ETV Bharat / science-and-technology

ಇಂಡಿಯಾ ಮೊಬೈಲ್ ಕಾಂಗ್ರೆಸ್ ಆರಂಭ: 6ಜಿ ತಂತ್ರಜ್ಞಾನದ ನಾಯಕನಾಗಲಿದೆ ಭಾರತ ಎಂದ ಮೋದಿ - ಪಿಕ್ಸೆಲ್ ಫೋನ್ ಅನ್ನು ಭಾರತದಲ್ಲಿ ತಯಾರಿಸುವುದಾಗಿ

ಇಂಡಿಯಾ ಮೊಬೈಲ್ ಕಾಂಗ್ರೆಸ್ ತಂತ್ರಜ್ಞಾನ ಸಮ್ಮೇಳನ ಇಂದಿನಿಂದ ನವದೆಹಲಿಯಲ್ಲಿ ಆರಂಭವಾಗಿದೆ.

"The Future is here and now": PM Modi at 7th India Mobile Congress

author img

By ETV Bharat Karnataka Team

Published : Oct 27, 2023, 1:32 PM IST

ನವದೆಹಲಿ: ಇಂಡಿಯಾ ಮೊಬೈಲ್ ಕಾಂಗ್ರೆಸ್ ನ 7ನೇ ಆವೃತ್ತಿಯನ್ನು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, 'ಭವಿಷ್ಯವು ಇಲ್ಲಿ ಮತ್ತು ಈಗ ಇದೆ' ಎಂದು ಹೇಳಿದರು. "21 ನೇ ಶತಮಾನದ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ಈ ಸಮ್ಮೇಳನವು ಕೋಟ್ಯಂತರ ಜನರ ಹಣೆಬರಹವನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ನಾವು ಭವಿಷ್ಯದ ಬಗ್ಗೆ ಮಾತನಾಡುವ ಸಮಯವಿತ್ತು, ಅಂದರೆ ಮುಂದಿನ ದಶಕ ಅಥವಾ ಮುಂದಿನ ಶತಮಾನ. ಆದರೆ, ಇಂದು ತಂತ್ರಜ್ಞಾನದಲ್ಲಿನ ಬದಲಾವಣೆಗಳಿಂದಾಗಿ ಭವಿಷ್ಯವು ಇಲ್ಲಿ ಮತ್ತು ಈಗ ಇದೆ ಎಂದು ನಾವು ಹೇಳುತ್ತಿದ್ದೇವೆ" ಎಂದು ಪ್ರಧಾನಿ ತಿಳಿಸಿದರು.

6 ಜಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ನಾಯಕರಾಗುವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂದು ಹೇಳಿದ ಪ್ರಧಾನಿ, ಕುಖ್ಯಾತ 2 ಜಿ ಹಗರಣವನ್ನು ಉಲ್ಲೇಖಿಸಿ ಯುಪಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. "ನಾವು ದೇಶದಲ್ಲಿ 5 ಜಿ ವಿಸ್ತರಿಸುವುದು ಮಾತ್ರವಲ್ಲದೇ 6 ಜಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಾಯಕರಾಗುವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ... ಯುಪಿಎ ಸರ್ಕಾರದ ಅವಧಿಯಲ್ಲಿ 2ಜಿ ತರಂಗಾಂತರ ಹಂಚಿಕೆ ವೇಳೆ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ನಮ್ಮ ಸರ್ಕಾರದ ಅವಧಿಯಲ್ಲಿ 4 ಜಿ ವಿಸ್ತರಿಸಲಾಯಿತು. ಆದರೆ ನಮ್ಮ ಮೇಲೆ ಯಾವುದೇ ಅಪವಾದ ಬರಲಿಲ್ಲ. 6 ಜಿ ತಂತ್ರಜ್ಞಾನದಲ್ಲಿ ಭಾರತವು ಜಗತ್ತನ್ನು ಮುನ್ನಡೆಸುತ್ತದೆ ಎಂದು ನನಗೆ ವಿಶ್ವಾಸವಿದೆ" ಎಂದು ಪ್ರಧಾನಿ ಮೋದಿ ಹೇಳಿದರು.

