ಹೈದರಾಬಾದ್: ಲಾವಾ ತನ್ನ ಇತ್ತೀಚಿನ ಎಂಟ್ರಿ ಲೆವೆಲ್ 5 ಜಿ ಸ್ಮಾರ್ಟ್ಫೋನ್ ಲಾವಾ ಬ್ಲೇಜ್-2 5ಜಿ ಅನ್ನು ಭಾರತದಲ್ಲಿ ಬುಧವಾರ ಅನಾವರಣಗೊಳಿಸಿದೆ. ಹೊಸ ಸ್ಮಾರ್ಟ್ಪೋನ್ ಬೆಲೆ ಕೇವಲ 9,999 ರೂ.ಗಳಿಂದ ಪ್ರಾರಂಭವಾಗುತ್ತವೆ. ಲಾವಾ ಬ್ಲೇಜ್-2 5ಜಿ ಆಕರ್ಷಕ ಗ್ಲಾಸ್ ಬ್ಯಾಕ್ ವಿನ್ಯಾಸ, ಹಿಂಭಾಗದಲ್ಲಿ ರಿಂಗ್ ಲೈಟ್ ಮತ್ತು ಮೀಡಿಯಾಟೆಕ್ ಡೈಮೆನ್ಸಿಟಿ 6020 ಪ್ರೊಸೆಸರ್ ಹೊಂದಿದೆ. ಹೊಸ ಲಾವಾ ಬ್ಲೇಜ್ 2 5ಜಿ ಸ್ಮಾರ್ಟ್ ಫೋನ್ ನ ಲಭ್ಯತೆ ಮತ್ತು ಇತರ ವಿಶೇಷತೆಗಳ ಮಾಹಿತಿ ಇಲ್ಲಿದೆ.
ಲಾವಾ ಬ್ಲೇಜ್ ಪ್ರೊ 5ಜಿ ಎರಡು ಮಾದರಿಗಳಲ್ಲಿ ಸಿಗಲಿದೆ. 4 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ಮತ್ತು 6 ಜಿಬಿ ರಾಮ್ ಮತ್ತು 128 ಜಿಬಿ ಸ್ಟೋರೇಜ್ ಗಳ ಪೈಕಿ ಆಯ್ಕೆ ಮಾಡಿಕೊಳ್ಳಬಹುದು. ಎರಡೂ ಮಾದರಿಗಳ ರ‍್ಯಾಮ್ ಅನ್ನು 1 ಟಿಬಿ ವರೆಗೆ ವಿಸ್ತರಿಸಬಹುದು. ರೂಪಾಂತರಗಳು ಮೆಮೊರಿಯೊಂದಿಗೆ ವಿಸ್ತರಿಸಬಹುದಾದ ರ‍್ಯಾಮ್ ಅನ್ನು ನೀಡುತ್ತವೆ, ಅದನ್ನು 1 ಟಿಬಿ ವರೆಗೆ ವಿಸ್ತರಿಸಬಹುದು. ಈ ಫೋನ್ ಗ್ಲಾಸ್ ಬ್ಲ್ಯಾಕ್, ಗ್ಲಾಸ್ ಬ್ಲೂ ಮತ್ತು ಗ್ಲಾಸ್ ಲ್ಯಾವೆಂಡರ್ ಸೇರಿದಂತೆ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಲಾವಾ ಬ್ಲೇಜ್-2 5ಜಿ ನವೆಂಬರ್ 9 ರಿಂದ Amazon ಡಾಟ್ in ಮತ್ತು Lavamobiles ಡಾಟ್ com ಗಳಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ.
