ನವದೆಹಲಿ: ವಿಶ್ವದಲ್ಲಿ ಅತಿ ಹೆಚ್ಚು ಬಳಕೆ ಮಾಡಲಾಗುತ್ತಿರುವ ಸಾಮಾಜಿಕ ಮಾಧ್ಯಮವಾದ ವಾಟ್ಸ್ಆ್ಯಪ್ ದಿನಕ್ಕೊಂದು ಹೊಸ ವೈಶಿಷ್ಟ್ಯವನ್ನು ಹೊರತರುತ್ತಿದೆ. ಇದೀಗ ವಾಟ್ಸ್ಆ್ಯಪ್ನಿಂದ ಏಕಕಾಲದಲ್ಲಿ 32 ಜನರು ವಿಡಿಯೋ ಕಾಲ್ ಮಾಡುವ ಅವಕಾಶವನ್ನು ಘೋಷಿಸಿದೆ.
ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ಈ ಬಗ್ಗೆ ಫೇಸ್ಬುಕ್ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ವಾಟ್ಸ್ಆ್ಯಪ್ ಮತ್ತಷ್ಟು ನವೀನವಾಗುತ್ತಿದೆ. ಜನರ ಬಳಕೆಗೆ ಇನ್ನಷ್ಟು ಹತ್ತಿರವಾಗಲು ಒಂದೇ ಬಾರಿಗೆ 32 ಮಂದಿ ವಿಡಿಯೋ ಕರೆ ಮಾಡಿ ಮಾತನಾಡುವ ಹೊಸ ಫೀಚರ್ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಹೊಸ ಫೀಚರ್ಗೆ 'ಕಮ್ಯುನಿಟೀಸ್' ಎಂದು ಹೇಳಲಾಗಿದ್ದು, ಇದೊಂದು ಹೊಸ ಬೆಳವಣಿಗೆ ಎಂದು ಜುಕರ್‌ಬರ್ಗ್ ಕರೆದಿದ್ದಾರೆ. WhatsApp ನಲ್ಲಿ ಒಟ್ಟಾಗಿ ಜನರು ಕೂಡಿಕೊಳ್ಳಲುವ ಹೊಸ ಮಾದರಿ ಪರಿಚಯಿಸಲಾಗಿದೆ. ಇದರಿಂದ ಉಪ ಗುಂಪುಗಳ ರಚಿಸುವುದು, ಮಲ್ಟಿಪಲ್ ಥ್ರೆಡ್ಸ್, ಅನೌನ್ಸಮೆಂಟ್ ಚಾನಲ್ಗಳನ್ನು ಬಳಸುವ ಅಗತ್ಯವಿಲ್ಲ. ಒಂದೇ ಸೂರಿನಲ್ಲಿ ಜನರನ್ನು ಸೇರಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಇಲ್ಲಿ ಹರಿಬಿಡುವ ಸಂದೇಶಗಳು, ಚಾಟ್ಗಳು ಸಂಪೂರ್ಣ ಭದ್ರತೆಯಿಂದ ಕೂಡಿರುತ್ತವೆ ಎಂದು ವಾಟ್ಸ್ಆ್ಯಪ್ ಹೇಳಿದೆ.
ಇದಲ್ಲದೇ ವಾಟ್ಸ್ಆ್ಯಪ್ ಗ್ರೂಪ್ಗಳನ್ನು ಇನ್ನಷ್ಟು ಬಳಕೆದಾರರ ಸ್ನೇಹಿಯನ್ನಾಗಿ ಮಾಡಲು ಒಂದು ಗ್ರೂಪ್ನಲ್ಲಿ 1024 ಜನರು ಇರುವಂತೆ ಫೀಚರ್ ರೂಪಿಸಲಾಗಿದೆ. ದೊಡ್ಡ ಫೈಲ್ಗಳ ಹಂಚಿಕೆ, ಅವರ ಪ್ರತಿಕ್ರಿಯೆಗಳು, ಇನ್ ಚಾಟ್ ಪೋಲ್ಗಳು ಕೂಡ ಒಂದೇ ಗ್ರೂಪ್ನಲ್ಲಿ ಲಭ್ಯವಿರಲಿವೆ. ಫೋನ್ ಕಾಲ್ ಲಿಂಕ್ ಅನ್ನು ಕೂಡ ಇಲ್ಲಿ ಹಂಚಿಕೊಳ್ಳಲು ಸಾಧ್ಯವಿದೆ.