ETV Bharat / science-and-technology

ಚಂದ್ರನನ್ನೇ ವಶಪಡಿಸಿಕೊಳ್ಳಲು ಡ್ರ್ಯಾಗನ್ ಪ್ಲಾನ್.. ಫಲಿಸುವುದೇ ಚೀನಾ ತಂತ್ರ? - ಚೀನಾ ಬಾಹ್ಯಾಕಾಶ ಸಾಮರ್ಥ್ಯ

1967 ರಲ್ಲಿ ಜಾರಿಗೆ ಬಂದ ಬಾಹ್ಯಾಕಾಶ ಒಪ್ಪಂದದ ಪ್ರಕಾರ, ಆಕಾಶಕಾಯಗಳ ಮೇಲೆ ಯಾವುದೇ ದೇಶಕ್ಕೆ ಹಕ್ಕುಗಳಿಲ್ಲ. ಚೀನಾ ಸೇರಿದಂತೆ 134 ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ. ಒಪ್ಪಂದದ III ನೇ ವಿಧಿಯು ಚಂದ್ರ ಮತ್ತು ಇತರ ಆಕಾಶಕಾಯಗಳನ್ನು ಸಾರ್ವಭೌಮತ್ವ, ಉದ್ಯೋಗ ಅಥವಾ ಇತರ ಯಾವುದೇ ವಿಧಾನಗಳ ಘೋಷಣೆಯ ಮೂಲಕ ಸ್ವಂತಕ್ಕಾಗಿ ಬಳಸಬಾರದು ಎಂದು ಸ್ಪಷ್ಟಪಡಿಸುತ್ತದೆ.

IS CHINA TRYING TO TAKE OVER THE MOON?
IS CHINA TRYING TO TAKE OVER THE MOON?
author img

By

Published : Jul 12, 2022, 6:22 PM IST

Updated : Jul 12, 2022, 6:36 PM IST

ಅಮೆರಿಕ ಮತ್ತು ಚೀನಾ ದೇಶಗಳ ಮಧ್ಯೆ ದಶಕಗಳಿಂದ ನಡೆಯುತ್ತಿರುವ ಶೀತಲ ಸಮರದ ಬಗ್ಗೆ ಜಗತ್ತಿಗೆ ತಿಳಿದಿದೆ. ಈಗ ಎರಡೂ ದೇಶಗಳು ಆಕಾಶದಲ್ಲಿನ ಜಾಗಕ್ಕಾಗಿ ಮೇಲಾಟ ಆರಂಭಿಸುವುದು ಹೊಸ ವಿಷಯ. ಎರಡೂ ದೇಶಗಳು ಪರಸ್ಪರರ ಬಾಹ್ಯಾಕಾಶ ಯಾತ್ರೆಗಳನ್ನು ಟೀಕೆ ಮಾಡುತ್ತಿವೆ.

ಈ ಮಧ್ಯೆ ನಾಸಾ ಅಡ್ಮಿನಿಸ್ಟ್ರೇಟರ್ ಬಿಲ್ ನೆಲ್ಸನ್ ನೀಡಿದ ಹೇಳಿಕೆಯೊಂದು ಭಾರಿ ಸಂಚಲನ ಸೃಷ್ಟಿಸಿದೆ. ಚಂದ್ರನನ್ನು ಆಕ್ರಮಿಸಿಕೊಳ್ಳುವ ಚೀನಾದ ಇರಾದೆಗಳ ಬಗ್ಗೆ ಜಗತ್ತು ಎಚ್ಚರಿಕೆಯಿಂದಿರಬೇಕೆಂದು ಬಿಲ್ ನೆಲ್ಸನ್ ಹೇಳಿದ್ದು ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಆದರೆ, ದೇಶವೊಂದು ಆಕಾಶಕಾಯಗಳ ಮೇಲೆ ನಿಯಂತ್ರಣ ಸಾಧಿಸುವುದು ಸಾಧ್ಯವೆ? ಅಂತಾರಾಷ್ಟ್ರೀಯ ಕಾನೂನುಗಳಲ್ಲಿ ಇದಕ್ಕೆ ಅವಕಾಶವಿದೆಯಾ? ಬಾಹ್ಯಾಕಾಶದಲ್ಲಿ ಯುದ್ಧ ಮಾಡಲು ಚೀನಾ ವ್ಯವಸ್ಥೆ ಮಾಡಿಕೊಳ್ಳುತ್ತಿದೆಯಾ?

