ETV Bharat / science-and-technology

ದೇಶದ ಪ್ರಥಮ ಉಪಗ್ರಹ ಆಧಾರಿತ ಬ್ರಾಡ್​ಬ್ಯಾಂಡ್ ಸೇವೆ ಜಿಯೋಸ್ಪೇಸ್ ಫೈಬರ್ ಲಾಂಚ್ - ಇಂಟರ್​ನೆಟ್ ಸೌಲಭ್ಯವನ್ನು ತಲುಪಿಸಲಾಗದ

ದೇಶದ ದುರ್ಗಮ ಭಾಗಗಳಿಗೂ ಹೈಸ್ಪೀಡ್ ಇಂಟರ್​ನೆಟ್ ಸೌಲಭ್ಯ ನೀಡಬಲ್ಲ ಉಪಗ್ರಹ ಆಧಾರಿತ ಗಿಗಾಬಿಟ್ ಬ್ರಾಡ್​ಬ್ಯಾಂಡ್ ಸೇವೆಯನ್ನು ಜಿಯೋ ಇಂದು ಅನಾವರಣಗೊಳಿಸಿದೆ.

India's first satellite-based gigabit broadband service

author img

By ETV Bharat Karnataka Team

Published : Oct 27, 2023, 12:34 PM IST

ನವದೆಹಲಿ: ಭಾರತದ ದೂರಸಂಪರ್ಕ ಕ್ಷೇತ್ರದ ಪ್ರಮುಖ ಕಂಪನಿ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್, ದೇಶದ ಮೊದಲ ಉಪಗ್ರಹ ಆಧಾರಿತ ಗಿಗಾಬಿಟ್ ಬ್ರಾಡ್​ಬ್ಯಾಂಡ್ ಸೇವೆ ಜಿಯೋಸ್ಪೇಸ್ ಫೈಬರ್ ಅನ್ನು ಅನಾವರಣಗೊಳಿಸಿದೆ. ದೇಶದ ದೂರದ ಪ್ರದೇಶಗಳನ್ನು ಹೈಸ್ಪೀಡ್ ಇಂಟರ್ನೆಟ್​ನೊಂದಿಗೆ ಸಂಪರ್ಕಿಸುವತ್ತ ಇದೊಂದು ದೊಡ್ಡ ಹೆಜ್ಜೆಯಾಗಿದೆ.

ರಿಲಯನ್ಸ್ ಜಿಯೋ ನೀಡಿರುವ ಮಾಧ್ಯಮ ಪ್ರಕಟಣೆಯ ಪ್ರಕಾರ, ಈವರೆಗೂ ಇಂಟರ್​ನೆಟ್ ಸೌಲಭ್ಯವನ್ನು ತಲುಪಿಸಲಾಗದ ದೂರದ ಪ್ರದೇಶಗಳಿಗೂ ಹೈಸ್ಪೀಡ್ ಬ್ರಾಡ್​ಬ್ಯಾಂಡ್ ಸೇವೆಗಳನ್ನು ವಿಸ್ತರಿಸಲು ರಿಲಯನ್ಸ್ ಜಿಯೋ ಪ್ರಯತ್ನಿಸುತ್ತಿದೆ ಎಂದು ಹೇಳಿದೆ. ಶುಕ್ರವಾರ ನವದೆಹಲಿಯಲ್ಲಿ ಆರಂಭವಾದ ಇಂಡಿಯಾ ಮೊಬೈಲ್ ಕಾಂಗ್ರೆಸ್​ ಸಮಾವೇಶದಲ್ಲಿ ಈ ತಂತ್ರಜ್ಞಾನವನ್ನು ಪ್ರದರ್ಶಿಸಲಾಯಿತು. ಜಿಯೋಸ್ಪೇಸ್ ಫೈಬರ್ ಶೀಘ್ರದಲ್ಲೇ ಭಾರತದಾದ್ಯಂತ ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಾಗಲಿದೆ.

