ETV Bharat / science-and-technology

ಆ್ಯಪಲ್​​ನ​ ಟಾಪ್ 5 ಮಾರುಕಟ್ಟೆಗಳಲ್ಲಿ ಭಾರತವೂ ಒಂದು.. ಐಫೋನ್ ಮಾರಾಟದಲ್ಲಿ ಜರ್ಮನಿ, ಫ್ರಾನ್ಸ್ ಮೀರಿಸಿದ ಭಾರತ - ಭಾರತ

apples top 5 markets: ಭಾರತವು ಜಾಗತಿಕ ಮಟ್ಟದಲ್ಲಿ ಆ್ಯಪಲ್‌ನ ಟಾಪ್ 5 ಮಾರುಕಟ್ಟೆಗಳಲ್ಲಿ ಒಂದಾಗಿದೆ. ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ ಮಾರಾಟ ದರ.

ಆ್ಯಪಲ್​ ಕಂಪನಿ
ಆ್ಯಪಲ್​ ಕಂಪನಿ
author img

By

Published : Aug 1, 2023, 7:39 AM IST

ನವದೆಹಲಿ: ಜಗತ್ತಿನ್ನೆಲೆಡೆ ತನ್ನ ಕಬಂಧ ಬಾಹು ವಿಸ್ತರಿಸುವ ಆ್ಯಪಲ್‌​ ಕಂಪನಿ ತನ್ನ ಹೊಸ ಹೊಸ ವೈಶಿಷ್ಟ್ಯದಿಂದ ಮಾರುಕಟ್ಟೆಗಳಲ್ಲೇ ಟಾಪ್​ ಪಟ್ಟಿಯಲ್ಲಿದೆ. ಆ್ಯಪಲ್‌ ಕಂಪನಿಗೆ ಲಾಭದಾಯಕ ಮಾರುಕಟ್ಟೆಗಳಲ್ಲಿ ಭಾರತವು ಒಂದು. ಭಾರತವು ಜಾಗತಿಕ ಮಟ್ಟದಲ್ಲಿ ಆ್ಯಪಲ್​ನ ಟಾಪ್ 5 ಮಾರುಕಟ್ಟೆಗಳಲ್ಲಿ ಒಂದಾಗಿದೆ. 2023 ರ 2 ನೇ ತ್ರೈಮಾಸಿಕದಲ್ಲಿ ಶೇಕಡಾ 59 ರಷ್ಟು ಪಾಲು ಹೊಂದಿರುವ ಅಲ್ಟ್ರಾ-ಪ್ರೀಮಿಯಂ ವಿಭಾಗದಲ್ಲಿ ಐಫೋನ್ ತಯಾರಕ ಕಂಪನಿ ತನ್ನ ಮುನ್ನಡೆ ಕಾಯ್ದುಕೊಂಡಿದೆ.

ಭಾರತದ ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗವು ಏಪ್ರಿಲ್-ಜೂನ್ ಅವಧಿಯಲ್ಲಿ ಶೇಕಡ 112 ರಷ್ಟು ಬೆಳವಣಿಗೆ ದಾಖಲಿಸಿದೆ. ಇದು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ ಭಾರತದಲ್ಲಿ ಆ್ಯಪಲ್ ಐಫೋನ್ ಮಾರಾಟ ಶೇಕಡಾ 17 ರಷ್ಟು ಆಗಿದ್ದು, ಭಾರತವು ಐಫೋನ್ ಮಾರಾಟದಲ್ಲಿ ಜರ್ಮನಿ ಮತ್ತು ಫ್ರಾನ್ಸ್ ಅನ್ನು ಮೀರಿಸಿದೆ. ಐಫೋನ್ ಮಾರಾಟದಲ್ಲಿ ಭಾರತವು ಈಗ U.K., ಜಪಾನ್, ಚೀನಾ ಮತ್ತು ಅಮೆರಿಕದ​ ನಂತರದ ಸ್ಥಾನದಲ್ಲಿದೆ.

