ಸ್ಯಾನ್ ಫ್ರಾನ್ಸಿಸ್ಕೋ: ಗ್ಯಾಸ್ ಅಥವಾ ಡೀಸೆಲ್ ಚಾಲಿತ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ (ಇವಿ) ನಿರ್ವಹಣಾ ವೆಚ್ಚ ಶೇಕಡಾ 79 ರಷ್ಟು ಹೆಚ್ಚು ಹಾಗೂ ಪ್ಲಗ್ - ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳ ನಿರ್ವಹಣಾ ವೆಚ್ಚ ಶೇಕಡಾ 146 ರಷ್ಟು ಹೆಚ್ಚಾಗಿದೆ ಎಂದು ಹೊಸ ವರದಿಯೊಂದು ಕಂಡು ಹಿಡಿದಿದೆ.
ಲಾಭರಹಿತ ಸಂಸ್ಥೆಯಾದ ಕನ್ಸ್ಯೂಮರ್ ರಿಪೋರ್ಟ್ (Consumer Reports) ವರದಿಯ ಪ್ರಕಾರ, ಆಂತರಿಕ ದಹನ ಎಂಜಿನ್ (ಐಸಿಇ) ನಿಂದ ಚಾಲಿತ ಕಾರುಗಳಿಗಿಂತ ಹೈಬ್ರಿಡ್ ಮಾದರಿಗಳು ಶೇಕಡಾ 26 ರಷ್ಟು ಕಡಿಮೆ ಸಮಸ್ಯೆಗಳನ್ನು ಹೊಂದಿವೆ ಎಂದು ಹೇಳಿದೆ. ಆಂತರಿಕ ದಹನ ಅಂದರೆ ಅನಿಲ ಮತ್ತು ಡೀಸೆಲ್ ಚಾಲಿತ ವಾಹನಗಳು ಎಂದರ್ಥ.
ಸಂಶೋಧಕರು 2000 ರಿಂದ 2023 ರ ಮಾಡೆಲ್ನ 3,30,000 ಕ್ಕೂ ಹೆಚ್ಚು ವಾಹನಗಳ ಡೇಟಾವನ್ನು ಸಂಗ್ರಹಿಸಿದ್ದಾರೆ. ಆ ವಾಹನಗಳಲ್ಲಿ ಕಾಣಿಸಿಕೊಂಡ ಬ್ರೇಕ್ ಸಮಸ್ಯೆಗಳು, ಮುರಿದ ಒಳಭಾಗದಿಂದ ಹಿಡಿದು ವಾರಂಟಿ ಸಿಗದ ದುಬಾರಿ ಎಂಜಿನ್, ಟ್ರಾನ್ಸ್ ಮಿಷನ್, ಇವಿ ಬ್ಯಾಟರಿ ಮತ್ತು ಇವಿ ಚಾರ್ಜಿಂಗ್ ಸಮಸ್ಯೆಗಳಂತಹ ಪ್ರಮುಖ 20 ಸಮಸ್ಯೆಗಳನ್ನು ಅಧ್ಯಯನ ಮಾಡಿದ್ದಾರೆ. ನಂತರ ಡೇಟಾವನ್ನು ವಿಲೀನಗೊಳಿಸಿ, ಪ್ರತಿ ಬ್ರಾಂಡ್ಗೆ ಸಂಖ್ಯಾತ್ಮಕ ಸರಾಸರಿ ಸ್ಕೋರ್ (100 ರಲ್ಲಿ) ನೀಡಲಾಯಿತು.
ವಾಹನಗಳ ಮಾದರಿಯನ್ನು ಆಧರಿಸಿ ಸರಾಸರಿ ಸಂಭವನೀಯ ಸಮಸ್ಯೆಗಳ ಸಂಖ್ಯೆ ಹೀಗಿದೆ: ಆಂತರಿಕ ದಹನ ಎಂಜಿನ್ನ ಡೀಸೆಲ್ ಅಥವಾ ಗ್ಯಾಸ್ ವಾಹನಗಳು 17, ಎಲೆಕ್ಟ್ರಿಕ್ ವಾಹನಗಳು 12, ಸಾಂಪ್ರದಾಯಿಕ ಹೈಬ್ರಿಡ್ಗಳು 19 ಮತ್ತು ಪ್ಲಗ್ - ಇನ್ ಹೈಬ್ರಿಡ್ಗಳು ಎಲ್ಲ 20 ಸಮಸ್ಯೆಗಳನ್ನು ಹೊಂದಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಲೆಕ್ಸಸ್ನ ಯುಎಕ್ಸ್ ಮತ್ತು ಎನ್ ಎಕ್ಸ್ ಹೈಬ್ರಿಡ್ ಮತ್ತು ಟೊಯೊಟಾದ ಕ್ಯಾಮ್ರಿ ಹೈಬ್ರಿಡ್, ಹೈಲ್ಯಾಂಡರ್ ಹೈಬ್ರಿಡ್ ಮತ್ತು ಆರ್ ಎವಿ 4 ಹೈಬ್ರಿಡ್ ಈ ವಿಭಾಗದಲ್ಲಿ ಹೆಚ್ಚು ವಿಶ್ವಾಸಾರ್ಹ ಬ್ರಾಂಡ್ಗಳಾಗಿವೆ. 2030 ರ ವೇಳೆಗೆ ಅನೇಕ ವಾಹನ ತಯಾರಕರು ತಯಾರಿಸಲಿರುವ ಸಂಪೂರ್ಣ ಎಲೆಕ್ಟ್ರಿಕ್ ಕಾರುಗಳು ಮತ್ತು ಎಸ್ ಯುವಿಗಳು ಕ್ರಮವಾಗಿ ತೀರಾ ಸಾಧಾರಣವಾದ 44 ಮತ್ತು 43 ಸರಾಸರಿ ಅಂಕಗಳನ್ನು ಹೊಂದಿವೆ. ಹೊಸ ತಂತ್ರಜ್ಞಾನದ ಎಲೆಕ್ಟ್ರಿಕ್ ಪಿಕಪ್ ಗಳು ಸರಾಸರಿ 30 ಅಂಕಗಳೊಂದಿಗೆ ಕೆಟ್ಟ ಪ್ರದರ್ಶನ ನೀಡಿವೆ.
ಇತ್ತೀಚಿನ ದಿನಗಳಲ್ಲಿ ಹಲವಾರು ಬ್ರಾಂಡ್ನ ಇವಿಗಳು ಮಾರುಕಟ್ಟೆಗೆ ಬರುತ್ತಿರುವ ಮಧ್ಯೆ ಕೆಲ ಇವಿ ಡ್ರೈವ್ ಸಿಸ್ಟಮ್ ಮೋಟರ್ಗಳು, ಇವಿ ಚಾರ್ಜಿಂಗ್ ವ್ಯವಸ್ಥೆಗಳು ಮತ್ತು ಇವಿ ಬ್ಯಾಟರಿಗಳು ಸಮಸ್ಯೆಗಳನ್ನು ಹೊಂದಿವೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ : ಗೂಗಲ್ ಫೋಟೋಸ್ನಿಂದ GIF ಆ್ಯನಿಮೇಶನ್ ರಚಿಸುವುದು ಹೇಗೆ? ಇಲ್ಲಿದೆ ಗೈಡ್