ETV Bharat / science-and-technology

ನಿರುಪಯಕ್ತ ಉಪಗ್ರಹವನ್ನು ಭೂಮಿಗೆ ಯಶಸ್ವಿಯಾಗಿ ಇಳಿಸಿದ ಇಸ್ರೋ! - satellite brought down successfully over Pacific

ನಿರುಪಯುಕ್ತ ಉಪಗ್ರಹವನ್ನು ಮರಳಿ ಭೂಕಕ್ಷೆಗೆ ತಂದು ಫೆಸಿಪಿಕ್​ ಸಾಗರದಲ್ಲಿ ಬೀಳಿಸಿ ಇಸ್ರೋ ಮಹತ್ವದ ಸಾಧನೆ ಮಾಡಿದೆ.

ಇಸ್ರೋ
ಇಸ್ರೋ
author img

By

Published : Mar 8, 2023, 10:46 AM IST

ಚೆನ್ನೈ (ತಮಿಳುನಾಡು): ಬಾಹ್ಯಾಕಾಶದಲ್ಲಿ ಉಪಗ್ರಹ ದಟ್ಟಣೆ, ತ್ಯಾಜ್ಯ ಹೆಚ್ಚಾಗಿರುವ ಮಧ್ಯೆಯೇ ಇಸ್ರೋ ಮಹತ್ವದ ಸಾಧನೆ ತೋರಿದೆ. ಬಾಹ್ಯಾಕಾಶದಲ್ಲಿನ ನಿರುಪಯುಕ್ತ ಉಪಗ್ರಹವೊಂದನ್ನು ಮರಳಿ ಭೂಕಕ್ಷೆಗೆ ತಂದು ಅದನ್ನು ಫೆಸಿಪಿಕ್​ ಸಾಗರದಲ್ಲಿ ಬೀಳಿಸುವಲ್ಲಿ ಯಶಸ್ವಿಯಾಗಿದೆ.

ಉಷ್ಣ ವಲಯದ ವಾತಾವರಣ ಮತ್ತು ಹವಾಮಾನ ಅಧ್ಯಯನ ಮಾಡಲು ಫ್ರೆಂಚ್ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಜೊತೆಗೂಡಿ 2011ರಲ್ಲಿ ಉಡಾಯಿಸಲಾದ ಉಪಗ್ರಹವಾದ ಮೇಘಾ ಟ್ರೋಪಿಕ್ಸ್-1 (ಎಂಟಿ-1) ಅನ್ನು ಯಶಸ್ವಿಯಾಗಿ ಕೆಳಗಿಳಿಸಲಾಗಿದೆ. ನಿರೀಕ್ಷಿತ ಅಕ್ಷಾಂಶ ಮತ್ತು ರೇಖಾಂಶದ ಗಡಿಗಳಲ್ಲಿ ಪೆಸಿಫಿಕ್ ಮಹಾಸಾಗರದಲ್ಲಿ ಅದನ್ನು ಪತನಗೊಳಿಸಲಾಗಿದೆ. ಇದು ಅತ್ಯಂತ ಸವಾಲಿನ ಕೆಲಸವಾಗಿತ್ತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ತಿಳಿಸಿದೆ.

ಮೂರು ವರ್ಷಗಳ ಜೀವಿತಾವಧಿ ಹೊಂದಿದ್ದ ಉಪಗ್ರಹ ದಶಕಗಳವರೆಗೂ ಕಾರ್ಯಾಚರಣೆ ನಡೆಸಿತ್ತು. ಇದೀಗ ಅದು ನಿರುಪಯುಕ್ತವಾಗಿದೆ. ಹೀಗಾಗಿ ಅದನ್ನು ಭೂಮಿಗೆ ಮರಳಿ ತರುವ ನಡೆಸಲಾಯಿತು. ನಿಯಂತ್ರಿತ ವಿಧಾನದ ಮೂಲಕ ಕಳೆದ ವರ್ಷದಿಂದ ಅದರಲ್ಲಿದ್ದ 120 ಕೆಜಿ ಇಂಧನವನ್ನು ದಹಿಸಲಾಯಿತು. ಹಂತಹಂತವಾಗಿ ಉಪಗ್ರಹವನ್ನು ಕಕ್ಷೆ ಬದಲಾವಣೆಗೊಳಿಸಿ, ಆಗಸದ ಹತ್ತಿರ ತಂದು ಅದನ್ನು ಫೆಸಿಪಿಕ್​ ಮಹಾಸಾಗರದಲ್ಲಿ ಕೆಡವಲಾಯಿತು ಎಂದು ತಿಳಿಸಿದೆ.

  • The controlled re-entry experiment for the decommissioned Megha-Tropiques-1 (MT-1) was carried out successfully on March 7, 2023.