ಇತ್ತೀಚೆಗೆ ಜರ್ಮನಿಯ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಿಲ್ ನೆಲ್ಸನ್ ಚೀನಾ ಬಗ್ಗೆ ಮಾತನಾಡಿದ್ದರು. ಚೀನಾ ತಕ್ಷಣವೇ ನಾಸಾ ಮುಖ್ಯಸ್ಥರ ಹೇಳಿಕೆಯನ್ನು ಖಂಡಿಸಿತ್ತು. ತಮ್ಮ ಚಂದ್ರಯಾನಗಳನ್ನು ಯಶಸ್ವಿಗೊಳಿಸಲು ಚೀನಾ ಮತ್ತು ಅಮೆರಿಕ ಶತಾಯ ಗತಾಯ ಪ್ರಯತ್ನಿಸುತ್ತಿವೆ. ಕಳೆದ ಹಲವಾರು ವರ್ಷಗಳಿಂದ ಚೀನಾ ಚಂದ್ರನೆಡೆಗೆ ವ್ಯೋಮನೌಕೆಗಳನ್ನು ಕಳುಹಿಸುತ್ತಲೇ ಇದೆ.

ಚಂದ್ರನ ಮೇಲೆ ನೆಲೆ ಅಥವಾ ವಸಾಹತು ಸ್ಥಾಪಿಸುವುದು ಹಾಗೂ ಚಂದ್ರನನ್ನು ಇಡಿಯಾಗಿ ವಶಪಡಿಸಿಕೊಳ್ಳುವುದು.. ಈ ಎರಡರ ಮಧ್ಯೆ ಬಹಳ ದೊಡ್ಡ ಅಂತರವಿದೆ. ಚೀನಾ ಅಥವಾ ಇನ್ನಾವುದೇ ದೇಶಕ್ಕೆ ಚಂದ್ರನನ್ನು ಆಕ್ರಮಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎನ್ನುತ್ತಾರೆ ತಜ್ಞರು. ಅಂತಾರಾಷ್ಟ್ರೀಯ ಕಾನೂನುಗಳು. ತಾಂತ್ರಿಕವಾಗಿ ಸೀಮಿತವಾದ ಸಾಮರ್ಥ್ಯ ಮತ್ತು ಹಣಕಾಸು ಮೂಲಗಳು ಹೀಗೆ ಹಲವಾರು ಅಡಚಣೆಗಳು ಇದಕ್ಕಿವೆ.

ಅಂತರಾಷ್ಟ್ರೀಯ ಬಾಹ್ಯಾಕಾಶ ಕಾನೂನು ಹೀಗೆ ಹೇಳುತ್ತೆ: 1967 ರಲ್ಲಿ ಜಾರಿಗೆ ಬಂದ ಬಾಹ್ಯಾಕಾಶ ಒಪ್ಪಂದದ ಪ್ರಕಾರ, ಆಕಾಶಕಾಯಗಳ ಮೇಲೆ ಯಾವುದೇ ದೇಶಕ್ಕೆ ಹಕ್ಕುಗಳಿಲ್ಲ. ಚೀನಾ ಸೇರಿದಂತೆ 134 ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ. ಒಪ್ಪಂದದ III ನೇ ವಿಧಿಯು ಚಂದ್ರ ಮತ್ತು ಇತರ ಆಕಾಶಕಾಯಗಳನ್ನು ಸಾರ್ವಭೌಮತ್ವ, ಉದ್ಯೋಗ ಅಥವಾ ಇತರ ಯಾವುದೇ ವಿಧಾನಗಳ ಘೋಷಣೆಯ ಮೂಲಕ ಸ್ವಂತಕ್ಕಾಗಿ ಬಳಸಬಾರದು ಎಂದು ಸ್ಪಷ್ಟಪಡಿಸುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ರಾಷ್ಟ್ರೀಯ ಅಗತ್ಯಗಳ ಹೆಸರಿನಲ್ಲಿ ಚಂದ್ರನ ಹಕ್ಕು ಪಡೆಯಲಾಗುವುದಿಲ್ಲ ಎಂದು ಈ ನಿಬಂಧನೆ ಹೇಳುತ್ತದೆ. ಆದ್ದರಿಂದ, ಚೀನಾ ಚಂದ್ರನ ಮೇಲೆ ಹಕ್ಕು ಸಾಧಿಸಲು ಸಾಧ್ಯವಿಲ್ಲ.

