ETV Bharat / science-and-technology

ಭಾರತದ ಬಾಹ್ಯಾಕಾಶ ಆರ್ಥಿಕತೆಗೆ $44 ಬಿಲಿಯನ್ ತಲುಪುವ ಸಾಮರ್ಥ್ಯ; ಇನ್​-ಸ್ಪೇಸ್ ಅಧ್ಯಕ್ಷ ಪವನ್ ಗೋಯೆಂಕಾ

ಭಾರತದ ಬಾಹ್ಯಾಕಾಶ ಆರ್ಥಿಕತೆಗೆ 44 ಬಿಲಿಯನ್​ ಡಾಲರ್ ತಲುಪುವ ಸಾಮರ್ಥ್ಯವಿದೆ ಎಂದು ಪವನ್ ಗೋಯೆಂಕಾ ಹೇಳಿದ್ದಾರೆ.

indias space economy has potential to reach

author img

By ETV Bharat Karnataka Team

Published : Oct 10, 2023, 7:07 PM IST

ಬೆಂಗಳೂರು : ಭಾರತದ ಬಾಹ್ಯಾಕಾಶ ಆರ್ಥಿಕತೆಯು ಮುಂದಿನ ದಶಕದಲ್ಲಿ ಒಟ್ಟಾರೆ ಜಾಗತಿಕ ಪಾಲಿನ ಸುಮಾರು ಶೇಕಡಾ 8 ರಷ್ಟು ಅಂದರೆ 44 ಬಿಲಿಯನ್ ಡಾಲರ್ ತಲುಪುವ ಸಾಮರ್ಥ್ಯ ಹೊಂದಿದೆ ಇನ್-ಸ್ಪೇಸ್ ಪ್ರಮೋಷನ್ ಅಂಡ್ ಆಥರೈಸೇಶನ್ ಸೆಂಟರ್ ಅಧ್ಯಕ್ಷ ಪವನ್ ಗೋಯೆಂಕಾ ಹೇಳಿದರು. ಬೆಂಗಳೂರಿನಲ್ಲಿ ನಡೆದ ಭಾರತೀಯ ಬಾಹ್ಯಾಕಾಶ ಆರ್ಥಿಕತೆಯ ದಶಮಾನದ ದೃಷ್ಟಿಕೋನ ಮತ್ತು ಕಾರ್ಯತಂತ್ರ ಅನಾವರಣ ಕಾರ್ಯಕ್ರಮದಲ್ಲಿ (decadal vision and strategy for Indian Space Economy) ಅವರು ಮಾತನಾಡಿದರು. ಇನ್​-ಸ್ಪೇಸ್​ ಇದು ಬಾಹ್ಯಾಕಾಶ ಇಲಾಖೆಯ (ಡಿಒಎಸ್) ಅಡಿಯಲ್ಲಿ ಬರುವ ಏಕ ಗವಾಕ್ಷಿ, ಸ್ವಾಯತ್ತ, ನೋಡಲ್ ಏಜೆನ್ಸಿಯಾಗಿದೆ.

ಪ್ರಸ್ತುತ, ಭಾರತೀಯ ಬಾಹ್ಯಾಕಾಶ ಆರ್ಥಿಕತೆಯು ಸುಮಾರು 8 ಬಿಲಿಯನ್ ಡಾಲರ್ ಮೌಲ್ಯದ್ದಾಗಿದೆ ಮತ್ತು ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಶೇಕಡಾ 2 ರಷ್ಟು ಪಾಲನ್ನು ಹೊಂದಿದೆ ಎಂದು ಅವರು ಹೇಳಿದರು.

ದಶಮಾನದ ದೃಷ್ಟಿಕೋನ ಮತ್ತು ಕಾರ್ಯತಂತ್ರದ ಯೋಜನೆಯನ್ನು ಇನ್-ಸ್ಪೇಸ್ ಮತ್ತು ಇಸ್ರೋ ಇತರ ಮಧ್ಯಸ್ಥಗಾರರೊಂದಿಗೆ ಸೇರಿ ಅಭಿವೃದ್ಧಿಪಡಿಸಿವೆ. ಈ ಕಾರ್ಯತಂತ್ರದ ಪ್ರಕಾರ ಭಾರತವು ಪ್ರಬಲ ಜಾಗತಿಕ ಬಾಹ್ಯಾಕಾಶ ಶಕ್ತಿಯಾಗಿದ್ದು, ಬಾಹ್ಯಾಕಾಶ ಅನ್ವಯಗಳ ಮೂಲಕ ದೇಶದ ಬೆಳವಣಿಗೆಯನ್ನು ವೇಗಗೊಳಿಸಲು ಪ್ರಯತ್ನಿಸುತ್ತದೆ. ಬಾಹ್ಯಾಕಾಶ ಕ್ಷೇತ್ರದ ದೇಶದ ಮಹತ್ವಾಕಾಂಕ್ಷೆಗಳನ್ನು ಪೂರೈಸಲು ಬಾಹ್ಯಾಕಾಶದಲ್ಲಿ ಸಾಮರ್ಥ್ಯಗಳನ್ನು ಬಲಪಡಿಸಲು ಮತ್ತು ಸಾಮಾಜಿಕ-ಆರ್ಥಿಕ ಪ್ರಯೋಜನಗಳು ಮತ್ತು ಬೆಳವಣಿಗೆಯ ಸಾಮರ್ಥ್ಯಗಳನ್ನು ಸೃಷ್ಟಿಸುವುದು ಇದರ ಉದ್ದೇಶವಾಗಿದೆ.

