ನವದೆಹಲಿ: ಒಟ್ಟಾರೆ ಡಿಜಿಟಲ್ ಜೀವನದ ಗುಣಮಟ್ಟವನ್ನು ಕಾಪಾಡಿಕೊಳ್ಳುವ ವಿಚಾರದಲ್ಲಿ ಚೀನಾ ಭಾರತಕ್ಕಿಂತ ಮುಂದಿದೆ. ಜಾಗತಿಕವಾಗಿ ಇದರಲ್ಲಿ ಚೀನಾ 44ನೇ ಸ್ಥಾನದಲ್ಲಿದ್ದರೆ, ಭಾರತ 52ನೇ ಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ.
ಡಿಜಿಟಲ್ ಜೀವನದ ಗುಣಮಟ್ಟ (ಡಿಕ್ಯೂಎಲ್) ಸೂಚ್ಯಂಕದ ಕುರಿತು ಸೈಬರ್ ಸೆಕ್ಯೂರಿಟಿ ಕಂಪನಿ ಸರ್ಫ್ಶಾರ್ಕ್ ವಾರ್ಷಿಕ ಅಧ್ಯಯನ ನಡೆಸಿದ್ದು, ಜಾಗತಿಕವಾಗಿ 121 ದೇಶಗಳ ಸ್ಥಾನದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಂಟರ್ನೆಟ್ ಗುಣಮಟ್ಟ, ಇಂಟರ್ನೆಟ್ ಲಭ್ಯತೆ, ಇ ಸೆಕ್ಯೂರಿಟಿ, ಇ- ಮೂಲಭೂತ ಸೌಲಭ್ಯ ಮತ್ತು ಇ- ಗರ್ವನೆನ್ಸ್ ಸೇರಿದಂತೆ 5 ಕೋಟಿ ಆಧಾರ ಸ್ಥಂಭ ಆಧಾರತದ ಮೇಲೆ ಡಿಜಿಟಲ್ ಯೋಗಕ್ಷೇಮ ನಡೆಸಲಾಗಿದೆ.
5ನೇ ಡಿಕ್ಯೂಎಲ್ ಅಧ್ಯಯನದಲ್ಲಿ ಭಾರತ ಈ ಬಾರಿ ಏರಿಕೆ ಕಂಡಿದ್ದು, 52ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಈ ಹಿಂದೆ ಭಾರತ 59ನೇ ಸ್ಥಾನವನ್ನು ಹೊಂದಿತು. ಇದರ ಹೆಚ್ಚಳಕ್ಕೆ ಪ್ರಮುಖ ಕಾರಣ ದೇಶದಲ್ಲಿ ಇಂಟರ್ನೆಟ್ ಗುಣಮಟ್ಟ ಏರಿಕೆ ಕಂಡಿದ್ದು, ಇದೀಗ 16ನೇ ಸ್ಥಾನಕ್ಕೆ ಏರಿದೆ.
ಆದಾಗ್ಯೂ ದೇಶವೂ, ಇ - ಮೂಲ ಸೌಕರ್ಯದಲ್ಲಿ 91ನೇ ರ‍್ಯಾಂಕ್ ಪಡೆದಿದೆ. ಉಳಿದ ಆಧಾರ ಸ್ಥಂಭದ ಅನುಸಾರ, ಇಂಟರ್ನೆಟ್ ಲಭ್ಯತೆಯಲ್ಲಿ ಭಾರತ 28ನೇ ಸ್ಥಾನ ಪಡೆದರೆ, ಇ ಸರ್ಕಾರ 35 ನೇ ಸ್ಥಾನ ಮತ್ತು ಇ ಸೆಕ್ಯೂರಿಟಿಯಲ್ಲಿ 66ನೇ ಸ್ಥಾನ ಪಡೆದಿದೆ ಎಂದು ಅಧ್ಯಯನ ತೋರಿಸಿದೆ. ಏಷ್ಯಾದಲ್ಲಿ ಭಾರತ 13ನೇ ಸ್ಥಾನ ಪಡೆದಿದ್ದು, ಈ ಪ್ರದೇಶದಲ್ಲಿ ಸಿಂಗಾಪೂರ ಪ್ರಮುಖ ಸ್ಥಾನ ಪಡೆದಿದೆ.
