ಮೊಬೈಲ್ಗಳಲ್ಲಿ ಉಪಗ್ರಹ ಆಧಾರಿತ ವ್ಯವಸ್ಥೆ(ಎಸ್ಒಎಸ್) ಅಳವಡಿಕೆ ಎಷ್ಟು ಉಪಯುಕ್ತ ಎಂಬುದು ಅಮೆರಿಕದಲ್ಲಿ ಸಾಬೀತಾಗಿದೆ. ಆ್ಯಪಲ್ ಐಫೋನ್ 14 ಮೊಬೈಲ್ನಲ್ಲಿ ಇರುವ ಉಪಗ್ರಹ ವ್ಯವಸ್ಥೆ ಬಳಸಿಕೊಂಡ ವ್ಯಕ್ತಿಯೊಬ್ಬ ಪ್ರಾಣ ಉಳಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಹಿಮಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ ವ್ಯಕ್ತಿಯೊಬ್ಬ ಅಲ್ಲಿಯೇ ಸಿಲುಕಿದ್ದಾನೆ. ಮೊಬೈಲ್ನಲ್ಲಿ ಯಾವುದೇ ನೆಟ್ವರ್ಕ್, ಇಂಟರ್ನೆಟ್ ಇರಲಿಲ್ಲ. ಸಂಪರ್ಕ ಸಾಧಿಸಲು ಎಲ್ಲ ಅವಕಾಶಗಳು ಮುಚ್ಚಿಹೋದಾಗ ನೆನಪಾಗಿದ್ದೇ ಎಸ್ಒಎಸ್ ವ್ಯವಸ್ಥೆ. ತನ್ನಲ್ಲಿದ್ದ ಆ್ಯಪಲ್ ಐಫೋನ್ 14 ಮೂಲಕ ಉಪಗ್ರಹ ಸಹಾಯದಿಂದ ಕಾಲ್ ಮಾಡಿ ತಾನಿರುವ ಸ್ಥಳದ ಬಗ್ಗೆ ಮಾಹಿತಿ ರವಾನಿಸಿದ್ದಾನೆ.
ಇದರ ಸಂಕೇತಗಳನ್ನು ಪಡೆದ ಆ್ಯಪಲ್ ಸಂಸ್ಥೆಯ ಸ್ವಯಂಸೇವಕರು ವ್ಯಕ್ತಿ ಸಿಲುಕಿದ್ದ ಜಾಗವನ್ನು ಎಸ್ಒಎಸ್ ನೆರವಿನಿಂದ ಪತ್ತೆ ಮಾಡಿದ್ದಾರೆ. ಬಳಿಕ ಹಿಮದಲ್ಲಿ ಸಿಲುಕಿದ್ದಾತನನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಗ್ರಾಮೀಣ ಮತ್ತು ಸಂಕೀರ್ಣ ಪ್ರದೇಶಗಳಲ್ಲಿ ನೆಟ್ವರ್ಕ್ ಇಲ್ಲದೇ ಪರದಾಡುವ ಜನರಿಗೆ ಉಪಗ್ರಹ ಆಧಾರಿತ ಸಂಪರ್ಕ ವ್ಯವಸ್ಥೆಯು ನೆರವಾಗಲಿದೆ ಎಂಬುದು ಇದಕ್ಕೆ ಸಾಕ್ಷಿಯಾಗಿದೆ.
ಆ್ಯಪಲ್ ಸಂಸ್ಥೆ ಈಗಾಗಲೇ ಈ ಅತ್ಯಾಧುನಿಕ ವ್ಯವಸ್ಥೆಯನ್ನು ತನ್ನ ಐಫೋನ್ 14 ರಲ್ಲಿ ಅಳವಡಿಸಿದೆ. ಇದಲ್ಲದೇ, ತನ್ನ ಮುಂದಿನ ಸ್ಮಾರ್ಟ್ಫೋನ್ಗಳ ಮಾದರಿಯಲ್ಲಿ ಎಸ್ಒಎಸ್ ಅಳವಡಿಸಲು ಇದು ಪುಷ್ಟಿ ನೀಡಿದೆ. ಕಂಪನಿ ಈಗಾಗಲೇ ಎಸ್ಒಎಸ್ಗಾಗಿ 450 ಮಿನಿಯಲ್ ಡಾಲರ್ ಹೂಡಿಕೆ ಮಾಡಿದೆ.