ನವದೆಹಲಿ: ಹಲವು ಇನ್‌ಸ್ಟಾಗ್ರಾಮ್ ಬಳಕೆದಾರರು ತಮ್ಮ ಸ್ಟೋರೀಸ್ ಐಕಾನ್ ಇದ್ದಕ್ಕಿದ್ದಂತೆ ದೊಡ್ಡದಾಗಿದೆ ಎಂದು ವರದಿ ಮಾಡುತ್ತಿದ್ದಾರೆ. ಅಪ್ಲಿಕೇಶನ್‌ನ ಸ್ಟೋರಿ ಐಕಾನ್ ಇದ್ದಕ್ಕಿದ್ದಂತೆ ದೊಡ್ಡದಾಗಿದ್ದರಿಂದ ಹಲವಾರು ಬಳಕೆದಾರರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೆಟಾ ಒಡೆತನದ Instagram ಐಕಾನ್ ನವೀಕರಿಸಿರುವ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ.
ಒಬ್ಬ ಬಳಕೆದಾರರ ಈ ಬಗ್ಗೆ ಟ್ವೀಟ್ ಮಾಡಿ, ಪ್ರತಿಬಾರಿಯೂ ಇನ್ಸ್ಟಾಗ್ರಾಂ ಅಪ್ಲಿಕೇಷನ್ ಅಪ್ಡೇಟ್ ಮಾಡಿದಾಗಲೂ ಸ್ಟೋರಿಯ ಐಕಾನ್‌ಗಳು ಏಕೆ ಹೀಗೆ ದೊಡ್ಡದಾಗಿ ಕಾಣುತ್ತದೆ ಎಂಬುದು ತಿಳಿಯುತ್ತಿಲ್ಲ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ಟ್ವಿಟರ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ ’ಪ್ರತಿ ಬಾರಿ Instagram ಅಪ್ಲಿಕೇಶನ್ ನವೀಕರಿಸಿದಾಗ ಅದು ಕೆಟ್ಟ ಅಪ್ಲಿಕೇಶನ್ ಆಗುತ್ತದೆ. ಕಥೆಯ ಐಕಾನ್ ಚಿಹ್ನೆಗಳು ಈಗ ಏಕೆ ದೊಡ್ಡದಾಗಿ ಗೋಚರಿಸುತ್ತವೆ? ಇನ್‌ಸ್ಟಾಗ್ರಾಮ್ ಸ್ಟೋರಿ ಐಕಾನ್‌ಗಳನ್ನು ಹೀಗೆ ದೊಡ್ಡು ಮಾಡಿದ್ದೀರೋ ದಯವಿಟ್ಟು ಅವುಗಳನ್ನು ಮತ್ತೆ ಚಿಕ್ಕದಾಗಿಸಿ ಬಳಕೆದಾರರಿಗೆ ಅನುಕೂಲ ಮಾಡಿಕೊಡಿ ಎಂದು ಹೇಳಿದ್ದಾರೆ.
ಹೀಗೆ ಬಳಕೆದಾರರು ತರಹೇವಾರಿ ಕಮೆಂಟ್ಗಳನ್ನು ಮಾಡುವ ಮೂಲಕ ಇನ್ಸ್ಟಾಗ್ರಾಂ ಹೊಸ ಫೀಚರ್ಸ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊಸ ಐಕಾನ್ ಗಾತ್ರದ ಬಗ್ಗೆ ಟ್ವಿಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಬಳಕೆದಾರರೊಬ್ಬರು, "ಇದು ನನಗೆ ಮಾತ್ರವೇ ಹೀಗಾಗಿದೆಯಾ ಅಥವಾ Instagram ನ ಎಲ್ಲ ಬಳಕೆದಾರರಿಗೂ ಸ್ಟೋರಿ ಐಕಾನ್ ಗಾತ್ರ ಹೆಚ್ಚಾಗಿದೆಯೋ?. ಇನ್ಸ್ಟಾಗ್ರಾಂ ಏನ್ ಐಕಾನ್ ಚೇಂಜ್ ಮಾಡಿದೆಯೋ ಅದು ತುಂಬಾ ಅಸಹ್ಯವಾಗಿ ಕಾಣುತ್ತಿದೆ. Instagram ನಮಗೆ ಅಗತ್ಯವಿಲ್ಲದ ಬದಲಾವಣೆಗಳನ್ನು ಏಕೆ ಮಾಡುತ್ತಿದೆ? ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೆಟಾ - ಮಾಲೀಕತ್ವದ Instagram ಮಾತ್ರ ಸ್ಟೋರಿ ಐಕಾನ್‌ನ ಗಾತ್ರದಲ್ಲಿನ ಬದಲಾವಣೆಯ ಕುರಿತು ಇನ್ನು ಯಾವುದೇ ಪ್ರತಿಕ್ರಿಯೆ ನೀಡಲು ಹೋಗಿಲ್ಲ. ಬದಲಾವಣೆಯು ಕೇವಲ ಗ್ಲಿಚ್ ಆಗಿರಬಹುದು ಅಥವಾ ಕಂಪನಿಯು ಹೊಸ ವಿನ್ಯಾಸವನ್ನು ಪರೀಕ್ಷಿಸುತ್ತಿರಬಹುದು. ಮೇ ತಿಂಗಳಲ್ಲಿ, Instagram ಒಂದು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡ ನಂತರ ಸ್ಟೋರಿ ಐಕಾನ್ ಗಾತ್ರ ಹೀಗೆ ದೊಡ್ಡದಾಗಿ ಕಂಡು ಬಂದಿತ್ತು. ಈ ಬಾರಿಯೂ ಹೀಗೆ ಆಗಿರಬಹುದು, ಇಲ್ಲವೇ ಪರೀಕ್ಷಾರ್ಥವಾಗಿ ನಡೆದಿರಬಹುದು, ಇಲ್ಲವೇ ತಾಂತ್ರಿಕ ತೊಂದರೆಯಿಂದಲೂ ಹೀಗೆ ಆಗಿರಬಹುದು. ಕಂಪನಿ ಈ ಬಗ್ಗೆ ಏನಾದರೂ ಸ್ಪಷ್ಟನೆ ನೀಡಿದಾಗ ಮಾತ್ರವೇ ಸತ್ಯ ಗೊತ್ತಾಗಬಹುದು.
ಇದನ್ನು ಓದಿ: ಬಹುನಿರೀಕ್ಷಿತ ಆ್ಯಪಲ್ ಮಿಕ್ಸ್ಡ್ ರಿಯಾಲಿಟಿ ಹೆಡ್‌ಸೆಟ್ ಅನಾವರಣ: ಅಬ್ಬಾ.. ಇದರ ಬೆಲೆ ಕೇಳಿದರೆ ನೀವೂ ದಂಗಾಗ್ತೀರಿ!