ETV Bharat / science-and-technology

Apple iphone 14 ಬಿಡುಗಡೆಗೆ ದಿನಾಂಕ ಫಿಕ್ಸ್​, ಬೆಲೆಯಲ್ಲಿ ಹೆಚ್ಚಳ ಸಾಧ್ಯತೆ - iPhone 14 May Cost More

ಸೆಪ್ಟೆಂಬರ್ 7 ರಂದು Apple iphone 14 ಸರಣಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದರ ನಡುವೆ ಸಮೀಕ್ಷೆಯೊಂದನ್ನು ನಡೆಸಲಾಗಿದ್ದು, ಬೆಲೆ ಹೆಚ್ಚಳದ ನಡುವೆಯೂ ಬಳಕೆದಾರರು ಈ ಮೊಬೈಲ್​​ಗೆ ಅಪ್​ಗ್ರೇಡ್​ ಆಗಲು ಕಾತರದಿಂದ ಇದ್ದಾರಂತೆ.

Apple iphone 14 ಬಿಡುಗಡೆಗೆ ದಿನಾಂಕ ಫಿಕ್ಸ್
Apple iphone 14 ಬಿಡುಗಡೆಗೆ ದಿನಾಂಕ ಫಿಕ್ಸ್
author img

By

Published : Aug 25, 2022, 6:15 AM IST

ಸೆಪ್ಟೆಂಬರ್ 7 ರಂದು ಐಫೋನ್ 14 ಸರಣಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಹೊಸ ಸಮೀಕ್ಷೆಯ ಪ್ರಕಾರ ಸುಮಾರು 14 ಪ್ರತಿಶತದಷ್ಟು ಐಫೋನ್ ಬಳಕೆದಾರರು ಬೆಲೆ ಏರಿಕೆಯ ವರದಿಗಳ ಹೊರತಾಗಿಯೂ ಹೊಸ ಐಫೋನ್‌ಗಳಿಗೆ ಅಪ್‌ಗ್ರೇಡ್ ಮಾಡಲು ಯೋಜಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. savings.com ನ ಸಮೀಕ್ಷೆಯು ಈ ಸಂಖ್ಯೆಯು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ ಎಂದು ತಿಳಿಸಿದೆ.

ಅಸ್ತಿತ್ವದಲ್ಲಿರುವ ಐಫೋನ್ ಬಳಕೆದಾರರಲ್ಲಿ ಕೇವಲ 10 ಪ್ರತಿಶತ ಮಾತ್ರ iPhone 13 ಸರಣಿಗೆ ಅಪ್‌ಗ್ರೇಡ್ ಮಾಡಲು ಈ ಹಿಂದೆ ಯೋಜಿಸಿದ್ದರಂತೆ. ಹಣದುಬ್ಬರದ ಆರ್ಥಿಕ ಪ್ರಭಾವ ಮತ್ತು ಐಫೋನ್ ಬಳಕೆದಾರರು ತಮ್ಮ ಸಾಧನಗಳಿಗೆ ದೀರ್ಘಕಾಲದವರೆಗೆ ಅಂಟಿಕೊಳ್ಳುವ ವಿಶಿಷ್ಟ ಪ್ರವೃತ್ತಿಯನ್ನು ಗಮನಿಸಿಯೂ ಈ ನಿರ್ಧಾರಕ್ಕೆ ಬಂದಿರುವುದನ್ನು ಗಮನಿಸಿದರೆ ಆಶ್ಚರ್ಯವಾಗಬಹುದು.

savings.com ನ ಸಮೀಕ್ಷೆಯು ಸುಮಾರು 1,500 ಐಫೋನ್ ಬಳಕೆದಾರರ ಬಳಿ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಈ ಮೂಲಕ ಅಸ್ತಿತ್ವದಲ್ಲಿರುವ ಐಫೋನ್ ಬಳಕೆದಾರರಲ್ಲಿ iPhone 14ನ್ನು ಮೊದಲಿಗಿಂತ ಹೆಚ್ಚು ಜನರು ತೆಗೆದುಕೊಳ್ಳುತ್ತಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಅದಾಗ್ಯೂ 9to5Mac ಸೂಚಿಸಿದಂತೆ, ಮಾದರಿ ಗಾತ್ರವು ತುಂಬಾ ಚಿಕ್ಕದಾಗಿದ್ದು, ಸಮೀಕ್ಷೆಯು ಸ್ವತಃ ಹೇಳಿಕೊಳ್ಳುವಂತೆ ಯಾವುದೇ ನಿಖರ ಮಾಹಿತಿ ಸೂಚಿಸಿಲ್ಲ.

