ETV Bharat / science-and-technology

Threads: ಬಂತು ಟ್ವಿಟರ್​ ಮಾದರಿಯ ಥ್ರೆಡ್ಸ್‌​ ಆ್ಯಪ್; ಎಲಾನ್​ ಮಸ್ಕ್​ಗೆ ಮೆಟಾ ಸವಾಲು - ಥ್ರೆಡ್ಸ್‌​ ಆ್ಯಪ್​

ಮೆಟಾ ಸಂಸ್ಥೆ ಟ್ವಿಟರ್​ ಮಾದರಿಯ ಥ್ರೆಡ್ಸ್‌​ ಆ್ಯಪ್ ಅನ್ನು​ ಅನಾವರಣಗೊಳಿಸಿದ್ದು, ವಿಶ್ವದ 100 ದೇಶಗಳಲ್ಲಿ ಸದ್ಯಕ್ಕೆ ಲಭ್ಯವಿದೆ. ಯುರೋಪ್​ ರಾಷ್ಟ್ರಗಳಲ್ಲಿ ಇದು ಬಿಡುಗಡೆಯಾಗಿಲ್ಲ.

ಟ್ವಿಟರ್​ ಮಾದರಿಯ ಥ್ರೆಡ್​ ಆ್ಯಪ್​
ಟ್ವಿಟರ್​ ಮಾದರಿಯ ಥ್ರೆಡ್​ ಆ್ಯಪ್​
author img

By

Published : Jul 6, 2023, 10:03 AM IST

ಲಂಡನ್: ಜನಪ್ರಿಯ ಮೈಕ್ರೋಬ್ಲಾಗಿಂಗ್​ ಟ್ವಿಟರ್​ ಮಾಲೀಕ ಎಲಾನ್​ ಮಸ್ಕ್​ ದಿನಕ್ಕೊಂದು ಷರತ್ತು, ನಿಯಮ ಹಾಕುತ್ತಿದ್ದು, ಬಳಕೆದಾರರ ತಲೆ ಕೆಡಿಸಿದೆ. ಇದನ್ನೇ ಬಳಸಿಕೊಂಡಿರುವ ಫೇಸ್​ಬುಕ್​, ವಾಟ್ಸ್‌ಆ್ಯಪ್‌ ಕಂಪನಿಗಳ ಮಾತೃ ಸಂಸ್ಥೆಯಾದ ಮೆಟಾ ಸಂಸ್ಥೆ ಘೋಷಿಸಿದಂತೆ ಟ್ವಿಟರ್​ನಂತೆ ಇರುವ 'ಥ್ರೆಡ್ಸ್‌​ ಆ್ಯಪ್​' ಬಿಡುಗಡೆ ಮಾಡಿದೆ.

ಬ್ರಿಟನ್​ನಲ್ಲಿ ಮೊದಲು ಆ್ಯಪಲ್​ ಮತ್ತು ಗೂಗಲ್​ ಆಂಡ್ರಾಯ್ಡ್​ ಅಪ್ಲಿಕೇಶನ್ ಸ್ಟೋರ್‌ಗಳಲ್ಲಿ ಲಭ್ಯವಿತ್ತು. ಇದೀಗ ಆಸ್ಟ್ರೇಲಿಯಾ, ಕೆನಡಾ ಮತ್ತು ಜಪಾನ್ ಸೇರಿದಂತೆ 100 ಕ್ಕೂ ಹೆಚ್ಚು ದೇಶಗಳಲ್ಲಿ ಬಳಕೆಗೆ ಸಿಗಲಿದೆ. ಮೆಟಾ ಒಡೆತನದ ಥ್ರೆಡ್ಸ್‌​ ಟ್ವಿಟರ್​​ನಂತೆ ಫೋಟೋ, ವಿಡಿಯೋ, ಮಾಹಿತಿಯನ್ನು ಹಂಚಿಕೊಳ್ಳಬಹುದಾಗಿದೆ. ಈಗಿರುವ ಇನ್​​ಸ್ಟಾಗ್ರಾಮ್​ ಖಾತೆ ಮೂಲಕವೇ ಇದನ್ನು ಡೌನ್‌​ಲೋಡ್​ ಮಾಡಿಕೊಂಡು ಬಳಕೆ ಮಾಡಬಹುದು.

ಥ್ರೆಡ್ಸ್‌ ವಿಶೇಷತೆಗಳೇನು?: ಎಲಾನ್​ ಮಸ್ಕ್​ ದಿನದ ಟ್ವಿಟರ್​ ಬಳೆಕೆಯ ಮೇಲೂ ಮಿತಿ ಹೇರಿದ್ದು, ಅದಕ್ಕೆ ಪರ್ಯಾಯವಾಗಿ ಮೆಟಾ ಸಂಸ್ಥೆ ಥ್ರೆಡ್ಸ್‌​ ಅನ್ನು ಲಾಂಚ್ ಮಾಡಿದೆ ಎಂದೇ ಹೇಳಲಾಗಿದೆ. ಥ್ರೆಡ್ಸ್‌​​ ಆ್ಯಪ್​ನಲ್ಲಿ ಲೈಕ್​, ಪೋಸ್ಟ್​, ರೀಪೋಸ್ಟ್​, ಎಡಿಟ್​, ರಿಸೀವ್ಡ್​​ ಲೈಕ್ಸ್​ ಅಂಡ್​ ಕಾಮೆಂಟ್​ ಸೆಕ್ಷನ್​ ನೀಡಲಾಗಿದೆ. ಇದನ್ನು ಥೇಟ್ ಟ್ವಿಟರ್​ನಂತೆಯೇ ರೂಪಿಸಲಾಗಿದೆ.

