ಟೋಕಿಯೊ: ಜಪಾನ್ ಏರೋಸ್ಪೇಸ್ ಎಕ್ಸ್ಪ್ಲೊರೇಶನ್ ಏಜೆನ್ಸಿಯ (ಜಾಕ್ಸಾ) ಸ್ಮಾರ್ಟ್ ಲ್ಯಾಂಡರ್ ಫಾರ್ ಇನ್ವೆಸ್ಟಿಗೇಷನ್ ಮೂನ್ (SLIM - ಸ್ಲಿಮ್) ಲ್ಯಾಂಡರ್ ಚಂದ್ರನ ಕಕ್ಷೆಯಿಂದ ಚಂದ್ರನ ಮೇಲ್ಮೈನ ಮೊದಲ ಚಿತ್ರಗಳನ್ನು ಭೂಮಿಗೆ ಕಳುಹಿಸಿದೆ. ಶಕ್ತಿಯುತ ಎಕ್ಸ್-ರೇ ಬಾಹ್ಯಾಕಾಶ ದೂರದರ್ಶಕವಾದ ಎಕ್ಸ್ಆರ್ಐಎಸ್ಎಂ (XRISM) ನೊಂದಿಗೆ ಸೆಪ್ಟೆಂಬರ್ 6ರಂದು 2.7 ಮೀಟರ್ ಉದ್ದದ ಸ್ಲಿಮ್ ನೌಕೆಯನ್ನು ಉಡಾವಣೆ ಮಾಡಲಾಗಿತ್ತು.
ಇದು ಕ್ರಿಸ್ಮಸ್ ದಿನದಂದು ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿತು ಮತ್ತು ಜನವರಿ 20, 2024ರಂದು ದೇಶದ ಮೊದಲ ಚಂದ್ರನ ಮೇಲೆ ಲ್ಯಾಂಡಿಂಗ್ಗೆ ವೇದಿಕೆಯನ್ನು ಯಶಸ್ವಿಯಾಗಿ ಸಜ್ಜುಗೊಳಿಸಿತು ಎಂದು ಸಂಸ್ಥೆ ತಿಳಿಸಿದೆ.
-
SLIMは16時51分にメインエンジン噴射を正常に終了し、月周回軌道投入に成功しました!
— 小型月着陸実証機SLIM (@SLIM_JAXA) December 25, 2023 " class="align-text-top noRightClick twitterSection" data="
以下月近傍のSLIMから送られてきた画像です。
#SLIM #JAXA #たのしむーん pic.twitter.com/TeuB8OD3LF
">SLIMは16時51分にメインエンジン噴射を正常に終了し、月周回軌道投入に成功しました!
— 小型月着陸実証機SLIM (@SLIM_JAXA) December 25, 2023
以下月近傍のSLIMから送られてきた画像です。
#SLIM #JAXA #たのしむーん pic.twitter.com/TeuB8OD3LFSLIMは16時51分にメインエンジン噴射を正常に終了し、月周回軌道投入に成功しました!
— 小型月着陸実証機SLIM (@SLIM_JAXA) December 25, 2023
以下月近傍のSLIMから送られてきた画像です。
#SLIM #JAXA #たのしむーん pic.twitter.com/TeuB8OD3LF
ಎಕ್ಸ್‌ನಲ್ಲಿ ಜಾಕ್ಸಾ ಹಂಚಿಕೊಂಡಿರುವ ಚಂದ್ರನ ಚಿತ್ರವು ಕಪ್ಪು-ಬಿಳುಪು ವರ್ಣಗಳಲ್ಲಿದ್ದು ಚಂದ್ರನ ಮೇಲಿನ ಕುಳಿಗಳನ್ನು ತೋರಿಸುತ್ತದೆ. ಜಪಾನ್ ಸಮಯ ಡಿಸೆಂಬರ್ 25ರ ಸಂಜೆ 4:51ಕ್ಕೆ ಬಾಹ್ಯಾಕಾಶ ನೌಕೆಯು ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ತಲುಪಿದ ನಂತರ ಅದು ಈ ಚಿತ್ರಗಳನ್ನು ಸೆರೆ ಹಿಡಿದಿದೆ. "ಸ್ಲಿಮ್ 16:51ಕ್ಕೆ ಮುಖ್ಯ ಎಂಜಿನ್ ಇಂಜೆಕ್ಷನ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು ಮತ್ತು ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿತು! ಸ್ಲಿಮ್ ಕಳುಹಿಸಿದ ಚಂದ್ರನ ಮೇಲಿನ ಚಿತ್ರ ಇಲ್ಲಿದೆ ನೋಡಿ" ಎಂದು ಜಾಕ್ಸಾ ಅಧಿಕಾರಿಗಳು ಎಕ್ಸ್‌ನಲ್ಲಿ ಬರೆದಿದ್ದಾರೆ.