"ನಾವು ಭಾರತೀಯ ಬಾಹ್ಯಾಕಾಶ ಆರ್ಥಿಕತೆಯ ದಶಕದ ದೃಷ್ಟಿಕೋನವನ್ನು ಅನಾವರಣಗೊಳಿಸುವ ಈ ಸಂದರ್ಭದಲ್ಲಿ, ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಭವಿಷ್ಯವು ಎಲ್ಲರೊಂದಿಗೆ ಸೇರಿಕೊಂಡು ಮಾಡುತ್ತಿರುವ ಪ್ರಯತ್ನವಾಗಿದೆ ಎಂದು ನಾವು ಒತ್ತಿಹೇಳುತ್ತೇವೆ. ಆದ್ದರಿಂದ, ನಮ್ಮ ಕಾರ್ಯತಂತ್ರವು ಬೆಳವಣಿಗೆಯನ್ನು ವೇಗಗೊಳಿಸಲು ಎಲ್ಲಾ ಮಧ್ಯಸ್ಥಗಾರರ ನಡುವೆ ಸಹಯೋಗದ ಮಾರ್ಗವನ್ನು ಬೆಳೆಸುತ್ತದೆ. ಖಾಸಗಿ ವಲಯದ ಭಾಗವಹಿಸುವಿಕೆಗೆ ಇಸ್ರೋ ಹಿಂದೆಂದಿಗಿಂತಲೂ ಮುಕ್ತವಾಗಿ ಬಾಗಿಲು ತೆರೆಯುತ್ತಿದೆ. ಇದರಿಂದ ನಾವು ಒಟ್ಟಾಗಿ ಬಾಹ್ಯಾಕಾಶ ಆರ್ಥಿಕತೆಯನ್ನು ಯಶಸ್ವಿಯಾಗಿ ಹೆಚ್ಚಿಸಬಹುದು. ದಶಕದ ದೃಷ್ಟಿಕೋನವು ಬೇಡಿಕೆ, ಸ್ಥಳೀಯ ಉತ್ಪಾದನಾ ಸಾಮರ್ಥ್ಯಗಳು ಮತ್ತು ಮೂಲಸೌಕರ್ಯಗಳ ಸೃಷ್ಟಿಯನ್ನು ಉದ್ದೇಶಿಸಿದೆ ಮತ್ತು ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆಯಲ್ಲಿ ಎನ್​ಜಿಇ (ಸರ್ಕಾರೇತರ ಘಟಕಗಳು) ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಮತ್ತು ಸುಗಮಗೊಳಿಸುವ ಸ್ಪಷ್ಟ ಮತ್ತು ಸಮಗ್ರ ನಿಯಂತ್ರಕ ಚೌಕಟ್ಟನ್ನು ಒದಗಿಸುತ್ತದೆ" ಎಂದು ಗೋಯೆಂಕಾ ಬೆಂಗಳೂರಿನಲ್ಲಿ ಹೇಳಿದರು.

ಮುಂದಿನ 10 ವರ್ಷಗಳಲ್ಲಿ 22 ಬಿಲಿಯನ್ ಡಾಲರ್ ಹೂಡಿಕೆಯನ್ನು ನಿರೀಕ್ಷಿಸಲಾಗಿದೆ ಮತ್ತು 10 ವರ್ಷಗಳ ಅವಧಿಯಲ್ಲಿ 11 ಬಿಲಿಯನ್ ಡಾಲರ್ ರಫ್ತು ಸೇರಿದಂತೆ 44 ಬಿಲಿಯನ್ ಡಾಲರ್ ಸಾಮರ್ಥ್ಯವನ್ನು (ಜಾಗತಿಕ ಮಾರುಕಟ್ಟೆಯ 8 ಪ್ರತಿಶತ) ತಲುಪಿಸುವುದು ಭಾರತೀಯ ಬಾಹ್ಯಾಕಾಶ ಉದ್ಯಮದ ಆಕಾಂಕ್ಷೆಯಾಗಿದೆ ಎಂದು ಗೋಯೆಂಕಾ ತಮ್ಮ ಪ್ರಸ್ತುತಿಯಲ್ಲಿ ಹೇಳಿದರು.

ಬಾಹ್ಯಾಕಾಶ ಚಟುವಟಿಕೆಗಳನ್ನು ಕೈಗೊಳ್ಳಲು ಸರ್ಕಾರೇತರ ಘಟಕಗಳನ್ನು ಉತ್ತೇಜಿಸಲು, ಸಕ್ರಿಯಗೊಳಿಸಲು, ಅಧಿಕಾರ ನೀಡಲು ಮತ್ತು ಮೇಲ್ವಿಚಾರಣೆ ಮಾಡಲು ಇನ್-ಸ್ಪೇಸ್ ಅನ್ನು ಜೂನ್ 24, 2020 ರಂದು ರಚಿಸಲಾಯಿತು. ಈ ಚಟುವಟಿಕೆಗಳಲ್ಲಿ ಉಡಾವಣಾ ವಾಹನಗಳು ಮತ್ತು ಉಪಗ್ರಹಗಳ ತಯಾರಿಕೆ, ಬಾಹ್ಯಾಕಾಶ ಆಧಾರಿತ ಸೇವೆಗಳನ್ನು ಒದಗಿಸುವುದು, ನಿಲ್ದಾಣವನ್ನು ಸ್ಥಾಪಿಸುವುದು, ಬಾಹ್ಯಾಕಾಶ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಹಂಚಿಕೊಳ್ಳುವುದು ಸೇರಿವೆ.

ಇದನ್ನೂ ಓದಿ : ಚಾಟ್​ ಜಿಪಿಟಿ ಆದಾಯ ಕುಸಿತ; ಷೇರು ಮಾರಿ ಬಂಡವಾಳ ಸಂಗ್ರಹಕ್ಕೆ ಮುಂದಾದ ಓಪನ್​ ಎಐ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.