ಇಲ್ಲಿ ಫೋಟೋ, ವಿಡಿಯೋಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬಹುದು. ಅದಕ್ಕೆ ಬರುವ ಕಾಮೆಂಟ್​, ಲೈಕ್ಸ್​ಗಳು ಕೆಳಭಾಗದಲ್ಲಿ ಕಾಣಸಿಗುತ್ತವೆ. ಇಲ್ಲಿ ಇಂದಿನ ವಿಷಯಗಳ ಚರ್ಚೆಯ ಜೊತೆಗೆ ನಾಳೆಗೆ ಟ್ರೆಂಡ್​ ಆಗುವ ಸಬ್ಜೆಕ್ಸ್​ ಬಗ್ಗೆಯೂ ಚರ್ಚೆ ಮಾಡಬಹುದು. ಹೀಗಾಗಿ ಇದು ಇನ್​ಸ್ಟಾಗ್ರಾಮ್​ನ ಮುಂದುವರಿದ ಭಾಗ ಎಂದೇ ಹೇಳಬಹುದು ಎಂದು ಕಂಪನಿ ತಿಳಿಸಿದೆ.

500 ಅಕ್ಷರಗಳವರೆಗೆ ಥ್ರೆಡ್ಸ್‌​ನಲ್ಲಿ ಒಂದು ಪೋಸ್ಟ್‌ ಹಾಕಬಹುದು. ಟ್ವಿಟರ್​ನಲ್ಲಿ 280 ಅಕ್ಷರ ಮಿತಿಗಿಂತ ಇದು ಹೆಚ್ಚು. ಐದು ನಿಮಿಷಗಳ ಉದ್ದದಷ್ಟು ಲಿಂಕ್‌ಗಳು, ಫೋಟೋಗಳು ಮತ್ತು ವಿಡಿಯೊಗಳನ್ನು ಪೋಸ್ಟ್​ ಮಾಡಬಹುದು. ಇನ್​ಸ್ಟಾಗ್ರಾಮ್​ ಖಾತೆಯಿಂದಲೇ ಇದರಲ್ಲಿ ಲಾಗ್​​ಇನ್​ ಆಗಬಹುದು. ಹೊಸದಾಗಿ ಲಾಗ್​​​ಇನ್​ ಬೇಕಾಗಿಲ್ಲ. ಡೇಟಾ ಲೀಕ್​ ಆಗುವುದನ್ನು ತಡೆಯುವ ಕ್ರಮ ಎಂಬುದು ಕಂಪನಿಯ ಉವಾಚ.

ಯುರೋಪ್​ ರಾಷ್ಟ್ರಗಳಲ್ಲಿಲ್ಲ ಥ್ರೆಡ್ಸ್‌ : 100ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಬಿಡುಗಡೆಯಾಗಿರುವ ಥ್ರೆಡ್ಸ್‌​ ಸದ್ಯಕ್ಕೆ ಯುರೋಪ್ ಒಕ್ಕೂಟಗಳ ರಾಷ್ಟ್ರಗಳಲ್ಲಿ ಲಭ್ಯವಿಲ್ಲ ಎಂದು ಹೇಳಿದೆ. 27 ಐರೋಪ್ಯ ರಾಷ್ಟ್ರಗಳಲ್ಲಿ ಕಟ್ಟುನಿಟ್ಟಾದ ನಿಯಮಗಳ ಕಾರಣ ಅಲ್ಲಿ ಜಾರಿಗೆ ಯೋಚಿಸಿಲ್ಲ ಎಂದು ಮೆಟಾ ಸಂಸ್ಥೆ ಐರ್ಲೆಂಡ್‌ನ ಡೇಟಾ ಗೌಪ್ಯತೆ ಆಯೋಗಕ್ಕೆ ತಿಳಿಸಿದೆ.

ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಮೆಟಾ ಸಂಸ್ಥೆಯ ಹಲವಾರು ಕಂಪನಿಗಳಲ್ಲಿ ಉದ್ಯೋಗ ಕಡಿತ ಮಾಡಿ, ಈಗ ಟ್ವಿಟರ್​ ಮಾದರಿಯ ಥ್ರೆಡ್ಸ್‌​ ಆ್ಯಪ್​ ಪರಿಚಯಿಸಿದ್ದ ಕ್ರಮವನ್ನು ಹಲವರು ಟೀಕಿಸಿದ್ದಾರೆ. ಟೆಕ್​ ಉದ್ಯಮ ಹೊಡೆತಕ್ಕೀಡಾದ ಸಂದರ್ಭದಲ್ಲಿ ಥ್ರೆಡ್ಸ್‌ ಯಾವ ರೀತಿಯ ಬೆಳವಣಿಗೆ ಕಾಣಲಿದೆ ಎಂಬುದು ಮಿಲಿಯನ್​ ಡಾಲರ್​ ಪ್ರಶ್ನೆ.

ಇದನ್ನೂ ಓದಿ: WhatsApp: ಮೇ ತಿಂಗಳಲ್ಲಿ 65 ಲಕ್ಷ ಖಾತೆಗಳನ್ನು ನಿಷೇಧಿಸಿದ ವಾಟ್ಸ್​ಆ್ಯಪ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.