ರಿಲಯನ್ಸ್ ಜಿಯೋ ಈಗಾಗಲೇ 450 ದಶಲಕ್ಷಕ್ಕೂ ಹೆಚ್ಚು ಭಾರತೀಯ ಗ್ರಾಹಕರಿಗೆ ಹೈಸ್ಪೀಡ್ ಬ್ರಾಡ್​ಬ್ಯಾಂಡ್ ಸೌಲಭ್ಯಗಳನ್ನು ನೀಡುತ್ತಿದೆ ಮತ್ತು ಈಗ ಜಿಯೋಸ್ಪೇಸ್ ಫೈಬರ್ ಆರಂಭದೊಂದಿಗೆ ಪ್ರತಿ ಮನೆಗೂ ಡಿಜಿಟಲ್ ಸಂಪರ್ಕ ಕಲ್ಪಿಸುವ ಗುರಿಯನ್ನು ಹೊಂದಿದೆ. ಈ ಉಪಗ್ರಹ ಆಧರಿತ ಸೇವೆಯು, ಜಿಯೋಫೈಬರ್ ಮತ್ತು ಜಿಯೋಏರ್​ಫೈಬರ್​ನ ಅಸ್ತಿತ್ವದಲ್ಲಿರುವ ಸಂಪರ್ಕಗಳೊಂದಿಗೆ ಸೇರಿಸಲ್ಪಟ್ಟಿದೆ. ಗ್ರಾಹಕರು ಮತ್ತು ಉದ್ಯಮ ಸಂಸ್ಥೆಗಳು ವಿಶ್ವಾಸಾರ್ಹ, ವಿಳಂಬವಿಲ್ಲದ, ಹೈಸ್ಪೀಡ್ ಇಂಟರ್​ನೆಟ್ ಸೌಲಭ್ಯ ಪಡೆಯಬಹುದು ಮತ್ತು ಮನರಂಜನೆಗಾಗಿ ಇದನ್ನು ಬಳಸಬಹುದು ಎಂದು ಕಂಪನಿ ತಿಳಿಸಿದೆ.

ಈಗಾಗಲೇ ಭಾರತದ ನಾಲ್ಕು ಅತ್ಯಂತ ದುರ್ಗಮ ಸ್ಥಳಗಳಾದ ಗುಜರಾತ್​ನ ಗಿರ್, ಛತ್ತೀಸಗಢದ ಕೊರ್ಬಾ, ಒಡಿಶಾದ ನಬರಂಗ್​ ಪುರ್ ಮತ್ತು ಅಸ್ಸಾಂನ ಒಎನ್​ಜಿಸಿ - ಜೋರ್ಹಾಟ್ ಪ್ರದೇಶಗಳಲ್ಲಿ ಜಿಯೋಸ್ಪೇಸ್ ಫೈಬರ್​ ಮೂಲಕ ಹೈಸ್ಪೀಡ್ ಇಂಟರ್​ನೆಟ್ ಸೌಲಭ್ಯ ಆರಂಭಿಸಲಾಗಿದೆ.

ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್​ನ ಅಧ್ಯಕ್ಷ ಆಕಾಶ್ ಅಂಬಾನಿ ಮಾತನಾಡಿ, "ಜಿಯೋ ಭಾರತದ ಲಕ್ಷಾಂತರ ಮನೆಗಳು ಮತ್ತು ವ್ಯವಹಾರಗಳಿಗೆ ಮೊದಲ ಬಾರಿಗೆ ಬ್ರಾಡ್​ಬ್ಯಾಂಡ್ ಇಂಟರ್​ನೆಟ್​ ಸೌಲಭ್ಯ ಪಡೆಯಲು ಅನುವು ಮಾಡಿಕೊಟ್ಟಿದೆ. ಜಿಯೋಸ್ಪೇಸ್ ಫೈಬರ್​ನೊಂದಿಗೆ ಇನ್ನೂ ಲಕ್ಷಾಂತರ ಜನರನ್ನು ನಾವು ಸಂಪರ್ಕಿಸಲಿದ್ದೇವೆ" ಎಂದರು.

ರಿಲಯನ್ಸ್ ಜಿಯೋದ ಜಿಯೋಸ್ಪೇಸ್ ಫೈಬರ್ ಭಾರತದ ಡಿಜಿಟಲ್ ತಂತ್ರಜ್ಞಾನದ ವಲಯದಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ ಗುರುತಿಸಲ್ಪಡುತ್ತಿದೆ. ನಿಜವಾದ ಡಿಜಿಟಲ್ ಇಂಡಿಯಾದ ದೃಷ್ಟಿಕೋನದೊಂದಿಗೆ ಹೊಂದಿಕೊಳ್ಳುಔ ಈ ತಂತ್ರಜ್ಞಾನ ದೇಶದ ಅತ್ಯಂತ ದುರ್ಗಮ ಭಾಗಗಳಿಗೂ ಹೈಸ್ಪೀಡ್ ಬ್ರಾಡ್​ಬ್ಯಾಂಡ್ ಸೌಲಭ್ಯವನ್ನು ವಿಸ್ತರಿಸುವ ಭರವಸೆ ನೀಡುತ್ತದೆ.

ಇದನ್ನೂ ಓದಿ : ಇನ್ನು ಈ ಫೋನ್​ಗಳಲ್ಲಿ ಕೆಲಸ ಮಾಡಲ್ಲ ವಾಟ್ಸ್​ಆ್ಯಪ್! ನಿಮ್ಮದು ಯಾವ ವರ್ಷನ್ ನೋಡಿಕೊಳ್ಳಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.