ಚೀನಾ ಮಾತ್ರವಲ್ಲ.. ಇತರ ದೇಶಗಳು ಸಹ..: ಚಂದ್ರನ ದಕ್ಷಿಣ ಧ್ರುವದಲ್ಲಿ ಚೀನಾ ಮಾತ್ರ ಇಳಿಯುತ್ತಿಲ್ಲ. ಅಮೆರಿಕ ನೇತೃತ್ವದ ಆರ್ಟೆಮಿಸ್ ಯೋಜನೆಯಲ್ಲಿ 20 ದೇಶಗಳು ಭಾಗವಹಿಸುತ್ತಿವೆ. ಇದರ ಮುಖ್ಯ ಉದ್ದೇಶ 2025 ರ ವೇಳೆಗೆ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಕಳುಹಿಸುವುದು.

ಈ ಯೋಜನೆಯು ಚಂದ್ರನ ಮೇಲ್ಮೈಯಲ್ಲಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಮತ್ತು ಗೇಟ್‌ವೇ ಎಂಬ ಬಾಹ್ಯಾಕಾಶ ನಿಲ್ದಾಣವನ್ನು ಕಕ್ಷೆಗೆ ಸೇರಿಸುವ ಗುರಿಯನ್ನು ಹೊಂದಿದೆ. ಭಾರತವು ಚಂದ್ರಯಾನ ಮಿಷನ್ ಬಗ್ಗೆ ವೇಗವಾಗಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಲವಾರು ಇತರ ದೇಶಗಳು ಸಹ ಚಂದ್ರ ಯಾತ್ರೆಗೆ ಸಜ್ಜಾಗುತ್ತಿವೆ. ಹೀಗಾಗಿ ಚಂದ್ರನ ಮೇಲೆ ಏಕಸ್ವಾಮ್ಯ ಹಕ್ಕುಗಳನ್ನು ಪ್ರತಿಪಾದಿಸಲು ಚೀನಾಗೆ ಅಸಾಧ್ಯ.

ಸ್ವಲ್ಪಸ್ವಲ್ಪವಾಗಿ ನಿಯಂತ್ರಣ ಪ್ಲಾನ್?: 3.9 ಕೋಟಿ ಚದರ ಕಿಲೋಮೀಟರ್‌ಗಳಷ್ಟು ಚಂದ್ರನ ಮೇಲ್ಮೈಯನ್ನು ನಿಯಂತ್ರಿಸುವುದು ಕಷ್ಟ. ಆದಾಗ್ಯೂ, ಚೀನಾ ಕೆಲವು ಆಯಕಟ್ಟಿನ ಪ್ರಮುಖ ಪ್ರದೇಶಗಳ ಮೇಲೆ ಅನಧಿಕೃತ ನಿಯಂತ್ರಣ ಸಾಧಿಸಬಹುದು. ಚಂದ್ರನ ಮೇಲಿನ ಪ್ರದೇಶಗಳನ್ನು ಕ್ರಮೇಣ ವಶಪಡಿಸಿಕೊಳ್ಳುವ ಸಲಾಮಿ ಸ್ಲೈಸಿಂಗ್ ತಂತ್ರವನ್ನು ಚೀನಾ ಅಳವಡಿಸಿಕೊಳ್ಳಬಹುದು ಎಂದು ಊಹಿಸಬಹುದು.