ಭಾರತದ ಇಂಟರ್ನೆಟ್ ಗುಣಮಟ್ಟ ಜಾಗತಿಕ ಸರಾಸರಿಗಿಂತ ಶೇ 36ರಷ್ಟು ಹೆಚ್ಚಾಗಿದ್ದು, ವಿಶ್ವದಲ್ಲಿ 16ನೇ ಸ್ಥಾನದಲ್ಲಿದೆ ಎಂದು ಅಧ್ಯಯನದ ಫಲಿತಾಂಶ ತಿಳಿಸಿದೆ. ಭಾರತದಲ್ಲಿ ಮೊಬೈಲ್ ಇಂಟರ್ನೆಟ್ ವೇತ (74ಎಂಬಿಪಿಎಸ್) ಕಳೆದ ವರ್ಷಕ್ಕಿಂತ 297ರಷ್ಟು ಏರಿಕೆ ಕಂಡಿದೆ. ಇಂಟರ್ನೆಟ್ ವೇಗದಲ್ಲಿ ಶೇ 16ರಷ್ಟು ಸುಧಾರಣೆ ಕಂಡಿದೆ ಎಂದು ವರದಿ ತಿಳಿಸಿದೆ.
ಭಾರತೀಯರು ಸ್ಥಿರ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಪಡೆಯಲು ಭಾರತೀಯರು ತಿಂಗಳಿಗೆ 1 ಗಂಟೆ 48 ನಿಮಿಷ ಕೆಲಸ ಮಾಡಬೇಕಾಗುತ್ತದೆ. ಇದು ರೋಮಾನಿಯಾಗಿಂತ 6 ಪಟ್ಟು ಹೆಚ್ಚಿದೆ. ಜಗತ್ತಿನ ಕೈಗೆಟುಕುವ ಸ್ಥಿರ ಅಂತರ್ಜಾಲ ಸೇವೆ ಆಗಿದೆ.
ಬಹುತೇಕ ದೇಶದಲ್ಲಿ ಡಿಜಿಟಲ್ ಜೀವನದ ಗುಣಮಟ್ಟ ವಿಶಾಲವಾದ ಅರ್ಥದಲ್ಲಿ ಒಟ್ಟಾರೆ ಗುಣಮಟ್ಟದ ಜೀವನದೊಂದಿಗೆ ಸೇರಿಸಲಾಗಿದೆ. ಕೆಲಸ, ಶಿಕ್ಷಣ ಮತ್ತು ವಿರಾಮ ಸೇರಿದಂತೆ ಅನೇಕ ದೈನಂದಿನ ಚಟುವಟಿಕೆಗಳನ್ನು ಆನ್‌ಲೈನ್‌ನಲ್ಲಿ ನೋಡಲು ಬೇರೆ ಮಾರ್ಗವಿಲ್ಲ ಎಂದು ಸರ್ಫ್ಶಾರ್ಕ್ ವಕ್ತಾರ ಗೇಬ್ರಿಯೆಲ್ ರಾಕೈಟೈಟ್-ಕ್ರಾಸೌಸ್ಕೆ ತಿಳಿಸಿದ್ದಾರೆ.
ದೇಶದ ಡಿಜಿಟಲ್ ಗುಣಮಟ್ಟದ ಜೀವನ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳನ್ನು ಗುರುತಿಸುವುದು ನಿರ್ಣಾಯಕವಾಗಿದೆ ಇದು ಡಿಕ್ಯೂಎಲ್ ಸೂಚ್ಯಂಕದ ನಿಖರ ಉದ್ದೇಶವಾಗಿದೆ. ಜಾಗತಿಕ ದೃಷ್ಟಿಕೋನದಲ್ಲಿ ಭಾರತದಲ್ಲಿ ಸೈಬರ್ ಕ್ರೈಂ ವಿರುದ್ಧ ಹೋರಾಡಲು ಇನ್ನೂ ಸಿದ್ಧವಾಗಿಲ್ಲ. ದೇಶದಲ್ಲಿ ದತ್ತಾಂಶ ರಕ್ಷಣೆ ಕಾನೂನು ಕಡಿಮೆ ಹೊಂದಿದೆ.
ಇದನ್ನೂ ಓದಿ: 130 ಕೋಟಿಗೆ ತಲುಪಿದ ಜಾಗತಿಕ 5G ಬಳಕೆದಾರರ ಸಂಖ್ಯೆ; ಭಾರತದಲ್ಲಿ ಅತ್ಯಧಿಕ ಚಂದಾದಾರರ ಸೇರ್ಪಡೆ