    The satellite has re-entered the Earth’s atmosphere and would have disintegrated over the Pacific Ocean. pic.twitter.com/UIAcMjXfAH

    — ISRO (@isro) March 7, 2023 " class="align-text-top noRightClick twitterSection" data=" ">

ಇಂಧನ ದಹಿಸಿ, ಕಕ್ಷೆ ಬದಲಿಸಿ ಕಾರ್ಯಾಚರಣೆ: ಅಂತಿಮ ಡಿ-ಬೂಸ್ಟ್ ತಂತ್ರವನ್ನು ಒಳಗೊಂಡಂತೆ ಅನೇಕ ನಿರ್ಬಂಧಗಳನ್ನು ಪರಿಗಣಿಸಿದ ನಂತರ ಈ ಪ್ರಯತ್ನ ನಡೆಸಲಾಯಿತು. ಉಪಗ್ರಹ ಭೂಮಿಗೆ ಮರು ಪ್ರವೇಶದ ಜಾಡು, ಉದ್ದೇಶಿತ ವಲಯದೊಳಗಿನ ಪ್ರಭಾವ ಮತ್ತು ಕಾರ್ಯಾಚರಣೆಯ ಪರಿಸ್ಥಿತಿಗಳು, ಗರಿಷ್ಠ ಒತ್ತಡವನ್ನು ಮೀರಿ ಈ ಮಹತ್ವದ ಕಾರ್ಯಾಚರಣೆ ಪೂರ್ಣಗೊಳಿಸಲಾಗಿದೆ. ಬಾಹ್ಯಾಕಾಶದಲ್ಲಿ ಮುಖ್ಯ ನಿಲ್ದಾಣಗಳಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ, ಚೀನೀ ಬಾಹ್ಯಾಕಾಶ ಕೇಂದ್ರಗಳ ವಿಜ್ಞಾನಿಗಳು ನಡೆಸದ ವಿಧಾನವನ್ನು ಬಳಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.

ಮೇಘ ಟ್ರೋಫಿಕ್ಸ್​ ಉಪಗ್ರಹದಲ್ಲಿ 125 ಕೆಜಿ ಇಂಧನವನ್ನು ದಹಿಸುವ ಮೂಲಕ ಮಂಗಳವಾರ ಸಂಜೆ 2 ಬಾರಿ ಕಕ್ಷೆ ಬದಲಿಸುವ ಪ್ರಕ್ರಿಯೆ ನಡೆಸಲಾಗಿದೆ. ಅದನ್ನು ನಿಧಾನವಾಗಿ ನಿಯಂತ್ರಿತ ವಿಧಾನದ ಮೂಲಕ ಭೂಮಿಯ ಅತ್ಯಂತ ಸಮೀಪ ಅಂದರೆ, 80 ಕಿಮೀ ಅಂತರದಲ್ಲಿ ತಂದು ನಿಲ್ಲಿಸಲಾಯಿತು. ಪೆರಿಜಿ ಎಂದು ಕರೆಯಲಾಗುವ ಭೂಕಕ್ಷೆಯ ಕೊನೆಯ ಪಾಯಿಂಟ್​ ಮೂಲಕ ಉಪಗ್ರಹವನ್ನು ಫೆಸಿಪಿಕ್​ ಸಾಗರದಲ್ಲಿ ನಿಗದಿತ ಸ್ಥಳದಲ್ಲಿ ಬೀಳಿಸಲಾಗಿದೆ ಎಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ.

ಸವಾಲಿನ ಕಾರ್ಯಾಚರಣೆ: ಸಾಮಾನ್ಯವಾಗಿ ಎಲ್ಲ ಉಪಗ್ರಹಗಳು ತಮ್ಮ ಜೀವಿತಾವಧಿ ಮುಗಿದ ನಂತರ ನಿಯಂತ್ರಿತ ಮರು ಪ್ರವೇಶಕ್ಕೆ ಒಳಗಾಗುವಂತೆ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿರುತ್ತದೆ. ಆದರೆ MT1 ಅನ್ನು ಜೀವಿತಾವಧಿ ಮುಗಿದ ನಂತರದ ಕಾರ್ಯಾಚರಣೆಗಳಿಗಾಗಿ ನಿಯಂತ್ರಿತ ಮರು ಪ್ರವೇಶದ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿರಲಿಲ್ಲ. ಹೀಗಾಗಿ ಈ ಸಂಪೂರ್ಣ ಕಾರ್ಯಾಚರಣೆ ಸವಾಲಿನದ್ದಾಗಿತ್ತು ಎಂದು ಇಸ್ರೊ ಹೇಳಿದೆ.

ಅಲ್ಲದೇ ಉಪಗ್ರಹವು ಸಾಕಷ್ಟು ಹಳೆಯದಾಗಿರುವುದರಿಂದ ಅದರ ಹಲವಾರು ವ್ಯವಸ್ಥೆಗಳು ಈಗ ಕೆಲಸ ಮಾಡುತ್ತಿರಲಿಲ್ಲ. ಅದರ ಕಾರ್ಯಕ್ಷಮತೆ ಸಂಪೂರ್ಣವಾಗಿ ಮುಗಿದಿದೆ. ಅದನ್ನು ಭೂಮಿಗೆ ಮರಳಿ ತಂದು ನಾಶ ಮಾಡುವುದೇ ಅಂತಿಮವಾಗಿತ್ತು. ಅದರ ಪ್ರಯತ್ನ ಯಶಸ್ವಿಯಾಗಿ ನಡೆದಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ನಿಷ್ಕ್ರಿಯ ಉಪಗ್ರಹ ಭೂಮಿಗಿಳಿಸುವ ಕಾರ್ಯಾಚರಣೆ ಇಂದು: ಇಸ್ರೋ ಸಕಲ ಸಿದ್ಧತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.