ಸ್ಯಾನ್ಫ್ರಾನ್ಸಿಸ್ಕೋ: ಇನ್ಸ್ಟಾಗ್ರಾಂನಲ್ಲಿ ನಿಮ್ಮ ಫ್ರೆಂಡ್ಲಿಸ್ಟ್ನಲ್ಲಿಲ್ಲದ ಹಲವರಿಗೆ ಡಿಎಂ (ನೇರ ಸಂದೇಶ) ಮಾಡುವ ಅವಕಾಶವನ್ನು ಈ ಹಿಂದೆ ಮೆಟಾ ನೀಡಿತ್ತು. ಇದರಿಂದ ನಿಮ್ಮ ಹಿಂಬಾಲಕರಲ್ಲದವರಿಗೂ ಸಂದೇಶ ಕಳುಹಿಸಬಹುದಿತ್ತು. ಈ ಸೌಲಭ್ಯದಿಂದ ಅನೇಕ ಬಾರಿ ಕಿರುಕುಳವನ್ನು ಬಳಕೆದಾರರು ಎದುರಿಸಿದ್ದರು. ಅನಗತ್ಯವಾದ ಇಂತಹ ಡಿಎಂಗಳನ್ನು ತಪ್ಪಿಸುವ ಸಲುವಾಗಿ ಇದೀಗ ಮೆಟಾ ಹೊಸ ಫೀಚರ್ವೊಂದನ್ನು ಪರಿಚಯಿಸಿದೆ. ಬಳಕೆದಾರರ ಸುರಕ್ಷತೆ ದೃಷ್ಟಿ ಜೊತೆಗೆ ಅನಗತ್ಯ ಕಿರಿಕಿರಿ ತಡೆಯುವ ಉದ್ದೇಶದಿಂದ ಈ ಹೊಸ ಫೀಚರ್ ಅನ್ನು ಮೆಟಾ ಬಿಡುಗಡೆ ಮಾಡಿದೆ. ಈ ವೈಶಿಷ್ಟವನ್ನು ಕಂಪನಿ ಜೂನ್ನಿಂದ ಪರೀಕ್ಷೆ ಮಾಡುತ್ತದೆ ಎಂದು ಟೆಕ್ಕ್ರಂಚ್ ವರದಿ ಮಾಡಿದೆ. ಈ ಹೊಸ ಫೀಚರ್ನಲ್ಲಿ, ತಮ್ಮನ್ನು ಹಿಂಬಾಲಕರ ಹೊರತಾದವರಿಗೆ ಡಿಎಂ ಮಾಡುವಾಗ ಎರಡು ಹೊಸ ನಿಯಮಗಳನ್ನು ಎದುರಿಸಬೇಕಾಗಿದೆ.
ಮೊದಲನೆಯದಾಗಿ, ತಮ್ಮನ್ನು ಹಿಂಬಾಲಿಸದವರಿಗೆ ಬಳಕೆದಾರರಿಗೆ ಕೇವಲ ಒಂದು ಸಂದೇಶವನ್ನು ಕಳುಹಿಸಬಹುದಾಗಿದೆ. ಮತ್ತೊಂದು ನಿಯಮ ಎಂದರೆ, ಈ ಡಿಎಂಗಳನ್ನು ಕೇವಲ ಟೆಕ್ಸ್ಟ್ ಆಧಾರಿತವಾಗಿರಬೇಕಿರಬೇಕು. ಅಂದರೆ ಬಳಕೆದಾರರು ತಮ್ಮನ್ನು ಹಿಂಬಾಲಿಸದವರೊಂದಿಗೆ ಸಂಭಾಷಣೆ ನಡೆಸಲು ಚಾಟ್ ಇನ್ವೇಟ್ ಅನುಮೋದಿಸಿದ ಬಳಿಕವೇ ಅವರು ಫೋಟೋ, ವಿಡಿಯೋ ಅಥವಾ ಆಡಿಯೋ ಸಂದೇಶ ಕಳುಹಿಸಬಹುದಾಗಿದೆ.
ಇನ್ಸ್ಟಾಗ್ರಾಂ ಅನುಸಾರ, ಈ ಹೊಸ ನಿಯಮಗಳಿಂದ ಬಳಕೆದಾರರು ಇದೀಗ ತಾವು ಹಿಂಬಾಲಿಸದಲ್ಲದವರಿಂದ ಅನಗತ್ಯವಾಗಿ ಸಂದೇಶ ಅಥವಾ ವಿಡಿಯೋವನ್ನು ಪಡೆಯುವುದು ತಪ್ಪುತ್ತದೆ. ಇದರಿಂದ ತಮ್ಮ ಫಾಲೋ ಲಿಸ್ಟ್ನಲ್ಲಿ ಇಲ್ಲದವರಿಂದ ಪದೇ ಪದೆ ಕಿರಿಕಿರಿ ಮೆಸೇಜ್ ಪಡೆಯುವುದು ತಪ್ಪುತ್ತದೆ. ಜನರು ತಮ್ಮ ಇನ್ಬಾಕ್ಸ್ಗಳನ್ನು ತೆಗೆದಾಗ ಅವರ ಸುರಕ್ಷತೆ ಜೊತೆಗೆ ಇದರ ಮೇಲೆ ನಿಯಂತ್ರಣ ಹೊಂದಿರಬೇಕು ಎಂಬುದಾಗಿ ಮೆಟಾದ ಮಹಿಳಾ ಸುರಕ್ಷತೆ ಮುಖ್ಯಸ್ಥೆಯಾಗಿರುವ ಸಿಂಡಿ ಸೌತ್ವರ್ತ್ ತಿಳಿಸಿದ್ದಾರೆ.