ಹೊಸ ಫೋನ್ನಲ್ಲಿ ಏನೇನು ವಿಶೇಷತೆ?; ಲಾವಾ ಬ್ಲೇಜ್-2 ಮೀಡಿಯಾಟೆಕ್ ಡೈಮೆನ್ಸಿಟಿ 6020 ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 13 ಓಎಸ್ನಲ್ಲಿ ಕೆಲಸ ಮಾಡುತ್ತದೆ. ಇದಕ್ಕೆ ಆಂಡ್ರಾಯ್ಡ್ 14 ಅಪ್ಡೇಟ್ ನೀಡುವುದಾಗಿ ಕಂಫನಿ ಹೇಳಿದೆ. ಅಲ್ಲದೆ ಹ್ಯಾಂಡ್ಸೆಟ್ಗೆ ಎರಡು ವರ್ಷಗಳ ತ್ರೈಮಾಸಿಕ ಸೆಕ್ಯೂರಿಟಿ ಅಪ್ಡೇಟ್ಗಳನ್ನು ಸಹ ಕಂಪನಿ ನೀಡಲಿದೆ. 5000 ಎಂಎಎಚ್ ಬ್ಯಾಟರಿ ಇದ್ದು, ಇದನ್ನು ಟೈಪ್-ಸಿ ಮೂಲಕ 18 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಮಾಡಬಹುದು.
6.56 ಇಂಚಿನ ಎಚ್ಡಿ + ಐಪಿಎಸ್ ಪಂಚ್ ಹೋಲ್ ಡಿಸ್ಪ್ಲೇ ಹೊಂದಿದ್ದು, 2.5 ಡಿ ಕರ್ವ್ಡ್ ಸ್ಕ್ರೀನ್ ಮತ್ತು 90 ಹರ್ಟ್ಜ್ ರಿಫ್ರೆಶ್ ರೇಟ್ ಹೊಂದಿದೆ. ಇದು ಅನಾಮಧೇಯ ಕರೆ ಬಂದಾಗ ಸ್ವಯಂ-ಕರೆ ರೆಕಾರ್ಡಿಂಗ್ ಸೌಲಭ್ಯವೂ ಇದರಲ್ಲಿದೆ. ಹೆಚ್ಚುವರಿ ಭದ್ರತೆ ಮತ್ತು ಅನುಕೂಲಕ್ಕಾಗಿ ಸೈಡ್ ಫಿಂಗರ್ ಪ್ರಿಂಟ್ ಸೆನ್ಸರ್ ಅನ್ನು ಒಳಗೊಂಡಿದೆ.
ಕ್ಯಾಮರಾ ಹೇಗೆ ಇದೆ ಗೊತ್ತಾ?: ಕ್ಯಾಮರಾದ ಬಗ್ಗೆ ನೋಡುವುದಾದರೆ- ಲಾವಾ ಬ್ಲೇಜ್ 50 ಮೆಗಾಪಿಕ್ಸೆಲ್ ಹಿಂಭಾಗದ ಕ್ಯಾಮರಾ ಮತ್ತು ಸೆಲ್ಫಿ ತೆಗೆದುಕೊಳ್ಳಲು ಸ್ಕ್ರೀನ್ ಫ್ಲ್ಯಾಶ್ ಹೊಂದಿರುವ 8 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಫಿಲ್ಮ್, ಸ್ಲೋ ಮೋಷನ್, ಟೈಮ್ ಲ್ಯಾಪ್ಸ್, ಯುಹೆಚ್ಡಿ, ಜಿಫ್, ಬ್ಯೂಟಿ, ಎಚ್ಡಿಆರ್, ನೈಟ್, ಪೋರ್ಟ್ರೇಟ್, ಎಐ, ಪ್ರೊ, ಪನೋರಮಾ, ಫಿಲ್ಟರ್ಗಳು ಮತ್ತು ಇಂಟೆಲಿಜೆಂಟ್ ಸ್ಕ್ಯಾನಿಂಗ್ ಸೇರಿದಂತೆ ವಿವಿಧ ಅಂತರ್ನಿರ್ಮಿತ ಕ್ಯಾಮರಾ ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ.
ಇದನ್ನೂ ಓದಿ : ಜಾಗತಿಕವಾಗಿ ಮೇಡ್-ಇನ್-ಇಂಡಿಯಾ ಐಫೋನ್ ರಫ್ತು ಶೇ 20ರಷ್ಟು ಹೆಚ್ಚಳ ಸಾಧ್ಯತೆ