  • #WATCH | At India Mobile Congress, PM Modi says," Recently, Google has announced the manufacturing of its Pixel phone in India. Samsung's Fold 5 mobile phone and Apple's iPhone 15 are being manufactured in India. We are proud that the world is using Made in India mobile phones… pic.twitter.com/lqQ2cmgnMl

    — ANI (@ANI) October 27, 2023 " class="align-text-top noRightClick twitterSection" data=" ">

"ಅದು ತಂತ್ರಜ್ಞಾನವಾಗಿರಲಿ, ಸಂಪರ್ಕವಾಗಿರಲಿ, 6 ಜಿ ಆಗಿರಲಿ, ಅದು ಎಐ, ಸೈಬರ್ ಸೆಕ್ಯುರಿಟಿ, ಸೆಮಿಕಂಡಕ್ಟರ್​ಗಳು, ಡ್ರೋನ್​ಗಳು, ಆಳ ಸಮುದ್ರ ಹೀಗೆ ಯಾವುದೇ ಕ್ಷೇತ್ರದಲ್ಲಾದರೂ ಮುಂಬರುವ ಸಮಯವು ಸಂಪೂರ್ಣವಾಗಿ ವಿಭಿನ್ನವಾಗಿರಲಿದೆ ಮತ್ತು ನಮ್ಮ ಯುವ ಪೀಳಿಗೆಯು ದೇಶದ ಭವಿಷ್ಯವನ್ನು ಮುನ್ನಡೆಸುತ್ತಿದೆ ಎಂಬುದು ಎಲ್ಲರಿಗೂ ಸಂತೋಷದ ವಿಷಯವಾಗಿದೆ" ಎಂದು ಅವರು ಹೇಳಿದರು.

ಭಾರತದಲ್ಲಿ ಪಿಕ್ಸೆಲ್ ಫೋನ್​ಗಳನ್ನು ತಯಾರಿಸುವುದಾಗಿ ಇತ್ತೀಚೆಗೆ ಗೂಗಲ್ ಘೋಷಿಸಿದ್ದನ್ನು ಉಲ್ಲೇಖಿಸಿದ ಪಿಎಂ ಮೋದಿ, "ಇತ್ತೀಚೆಗೆ, ಗೂಗಲ್ ತನ್ನ ಪಿಕ್ಸೆಲ್ ಫೋನ್ ಅನ್ನು ಭಾರತದಲ್ಲಿ ತಯಾರಿಸುವುದಾಗಿ ಘೋಷಿಸಿದೆ. ಸ್ಯಾಮ್​ಸಂಗ್​ನ ಫೋಲ್ಡ್ 5 ಮೊಬೈಲ್ ಫೋನ್ ಮತ್ತು ಆ್ಯಪಲ್​ನ ಐಫೋನ್ 15 ಭಾರತದಲ್ಲಿ ತಯಾರಾಗುತ್ತಿವೆ. ಜಗತ್ತು ಈಗ ಮೇಡ್ ಇನ್ ಇಂಡಿಯಾ ಮೊಬೈಲ್ ಫೋನ್ ಗಳನ್ನು ಬಳಸುತ್ತಿದೆ ಎಂದು ಹೇಳಲು ನಾವು ಹೆಮ್ಮೆಪಡುತ್ತೇವೆ" ಎಂದು ನುಡಿದರು.

ಇದನ್ನೂ ಓದಿ : ದೇಶದ ಪ್ರಥಮ ಉಪಗ್ರಹ ಆಧಾರಿತ ಬ್ರಾಡ್​ಬ್ಯಾಂಡ್ ಸೇವೆ ಜಿಯೋಸ್ಪೇಸ್ ಫೈಬರ್ ಲಾಂಚ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.