ಇನ್ಸ್ಟಾಗ್ರಾಂ ಈಗಾಗಲೇ ತಮ್ಮ ಸಂಪರ್ಕದಲ್ಲಿಲ್ಲದವರಿಂದ ದೌರ್ಜನ್ಯಕ್ಕೆ ಒಳಗಾಗುವದನ್ನು ತಪ್ಪಿಸಲು ಮಿತಿಯನ್ನು ಹೇರುವ ಮೂಲಕ ಸುರಕ್ಷತೆಗೆ ಕಾಳಜಿವಹಿಸಿದೆ. ಇದೀಗ ಹೊಸ ಡಿಎಂ ಸಾಧನವೂ ಆ ಮಿತಿಗೆ ಮತ್ತಷ್ಟು ಸುರಕ್ಷತೆ ಮೂಡಿಸಿದೆ. ಈ ಆ್ಯಪ್ನಲ್ಲಿ ಹಿಂಡನ್ ವರ್ಡ್ ಸೆಟ್ಟಿಂಗ್ ಇದ್ದು ಅಲ್ಲಿ ಡಿಎಂ ರಿಕ್ವೆಸ್ಟ್ಗಳು ಅವಾಚ್ಯ ಶಬ್ದ ಮತ್ತು ಹೇಳಿಕೆ ಮತ್ತು ಎಮೋಜಿಗಳು ಆಟೋಮೆಟಿಕ್ ಆಗಿದೆ ಹಿಂಡನ್ ಫೋಲ್ಡರ್ಗೆ ತಳ್ಳುತ್ತದೆ. ಅನಗತ್ಯ ಸಂದೇಶಗಳು ತಕ್ಷಣಕ್ಕೆ ಹೆಚ್ಚುವುದರಿಂದ ರಕ್ಷಣೆ ಮಾಡಲು ಇನ್ಸ್ಟಾಗ್ರಾಂನಲ್ಲಿ ಲಿಮಿಟ್ ಫೀಚರ್ ಕೂಡ ಇರಲಿದೆ ಎಂದು ವರದಿ ತಿಳಿಸಿದೆ.
ಜುಲೈನಲ್ಲಿ, ಈ ಜಾಲತಾಣವೂ ರೀಲ್ಸ್ ಟೆಂಪ್ಲೆಟ್ ಅಪ್ಗ್ರೇಡ್ ಅನ್ನು ಬಳಕೆದಾರರಿಗೆ ಪರಿಚಯಿಸಿತು. ಇದು ಸುಲಭವಾಗಿ ತಮಗೆ ಆಸಕ್ತಿದಾಯಕವಾದ ರೀಲ್ಸ್ನಲ್ಲಿ ಮುಳುಗಲು ಅವಕಾಶ ನೀಡಿತು. ಜೊತೆಗೆ ಮೆಟಾ ರಿಯಲ್ ಟೈಮ್ ಅವತಾರ್ ಕಾಲ್ಸ್ ಅನ್ನು ಕೂಡ ಇನ್ಸ್ಟಾಗ್ರಾಂ ಮತ್ತು ಮೆಸೇಂಜರ್ನಲ್ಲಿ ಪರಿಚಯಿಸಿತು. ಈ ಫೀಚರ್ನಿಂದಾಗಿ ಬಳಕೆದಾರರು ತಮ್ಮ ವಿಡಿಯೋ ಕಾಲ್ನಲ್ಲಿ ತಮ್ಮ ನಿಜವಾದ ಮುಖವನ್ನು ತೋರಿಸದಂತೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಕ್ಯಾಮೆರಾ ಆಫ್ ಅಂಡ್ ಆನ್ ಆಯ್ಕೆಯನ್ನು ಕೂಡ ಇದನ್ನು ನೀಡಿತು.
ಇದನ್ನೂ ಓದಿ: Meta AudioCraft: ಇದು ಪಠ್ಯದಿಂದ ಸುಮಧುರ ಸಂಗೀತ ಸೃಷ್ಟಿಸುವ AI ಚಾಟ್ಬಾಟ್