾಂಕದಂದು ರಾತ್ರಿ 11.59 ರವರೆಗೆ ಘೋಸ್ಟ್ಗಳನ್ನು ಬೇಟೆಯಾಡುವುದನ್ನು ಮುಂದುವರಿಸಬಹುದು" ಎಂದು ಅದು ಹೇಳಿದೆ. 2016 ರಲ್ಲಿ ಬಿಡುಗಡೆಯಾದ ಡೆಡ್ ಅಂಡ್ ಬರೀಡ್ ಗೇಮ್ ಕೋ-ಆಪ್, ಪಿವಿಪಿ ಮತ್ತು ಸಿಂಗಲ್-ಪ್ಲೇಯರ್ ಮೋಡ್ಗಳನ್ನು ಒಳಗೊಂಡಂತೆ ರೂಮ್-ಸ್ಕೇಲ್ ಗೇಮ್ ಪ್ಲೇಯೊಂದಿಗೆ ಪ್ರಯೋಗ ಮಾಡಿದ ಮೊದಲ ಮಲ್ಟಿಪ್ಲೇಯರ್ ವಿಆರ್ ಶೂಟರ್ಗಳಲ್ಲಿ ಒಂದಾಗಿದೆ.
ಡೆಡ್ ಆ್ಯಂಡ್ ಬರೀಡ್ II ಅನ್ನು ಮೇ 2019 ರಲ್ಲಿ ಮೆಟಾದ ಆಂತರಿಕ ಗೇಮ್ ಅಭಿವೃದ್ಧಿ ಸ್ಟುಡಿಯೋ ಆಕ್ಯುಲಸ್ ಸ್ಟುಡಿಯೋಸ್ ಮೂಲ ಆಕ್ಯುಲಸ್ ಕ್ವೆಸ್ಟ್ ನ ಆರಂಭಿಕ ಗೇಮ್ ಆಗಿ ಬಿಡುಗಡೆ ಮಾಡಲಾಗಿತ್ತು. 2019 ರಲ್ಲಿ ಬಿಡುಗಡೆಯಾದ ಉಚಿತ ಆಕ್ಯುಲಸ್ ಕ್ವೆಸ್ಟ್ ಬಿಡುಗಡೆ ಶೀರ್ಷಿಕೆಯಾದ ಬೋಗೊ, ಬಳಕೆದಾರರಿಗೆ ವರ್ಚುವಲ್ ಆಗಿ ಸಾಕುಪ್ರಾಣಿಗಳನ್ನು ಬೆಳೆಸಲು ಮತ್ತು ಮತ್ತು ಅವುಗಳನ್ನು ಆರೈಕೆ ಮಾಡಲು ಅನುವು ಮಾಡಿಕೊಡುತ್ತದೆ.
ವರ್ಚುವಲ್ ರಿಯಾಲಿಟಿ ಎಂಬುದು ಸಿಮ್ಯುಲೇಟೆಡ್ 3 ಡಿ ಪರಿಸರವಾಗಿದ್ದು, ಇದು ಬಳಕೆದಾರರಿಗೆ ವಾಸ್ತವದ ರೀತಿಯಲ್ಲಿಯೇ ವರ್ಚುವಲ್ ಪರಿಸರವನ್ನು ಅನ್ವೇಷಿಸಲು ಮತ್ತು ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ಬಳಕೆದಾರರು ನಿರ್ದಿಷ್ಟ ಉದ್ದೇಶಕ್ಕಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ / ಸಿಮ್ಯುಲೇಟೆಡ್ ಪರಿಸರದಲ್ಲಿ ತಲ್ಲೀನರಾಗುತ್ತಾರೆ. ವಿಆರ್ ವರ್ಚುವಲ್, ಸಿಮ್ಯುಲೇಟೆಡ್ ಪರಿಸರವನ್ನು ಸೃಷ್ಟಿಸುತ್ತದೆ. ಇದರಲ್ಲಿ ಜನರು ವಿಆರ್ ಕನ್ನಡಕಗಳು ಅಥವಾ ಇತರ ಸಾಧನಗಳನ್ನು ಬಳಸಿಕೊಂಡು ಸಿಮ್ಯುಲೇಟೆಡ್ ಪರಿಸರದಲ್ಲಿ ಸಂವಹನ ನಡೆಸುತ್ತಾರೆ.
ಇದನ್ನೂ ಓದಿ : ಪಿಕ್ಸೆಲ್ ವಾಚ್ ರಿಪೇರಿ ಮಾಡಲ್ಲ ಗೂಗಲ್; ಸರ್ವಿಸ್ ಸೆಂಟರೇ ಇಲ್ಲ ಎಂದ ಕಂಪನಿ!