ETV Bharat / science-and-technology

ಗೌಪ್ಯತೆ ಅಪಾಯ; OpenAIಗೆ ಭಾರೀ ದಂಡದ ಎಚ್ಚರಿಗೆ ನೀಡಿದ ಇಟಲಿ - ಸಾಮರ್ಥ್ಯದ ಜೊತೆಗೆ ಅಪಾಯ

ಚಾಟ್​ ಜಿಪಿಟಿ ಯುರೋಪಿಯನ್​ ಯುನಿಯನ್​ನ ಸಾಮಾನ್ಯ ಡೇಟಾ ರಕ್ಷಣೆ ನಿಯಂತ್ರಣ ನಿಯಮ ಉಲ್ಲಂಘಿಸುತ್ತಿದೆ ಎಂದು ಇಟಲಿ ಓಪನ್​ ಎಐಗೆ ಎಚ್ಚರಿಕೆ ನೀಡಿದೆ

Italy warned OpenAI For risk apprehension in data processing

author img

By

Published : Apr 1, 2023, 4:25 PM IST

ನವದೆಹಲಿ: ಕೃತಕ ಬುದ್ಧಿಮತ್ತೆಯ ಚಾಟ್​ಜಿಪಿಟಿ ಇದೀಗ ಎಲ್ಲೆಡೆ ಜನಪ್ರಿಯವಾಗಿದೆ. ಈ ಓಪನ್​ಎಐ ಬಳಕೆಯ ಸಾಮರ್ಥ್ಯದ ಜೊತೆಗೆ ಅಪಾಯದ ಕುರಿತು ಈಗಾಗಲೇ ಹಲವು ಚರ್ಚೆಗಳು ನಡೆಯುತ್ತಿದೆ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿನ ಇದರ ಬಳಕೆ ಮೂಲಕ ವಿದ್ಯಾರ್ಥಿಗಳ ಬುದ್ದಿ ಸಾಮರ್ಥ್ಯ ಕುಗ್ಗಿಸುವ ಕಾರ್ಯ ನಡೆಯಲಾಗುತ್ತಿದೆ ಎಂಬ ಆಪಾದನೆ ಕೇಳಿ ಬಂದಿದೆ. ಇದರಿಂದ ಸಾಮಾಜಿಕ ಗಂಭೀರ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನು ಈಗಾಗಲೇ ನೀಡಲಾಗಿದೆ. ಜೊತೆಗೆ ಮಾಹಿತಿ ಸಂಗ್ರಹಣೆಗಾಗಿ ಈ ಚಾಟ್​ಜಿಪಿಟಿ ಗೌಪತ್ಯೆಯನ್ನು ಉಲ್ಲಂಘಿಸುವ ಸಾಧ್ಯತೆ ಇದೆ ಎಂಬ ಆತಂಕ ಕೂಡ ಎದುರಾಗಿದೆ. ಈ ಹಿನ್ನಲೆ ಈ ಚಾಟ್​ಜಿಪಿಟಿ ವಿರುದ್ಧ ಕಠಿಣ ಕ್ರಮಕ್ಕೆ ಇಟಲಿ ಮುಂದಾಗಿದೆ.

ಇಟಾಲಿ ಬಳಕೆದಾರರ ದತ್ತಾಂಶ ಸಂಗ್ರಹ ಪ್ರಕ್ರಿಯೆಯನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಮೈಕ್ರೋಸಾಫ್ಟ್​ ಒಡೆತನದ ಓಪನ್​ಎಐ (OpenAI)ಗೆ ಇಟಾಲಿ ನಿಯಂತ್ರಣ ಸೂಚನೆ ನೀಡಿದೆ. ಜನರ ಗೌಪತ್ಯೆ ಹಿತದೃಷ್ಟಿಯಿಂದಾಗಿ ಈ ಕ್ರಮಕ್ಕೆ ಮುಂದಾಗಲಾಗಿದೆ ಎನ್ನಲಾಗಿದೆ. ಈ ಆದೇಶ ಕುರಿತು ತಿಳಿಸಿರುವ ಇಟಾಲಿಯನ್​ ನಿಯಂತ್ರಕ ಗರನ್ಟೆ, ಚಾಟ್​ ಜಿಪಿಟಿ ಯುರೋಪಿಯನ್​ ಯುನಿಯನ್​ನ ಸಾಮಾನ್ಯ ಡೇಟಾ ರಕ್ಷಣೆ ನಿಯಂತ್ರಣ (ಜಿಡಿಪಿಆರ್​)ಯನ್ನು ಉಲ್ಲಂಘಿಸುತ್ತಿದೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುವುದು ಎಂದಿದ್ದಾರೆ.