ಇಂಥ ಸ್ವಾಧೀನ ಸಣ್ಣ ಪ್ರಮಾಣದಲ್ಲಿರುವ ಕಾರಣ ಇತರ ದೇಶಗಳಿಂದ ಹೆಚ್ಚಿನ ಆಕ್ಷೇಪಣೆ ಬರದಿರಬಹುದು. ಆದರೆ, ಆ ಎಲ್ಲಾ ಸಣ್ಣ ಆಕ್ರಮಣಗಳು ಒಟ್ಟಾಗಿ ದೊಡ್ಡ ಭೂಪ್ರದೇಶದ ಭಾಗವಾಗಬಹುದು. ದಕ್ಷಿಣ ಮತ್ತು ಪೂರ್ವ ಚೀನಾ ಸಮುದ್ರಗಳಲ್ಲಿ ಚೀನಾ ಹಲವಾರು ವರ್ಷಗಳಿಂದ ಈ ತಂತ್ರವನ್ನು ಅನುಸರಿಸುತ್ತಿದೆ.

ಚೀನಾ ಆಸಕ್ತಿ ಏನು?: ಚೀನಾವು ಚಂದ್ರನ ಕುಳಿಗಳ ಮೇಲೆ ಗಮನ ಕೇಂದ್ರೀಕರಿಸಬಹುದು. ಕುಳಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೀರಿನ ಮಂಜುಗಡ್ಡೆಯಿದೆ. ಆ ಮಂಜುಗಡ್ಡೆಯ ಮೇಲೆ ನಿಯಂತ್ರಣ ಸಾಧಿಸುವುದರಿಂದ ಗಗನಯಾತ್ರಿಗಳಿಗೆ ಭೂಮಿಯಿಂದ ನೀರನ್ನು ಸಾಗಿಸುವ ಅಗತ್ಯವನ್ನು ನಿವಾರಣೆಯಾಗಬಹುದು. ಈ ಮಂಜುಗಡ್ಡೆಯಿಂದ ಆಮ್ಲಜನಕ ಮತ್ತು ಜಲಜನಕವನ್ನು ಉತ್ಪಾದಿಸಬಹುದು ಮತ್ತು ಅದನ್ನೇ ರಾಕೆಟ್ ಇಂಧನವಾಗಿ ಬಳಸಬಹುದು.

ಚೀನಾ ಅಷ್ಟು ಸಮರ್ಥವೇ?:ಚಂದ್ರನ ಆಯಕಟ್ಟಿನ ಪ್ರದೇಶಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ. ಇದು ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆ ಮತ್ತು ದೀರ್ಘಾವಧಿಯ ಕಾರ್ಯತಂತ್ರದ ಪ್ರಯತ್ನವನ್ನು ಒಳಗೊಂಡಿದೆ. ಇನ್ನು ಇದರ ಬಗ್ಗೆ ರಹಸ್ಯವಾಗಿ ಕಾರ್ಯಾಚರಣೆ ಕೈಗೊಳ್ಳುವುದು ಸಹ ಅಸಾಧ್ಯ. ಏಕೆಂದರೆ ಇಡೀ ವಿಶ್ವವೇ ನಿಮ್ಮನ್ನು ನೋಡುತ್ತಿರುತ್ತದೆ.

ಇತ್ತೀಚೆಗೆ ಚೀನಾ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರಿ ಹೂಡಿಕೆ ಮಾಡುತ್ತಿದೆ. 2021 ರಲ್ಲಿ, ಭೂಮಿಯ ಕಕ್ಷೆಯಲ್ಲಿ 55 ಬಾಹ್ಯಾಕಾಶ ಯಾತ್ರೆಗಳನ್ನು ಚೀನಾ ನಡೆಸಿದೆ. ಈ ಅವಧಿಯಲ್ಲಿ, ಅಮೆರಿಕ ಕೇವಲ 51 ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ನಡೆಸಿದೆ.