ಒಂದು ವೇಳೆ ಜಪಾನ್ ಚಂದ್ರನ ಮೇಲೆ ಲ್ಯಾಂಡ್ ಮಾಡಲು ಯಶಸ್ವಿಯಾದರೆ ರಷ್ಯಾ, ಅಮೆರಿಕ, ಚೀನಾ ಮತ್ತು ಭಾರತದ ನಂತರ ಚಂದ್ರನ ಮೇಲೆ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಐದನೇ ದೇಶವಾಗಲಿದೆ.
ಚಂದ್ರನ ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಸಂಪರ್ಕಿಸುವ ಅಂಡಾಕಾರದ ಚಂದ್ರನ ಕಕ್ಷೆಗೆ ಸುಮಾರು 6.4 ಗಂಟೆಗಳ ಅವಧಿಯೊಂದಿಗೆ ಮತ್ತು ಚಂದ್ರನಿಗೆ ಹತ್ತಿರದ ಬಿಂದುವಿನಲ್ಲಿ (ಪೆರಿಲುನ್) ಸುಮಾರು 600 ಕಿ.ಮೀ ಎತ್ತರದಲ್ಲಿ ಮತ್ತು ಚಂದ್ರನಿಂದ (ಅಪೊಲುನ್) 4,000 ಕಿ.ಮೀ ಎತ್ತರವನ್ನು ಸಂಪರ್ಕಿಸುವ ಅಂಡಾಕಾರದ ಚಂದ್ರನ ಕಕ್ಷೆಗೆ ನೌಕೆಯನ್ನು ಸೇರಿಸಲಾಗುವುದು ಎಂದು ಜಾಕ್ಸಾ ಹೇಳಿದೆ. ಕಕ್ಷೆಯ ಬದಲಾವಣೆಯು ಯೋಜಿಸಿದಂತೆ ಮುಂದುವರಿದಿದೆ ಮತ್ತು ಬಾಹ್ಯಾಕಾಶ ನೌಕೆ ಪ್ರಸ್ತುತ ಸಾಮಾನ್ಯ ಸ್ಥಿತಿಯಲ್ಲಿದೆ.
"ಇಂದಿನಿಂದ 2024ರ ಜನವರಿ ಮಧ್ಯದವರೆಗೆ, ಅಪೊಲುನ್ ಬಿಂದುವನ್ನು ಇಳಿಸಲಾಗುವುದು ಮತ್ತು ಕಕ್ಷೆಯನ್ನು ಸುಮಾರು 600 ಕಿ.ಮೀ ಎತ್ತರದಲ್ಲಿ ವೃತ್ತಾಕಾರದ ಕಕ್ಷೆಗೆ ಸರಿಹೊಂದಿಸಲಾಗುವುದು. ನಂತರ ಪೆರಿಲುನ್ ಪಾಯಿಂಟ್ ಕಡಿಮೆಯಾಗುತ್ತದೆ ಮತ್ತು ಲ್ಯಾಂಡಿಂಗ್ಗೆ ಸಿದ್ಧತೆಗಳು ಪ್ರಾರಂಭವಾಗುತ್ತವೆ" ಎಂದು ಜಾಕ್ಸಾ ತಿಳಿಸಿದೆ.
ಜನವರಿ 19ರಂದು, ಪೆರಿಲುನ್ ಪಾಯಿಂಟ್ ಅನ್ನು 15 ಕಿ.ಮೀ ಎತ್ತರಕ್ಕೆ ಇಳಿಸಲಾಗುವುದು ಮತ್ತು ಜನವರಿ 20ರಂದು ಬೆಳಿಗ್ಗೆ 0:00 ಗಂಟೆಗೆ (ಜೆಎಸ್ಟಿ) ಚಂದ್ರನ ಕಡೆಗೆ ಇಳಿಯುವಿಕೆ ಪ್ರಾರಂಭವಾಗುತ್ತದೆ. ಜನವರಿ 20 ರಂದು ಬೆಳಿಗ್ಗೆ 0:20ಕ್ಕೆ (ಜೆಎಸ್ಟಿ) ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಸಮಯ ನಿಗದಿಪಡಿಸಲಾಗಿದೆ. ಈ ಸಮಯದಲ್ಲಿ ಒಂದು ವೇಳೆ ಲ್ಯಾಂಡಿಂಗ್ ಸಾಧ್ಯವಾಗದಿದ್ದರೆ 2024ರ ಫೆಬ್ರವರಿ 16ರಂದು ಮುಂದಿನ ಪ್ರಯತ್ನ ನಡೆಯಲಿದೆ.
ಇದನ್ನೂ ಓದಿ: ಐಟಿ ವಲಯದ ನೇಮಕಾತಿ ಶೇ 8 ರಿಂದ 10ರಷ್ಟು ಹೆಚ್ಚಳ ಸಾಧ್ಯತೆ: ವರದಿ