ಇನ್ನು ಚಾಟ್​ ಜಿಪಿಟಿ ಅನುಸರಿಸುತ್ತಿರುವ ನಿಯಮ ಮತ್ತು ಜಾರಿಗೊಳಿಸಲಾದ ಕ್ರಮಗಳ ಕುರಿತು 20 ದಿನಗಳ ಒಳಗಾಗಿ ಒಪನ್​ಎಐ ಇಟಾಲಿಯನ್ ನಿಯಂತ್ರಕರಿಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ 20 ಮಿಲಿಯನ್ ಯುರೋಗಳಷ್ಟು ದಂಡ ಅಥವಾ ಓಪನ್​ಎಐ ಒಟ್ಟು ವಿಶ್ವಾದ್ಯಂತ ವಾರ್ಷಿಕ ವಹಿವಾಟಿನ ಶೇಕಡಾ 4 ರಷ್ಟು ದಂಡವನ್ನು ವಿಧಿಸಬಹುದು ಎಂಬ ಎಚ್ಚರಿಕೆಯನ್ನು ನೀಡಿದೆ.

ಸಕಲ ಮಾಹಿತಿಯನ್ನು ಬಳಕೆದಾರರಿಗೆ ಒದಗಿಸುವ ಚಾಟ್​ ಜಿಪಿಟಿ ಗೌಪ್ಯತೆ ಕಾನೂನುಗಳ ಉಲ್ಲಂಘನೆಯಲ್ಲಿ ದತ್ತಾಂಶ ಪ್ರಕ್ರಿಯೆಗೊಳಿಸಲು ಯಾವುದೇ ನಿಯಮ ಹೊಂದಿಲ್ಲ. ಈ ಹಿನ್ನಲೆ ಇಟಾಲಿಯನ್ ಎಸ್​ಎ ಪ್ಲಾಟ್‌ಫಾರ್ಮ್ ಅನ್ನು ಅಭಿವೃದ್ಧಿಪಡಿಸುವ ಮತ್ತು ನಿರ್ವಹಿಸುವ ಮೂಲಕ ಒಪನ್​ಎಐಗೆ ಇಟಾಲಿಯನ್ ಬಳಕೆದಾರರ ಡೇಟಾದ ಪ್ರಕ್ರಿಯೆಗೆ ತಾತ್ಕಾಲಿಕ ಮಿತಿಯನ್ನು ವಿಧಿಸಿದೆ. ಪ್ರಕರಣದ ವಿಚಾರಣೆಯನ್ನು ಸಹ ಪ್ರಾರಂಭಿಸಲಾಗಿದೆ ಎಂದು ನಿಯಂತ್ರಕ ಗಮನಿಸಿದರು.

ಚಾಟ್​ಜಿಪಿಟಿ ಸೃಷ್ಟಿಕರ್ತನಾಗಿರುವ ಓಪನ್​ಎಐ, ಕಳೆದ ತಿಂಗಳು ಕೆಲವು ಬಳಕೆದಾರರ ಪಾವತಿ ಮಾಹಿತಿಯು ದೋಷದ ಕಾರಣದಿಂದಾಗಿ ಚಾಟ್‌ಜಿಪಿಟಿಯನ್ನು ಆಫ್‌ಲೈನ್‌ನಲ್ಲಿ ಪ್ರಕಟಗೊಂಡಿತು. ಅಲ್ಲದೇ, ಯುರೋಪಿಯನ್​ ಯುನಿಯನ್​ನಲ್ಲಿ​ ಯಾವುದೇ ಕಾನೂನು ಘಟಕವನ್ನು ಒಪನ್​ಎಐ ಹೊಂದಿಲ್ಲ. ಈ ಹಿನ್ನಲೆ ಜಿಡಿಪಿಆರ್​ ಇದೀಗ ಮಧ್ಯ ಪ್ರವೇಶಿಸಿದೆ. ಈ ಜಿಡಿಪಿಆರ್​​ ಸ್ಥಳೀಯ ಬಳಕೆದಾರರ ಡೇಟಾ ರಕ್ಷಣೆ ಅಪಾಯ ಕಂಡು ಬಂದರೆ ಪ್ರಾಧಿಕಾರ ಅದರ ಹಕ್ಕು ರಕ್ಷಣೆಗೆ ಮುಂದಾಗುತ್ತದೆ.

ಓಪನ್​ಎಐ ನ ಸೇವಾ ನಿಯಮಗಳ ಪ್ರಕಾರ 13 ವರ್ಷಕ್ಕಿಂತ ಮೇಲ್ಪಟ್ಟ ಬಳಕೆದಾರರಿಗೆ ಉದ್ದೇಶಿಸಲಾಗಿದೆ. ಆದರೆ, ಓಪನ್​ ಎಐ ಅನ್ನು ಎಲ್ಲಾ ವಯೋಮಾನದವರು ತಮ್ಮ ಅರಿವನ್ನು ಮೀರಿ ಬಳಕೆ ಮಾಡುತ್ತಿದ್ದಾರೆ. ಇದರಿಂದ ಅಪಾಯ ಇದೆ ಎನ್ನಲಾಗಿದೆ. ಆದರೆ, ಈ ಸಂಬಂಧ ಓಪನ್​ ಎಐ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ಚಾಟ್​ಜಿಪಿಟಿಯ ಶೈಕ್ಷಣಿಕ ಪಠ್ಯ ಎಐ ಸಾಧನದ ಮೂಲಕ ಪತ್ತೆ: ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.