ETV Bharat / science-and-technology

ಘನ ಮೋಟಾರ್​​ ಉನ್ನತಿಗೊಳಿಸಲು ಪ್ರಮುಖ ಸೌಲಭ್ಯಗಳ ಅನಾವರಣ ಮಾಡಿದ ಇಸ್ರೋ.. - ಸೋಮನಾಥ ಎಸ್

ಘನ ಮೋಟಾರು ಉನ್ನತಿಯೊಳಿಸಲು ಅಗತ್ಯವಾದ ಪ್ರಮುಖ ಸೌಲಭ್ಯಗಳ ಗುಂಪನ್ನು ಇಸ್ರೋ ಅಧ್ಯಕ್ಷರು, ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಉದ್ಘಾಟಿಸಿದರು.

ISRO
ಘನ ಮೋಟಾರು ಉನ್ನತಿಯೊಳಿಸಲು ಪ್ರಮುಖ ಸೌಲಭ್ಯಗಳ ಅನಾವರಣ ಮಾಡಿದ ಇಸ್ರೋ..
author img

By

Published : Jul 13, 2023, 5:08 PM IST

ಬೆಂಗಳೂರು: ಆಂಧ್ರಪ್ರದೇಶದ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ (ಎಸ್​ಡಿಎಸ್​ಸಿ- ಎಸ್​ಎಚ್​ಆರ್​) ಘನ ಮೋಟಾರು ಉನ್ನತಿಗೊಳಿಸಲು ಅಗತ್ಯವಾದ ಪ್ರಮುಖ ಸೌಲಭ್ಯಗಳ ಗುಂಪನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರು ಮತ್ತು ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿ ಸೋಮನಾಥ ಎಸ್. ಉದ್ಘಾಟಿಸಿದರು.

ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಮಾಹಿತಿ: ಪಿಎಸ್​ಎಲ್​ವಿ, ಜಿಎಲ್​ಎಲ್​ವಿ, ಎಲ್​ವಿಎಂ-3 ಹಾಗೂ ಎಲ್​ವಿ ಸೇರಿದಂತೆ ಇಸ್ರೋದ ಉಡಾವಣಾ ವಾಹನಗಳಿಗೆ ಘನ ಮೋಟಾರ್‌ಗಳು, ವಿಭಾಗಗಳ ಅಭಿವೃದ್ಧಿಗೆ ಎಸ್​ಡಿಎಸ್​ಸಿ - ಎಸ್​ಎಚ್​ಆರ್​ ಅಗತ್ಯವಿದೆ. ಇದು 29 ಪ್ರಾಥಮಿಕ ಮತ್ತು 16 ಸಹಾಯಕ ಸೌಲಭ್ಯಗಳನ್ನು ಸ್ಥಾಪಿಸುವ ಗುರಿ ಹೊಂದಿದೆ. ಅದರ ಸಾಮರ್ಥ್ಯದಲ್ಲಿ 2X ಸುಧಾರಣೆ ಸಾಧಿಸಲು ಶ್ರಮಿಸುವ ಘನ ಪ್ರೊಪೆಲ್ಲೆಂಟ್ ಸಂಸ್ಕರಣಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ" ಎಂದು ಬೆಂಗಳೂರು ಪ್ರಧಾನ ಕಚೇರಿಯ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಸಣ್ಣ ಉಪಗ್ರಹ ಉಡಾವಣಾ ವಾಹಕ: ಸಣ್ಣ ಉಪಗ್ರಹಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತನ್ನ ಸಣ್ಣ ಉಪಗ್ರಹ ಉಡಾವಣಾ ವಾಹಕವನ್ನು (ಎಸ್‌ಎಸ್‌ಎಲ್‌ವಿ) ಖಾಸಗಿ ವಲಯಕ್ಕೆ ವರ್ಗಾಯಿಸುವುದಾಗಿ ಇಸ್ರೋ ಸೋಮವಾರ ಪ್ರಕಟಿಸಿತ್ತು. ಎಸ್​ಎಸ್​ಎಲ್​ವಿಯು ಎರಡು ಅಭಿವೃದ್ಧಿ ರಾಕೆಟ್​​​ಗಳನ್ನು ಹೊಂದಿದೆ. 500 ಕೆಜಿ ತೂಕದ ಉಪಗ್ರಹಗಳನ್ನು ಕಡಿಮೆ - ಭೂಮಿಯ ಕಕ್ಷೆಯಲ್ಲಿ ಇರಿಸಲು ಬೇಡಿಕೆಯ ಸೇವೆಗಳನ್ನು ಒದಗಿಸಲು ಪ್ರಯತ್ನಿಸುತ್ತದೆ.