Apple iphone 14
Apple iphone 14

ಭಾರತದಲ್ಲಿ ಹೆಚ್ಚಾದ ಆಪಲ್​ ಪ್ರಿಯರು: ಇನ್ನು ಭಾರತದಂತಹ ಮಾರುಕಟ್ಟೆಗಳಲ್ಲಿ ಇದು ವಿಶೇಷವಾಗಿ ಗಮನಾರ್ಹವಾಗಿದೆ. ಐಫೋನ್‌ನ ಗಣನೀಯ ಬಳಕೆ ಹಾಗೂ ಖರೀದಿ ಉತ್ತರ ಅಮೆರಿಕ ಮತ್ತು ಯುರೋಪ್‌ನಂತಹ ಮಾರುಕಟ್ಟೆಗಳಿಗಿಂತ ಇಲ್ಲಿ ಹೆಚ್ಚಾಗಿದೆ. ಹೆಚ್ಚು ಕಾಲ ಸಾಧನಕ್ಕೆ ಅಂಟಿಕೊಳ್ಳಲು ಖರೀದಿದಾರರನ್ನು ಇಲ್ಲಿ ಹೆಚ್ಚೆಚ್ಚಾಗಿ ಪ್ರೋತ್ಸಾಹಿಸುತ್ತದೆ.

ಸಮೀಕ್ಷೆಯು ಕೆಲವು ಇತರ ಆಕರ್ಷಕ ಅಂಶಗಳನ್ನು ಕಂಡು ಕೊಂಡಿದೆ. ಮೂರು ಸಂಭಾವ್ಯ ಖರೀದಿದಾರರಲ್ಲಿ ಇಬ್ಬರು ಅಸ್ತಿತ್ವದಲ್ಲಿರುವ ಐಫೋನ್ ಸಾಧನ ಹೊಂದಿದ್ದಾರೆ. ಅದರಲ್ಲೂ ಎರಡು ವರ್ಷಕ್ಕಿಂತ ಕಡಿಮೆ ಹಳೆಯ ಸಾಧನ ಇವರ ಬಳಿಯಲ್ಲಿವೆ. ವೇಗದ ಪ್ರೊಸೆಸರ್‌ಗಳು, ಹೆಚ್ಚಿನ ಸಾಧನ ಸಂಗ್ರಹಣೆ ಮತ್ತು ಉತ್ತಮ ಕ್ಯಾಮೆರಾವನ್ನು iPhone 14 ಸರಣಿಗೆ ಅಪ್‌ಗ್ರೇಡ್ ಮಾಡಲು ಮುಖ್ಯ ಕಾರಣಗಳನ್ನು ಉಲ್ಲೇಖಿಸಲಾಗಿದೆ.

ಇನ್ನು ಸಮೀಕ್ಷೆಯಲ್ಲಿ ಅಪ್‌ಗ್ರೇಡ್ ಮಾಡುವುದಿಲ್ಲ ಎಂದು ಹೇಳಿದವರು ನೀಡಿದ ಕಾರಣ ಎಂದರೆ ಅವರ ಪ್ರಸ್ತುತ ಐಫೋನ್ ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದು. ಜೊತೆಗೆ ಐಫೋನ್ 14 ಗೆ ಅಪ್‌ಗ್ರೇಡ್ ಮಾಡಲು ನಿರೀಕ್ಷಿತ ವೆಚ್ಚವೂ ಸಹ ಕಾರಣ ಎಂದು ತಿಳಿಸಿದ್ದಾರೆ.

Apple iphone 14
Apple iphone 14

ಜಾಗತಿಕ ಬಿಡುಗಡೆ: Apple iPhone 14 ಸರಣಿಯು ಸೆಪ್ಟೆಂಬರ್ 7 ರಂದು ಜಾಗತಿಕವಾಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ. Apple iPhone 14 mini ಬದಲಿಗೆ iPhone 14 Max ಮಾದರಿಯನ್ನು ಈ ವರ್ಷ ಪರಿಚಯಿಸಬಹುದೆಂದು ವಿವಿಧ ವದಂತಿಗಳು ಹರಿದಾಡಿವೆ. ಇದು ಸಾಮಾನ್ಯವಾಗಿ ಹೆಚ್ಚು ಸುಧಾರಿತ ಕ್ಯಾಮೆರಾ ಸಿಸ್ಟಮ್ ಅಥವಾ ದೊಡ್ಡ ಡಿಸ್ಪ್ಲೆ ಆಯ್ಕೆಯನ್ನು ನೀಡುತ್ತದೆ. ಹಾಗೆ ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾದರಿಗಳನ್ನು ಸಂಸ್ಥೆ ನೀಡಲಿದೆ ಎನ್ನಲಾಗಿದೆ.

ಐಫೋನ್ 14 ಮಿನಿಯ ಪ್ರವೇಶ ಬೆಲೆಯು ಗಣನೀಯವಾಗಿ ಹೆಚ್ಚಾಗುತ್ತದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಆಪಲ್ ಮುಂದಿನ ಪೀಳಿಗೆಯ ಐಪ್ಯಾಡ್ ಮತ್ತು ವಾಚ್ ಸಾಧನಗಳನ್ನು ಇದೇ ಸಮಾರಂಭದಲ್ಲಿ ಬಿಡುಗಡೆ ಮಾಡಬಹುದು ಎನ್ನುವ ಮಾತು ಸಹ ಕೇಳಿಬರುತ್ತಿದೆ.

ಇದನ್ನೂ ಓದಿ: ಭಾರತದಲ್ಲಿ ಬಿಡುಗಡೆಗೆ ಸಿದ್ಧವಾದ Redmi Note 11SE : ಇದರ ವೈಶಿಷ್ಟ್ಯಗಳನ್ನು ತಿಳಿಯಿರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.