2021 ರಲ್ಲಿ ಅತಿ ಹೆಚ್ಚು ಅಂತರಿಕ್ಷ ನೌಕೆಗಳನ್ನು ಕಳುಹಿಸಿದ ಅಗ್ರ ಮೂರು ದೇಶಗಳಲ್ಲಿ ಚೀನಾ ಕೂಡ ಒಂದಾಗಿದೆ. ಚೀನಾದ ಸ್ಟಾರ್‌ನೆಟ್ ಸ್ಪೇಸ್ 12,992 ಉಪಗ್ರಹಗಳನ್ನು ಉಡಾವಣೆ ಮಾಡಲು ಯೋಜಿಸುತ್ತಿದೆ. ತಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣದ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ.

ಚಂದ್ರನ ಮೇಲೆ ಹೋಗಲು ಎಷ್ಟು ಹಣ ಬೇಕು?: ಚಂದ್ರನನ್ನು ತಲುಪುವುದು ಭಾರಿ ದುಬಾರಿಯ ವ್ಯವಹಾರವಾಗಿದೆ. 2020 ರಲ್ಲಿ ಬಾಹ್ಯಾಕಾಶ ಕಾರ್ಯಾಚರಣೆಗಳಿಗಾಗಿ ಚೀನಾದ ವೆಚ್ಚ 1300 ಕೋಟಿ ಯುಎಸ್ ಡಾಲರ್​ ಆಗಿತ್ತು. ಇದು ನಾಸಾದ ಬಜೆಟ್‌ನ ಅರ್ಧದಷ್ಟು. ಆದಾಗ್ಯೂ, ಚೀನಾ ತನ್ನ ಬಾಹ್ಯಾಕಾಶ ಬಜೆಟ್ ಅನ್ನು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 17.1 ರಷ್ಟು ಹೆಚ್ಚಿಸಿದೆ.

ಚೀನಾ ಬಳಿ ಅಗತ್ಯ ಸಂಪನ್ಮೂಲಗಳಿವೆಯೇ?: ಚೀನಾದ ಬಜೆಟ್ ಹಂಚಿಕೆಗಳನ್ನು ನೋಡಿದರೆ, ಚಂದ್ರನ ಮೇಲಿನ ಪ್ರಮುಖ ಪ್ರದೇಶಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅಗತ್ಯವಿರುವಷ್ಟು ತಾಂತ್ರಿಕ ಅಥವಾ ಆರ್ಥಿಕ ಸಂಪನ್ಮೂಲಗಳು ಅದರ ಬಳಿ ಇಲ್ಲ ಎಂಬುದು ಸ್ಪಷ್ಟವಾಗಿದೆ.

2019 ರಲ್ಲಿ, ಚೀನಾ ಚಂದ್ರನ ದೂರದ ಭಾಗದ ಭೂಮಿಗೆ ಮೇಲೆ ಮೊದಲ ಬಾರಿಗೆ ಇಳಿಯಿತು. 2026 ರ ವೇಳೆಗೆ, ರಷ್ಯಾದ ಸಹಯೋಗದೊಂದಿಗೆ ಚಂದ್ರನ ದಕ್ಷಿಣ ಧ್ರುವಕ್ಕೆ ಬಾಹ್ಯಾಕಾಶ ನೌಕೆಯನ್ನು ಉಡಾಯಿಸುವುದಾಗಿ ಚೀನಾ ಘೋಷಿಸಿದೆ. 2027 ರ ವೇಳೆಗೆ, ಆಕಾಶಕಾಯದಲ್ಲಿ ಶಾಶ್ವತ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸಲು ಮತ್ತು ಗಗನಯಾತ್ರಿಗಳನ್ನು ಕಳುಹಿಸುವ ಗುರಿಗಳನ್ನು ಚೀನಾ ಹೊಂದಿದೆ.

ಇದನ್ನು ಓದಿ:ಬಿಗ್‌ಬ್ಯಾಂಗ್‌ ನಂತರ ರೂಪುಗೊಂಡ ಆರಂಭಿಕ ನಕ್ಷತ್ರಪುಂಜಗಳ ಮೊಟ್ಟ ಮೊದಲ ಚಿತ್ರ!

Last Updated : Jul 12, 2022, 6:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.