ವಾಣಿಜ್ಯ ಉಪಗ್ರಹ ಉಡಾವಣಾ ಸೇವೆ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಹಾಗೂ ಸಲಹಾ ಸಂಸ್ಥೆ ಇವೈ ಇಂಡಿಯಾ ಸಿದ್ಧಪಡಿಸಿದ ಇತ್ತೀಚಿನ ವರದಿಯು ವಾಣಿಜ್ಯ ಉಪಗ್ರಹ ಉಡಾವಣಾ ಸೇವೆಗಳು ಭಾರತದ ದೇಶೀಯ ಬಾಹ್ಯಾಕಾಶ ಉದ್ಯಮವು 2025ರ ವೇಳೆಗೆ ಆರ್ಥಿಕತೆಗೆ 13 ಶತಕೋಟಿ ಡಾಲರ್​ ಲಾಭವನ್ನು ತಂದು ಕೊಡಲಿದೆ. ಎಸ್​ಎಸ್​ಎಲ್​ವಿ ಉಪಗ್ರಹ ಉಡಾವಣೆಯ ನಂತರ ಇಸ್ರೋ ಅಭಿವೃದ್ಧಿಪಡಿಸಿದ ಆರನೇ ಉಡಾವಣಾ ವಾಹನವಾಗಿದೆ. ಎಸ್​ಎಲ್​ವಿ -3, ಸುಧಾರಿತ ಉಪಗ್ರಹ ಉಡಾವಣಾ ವಾಹಕ (ಎಎಸ್​ಎಲ್​ವಿ), ಪೋಲಾರ್ ಉಪಗ್ರಹ ಉಡಾವಣಾ ವಾಹಕ (ಪಿಎಸ್​ಎಲ್​ವಿ), ಜಿಯೋಸಿಂಕ್ರೊನಸ್ ಉಪಗ್ರಹ ಉಡಾವಣಾ ವಾಹಕ (GSLV) ಮತ್ತು ಲಾಂಚ್ ವೆಹಿಕಲ್ ಮಾರ್ಕ್-3 (ಎಲ್​ವಿಎಂ-3). ಎಸ್‌ಎಲ್‌ವಿ-3 ಹಾಗೂ ಎಎಸ್‌ಎಲ್‌ವಿ ಬಳಕೆ, ಉತ್ಪಾದನೆ ನಿಲ್ಲಿಸಲಾಗಿದೆ.

ವಿನಾಶಕಾರಿಯಲ್ಲದ ಪರೀಕ್ಷೆಗೆ ಮೀಸಲಾದ ಪ್ರಮುಖ ಸೌಲಭ್ಯ: ಈ ಉಪಕ್ರಮದ ಮೊದಲ ಹಂತವನ್ನು ಪ್ರಾರಂಭಿಸಿ, ಬುಧವಾರದ ಉದ್ಘಾಟನೆಯು ಘನ ಪ್ರೊಪೆಲ್ಲೆಂಟ್ ಮಿಶ್ರಣ ಹಾಗೂ ಯಂತ್ರದ ವಿಭಾಗಗಳ ವಿನಾಶಕಾರಿಯಲ್ಲದ ಪರೀಕ್ಷೆಗೆ ಮೀಸಲಾದ ಐದು ಪ್ರಮುಖ ಸೌಲಭ್ಯಗಳನ್ನು ಅನಾವರಣಗೊಳಿಸಿದೆ. ಎಸ್​ಡಿಎಸ್​ಸಿ- ಎಸ್​ಎಚ್​ಆರ್​ನ ನಿರ್ದೇಶಕ ಎ.ರಾಜರಾಜನ್ ಮತ್ತು ಇತರ ಇಸ್ರೋ ಕೇಂದ್ರಗಳು, ಘಟಕಗಳ ನಿರ್ದೇಶಕರು ಉಪಸ್ಥಿತರಿದ್ದರು.

ಇದನ್ನೂ ಓದಿ: India Moon Mission: ಚಂದ್ರಯಾನ 3 ಉಡಾವಣೆ ಕ್ಷಣಗಣನೆ ಆರಂಭ.. ನಭಕ್ಕೆ ಜಿಗಿಯಲು ಸಜ್ಜಾದ ಉಪಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.