''ಆ್ಯಪಲ್​ 59 ಶೇಕಡಾ ಪಾಲನ್ನು ಹೊಂದಿರುವ ಅಲ್ಟ್ರಾ - ಪ್ರೀಮಿಯಂ ವಿಭಾಗದಲ್ಲಿ ಮುನ್ನಡೆ ಸಾಧಿಸಿದೆ. ಭಾರತವು ಈಗ ಆ್ಯಪಲ್‌ ಅಗ್ರ - ಐದು ಮಾರುಕಟ್ಟೆಗಳಲ್ಲಿ ಒಂದಾಗಿದೆ " ಎಂದು ಸಂಶೋಧನಾ ವಿಶ್ಲೇಷಕ ಶುಭಂ ಸಿಂಗ್ ಹೇಳಿದ್ದಾರೆ. Vivo ತನ್ನ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ ಮತ್ತು ವಾರ್ಷಿಕ ಬೆಳವಣಿಗೆ ಕಂಡುಕೊಳ್ಳುವಲ್ಲಿ ಅಗ್ರ ಐದರಲ್ಲಿರುವ ಏಕೈಕ ಬ್ರ್ಯಾಂಡ್ ಆಗಿದೆ. ಇನ್ನು OnePlus ಎರಡನೇ ತ್ರೈಮಾಸಿಕದಲ್ಲಿ ಶೇ 68ರಷ್ಟು ಬೆಳವಣಿಗೆಯೊಂದಿಗೆ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಎರಡನೇ ತ್ರೈಮಾಸಿಕದಲ್ಲಿ ಹಬ್ಬದ ದಿನಗಳಲ್ಲಿ, ಮೂಲ ಉಪಕರಣ ತಯಾರಕ(original equipment manufacturer)ದಲ್ಲಿ ಬೇಡಿಕೆ ಹೆಚ್ಚಿದ್ದು, ಸುಧಾರಣೆ ಕಂಡಿದೆ. ಹಿರಿಯ ಸಂಶೋಧನಾ ವಿಶ್ಲೇಷಕರಾದ ಶಿಲ್ಪಿ ಜೈನ್, ಮೂಲ ಉಪಕರಣ ತಯಾರಕದಲ್ಲಿ ಇರುವ ಉತ್ಪನ್ನಗಳನ್ನು ತ್ರೈಮಾಸಿಕದಲ್ಲಿ ಬಹು ಮಾರಾಟ ಮತ್ತು ಪ್ರಚಾರಗಳ ಮೂಲಕ ತೆರವು ಮಾಡಲು ಚಾನಲ್‌ಗಳು ಸಹ ಲಭ್ಯವಿದೆ.

ಹಬ್ಬದ ಸಮಯದಲ್ಲಿ ಗ್ರಾಹಕರನ್ನು ಆಕರ್ಷಿಸಲು ಬ್ರ್ಯಾಂಡ್‌ಗಳು ಕೊಡುಗೆಯ ಆಫರ್​ ಮೂಲಕ ಮಾರುಕಟ್ಟೆಗಳಿಗೆ ಬರುತ್ತದೆ. ಅದರಲ್ಲೂ 5G ಮಾರುಕಟ್ಟೆಯಲ್ಲಿ ದೊಡ್ಡ ಪಾತ್ರ ನಿರ್ವಹಿಸುತ್ತಿದೆ. ಎರಡನೇ ತ್ರೈಮಾಸಿಕದಲ್ಲಿ 5G ಸ್ಮಾರ್ಟ್‌ಫೋನ್ ಭಾರತದಲ್ಲಿ 100 ಮಿಲಿಯನ್ ಗಡಿ ದಾಟುವಷ್ಟು ಮಾರಾಟವಾಗಿದೆ. 5G ನೆಟ್‌ವರ್ಕ್‌ಗಳ ವಿಸ್ತರಣೆಯಿಂದಾಗಿ ಜೊತೆಗೆ ಕೈಗೆಟಕುವ ದರದಲ್ಲಿರುವ ಬ್ರ್ಯಾಂಡ್​ ಫೋನ್​ಗಳ ಲಭ್ಯತೆಯು 5G ಅಪ್‌ಗ್ರೇಡ್​ ವೇಗಗೊಳಿಸಿದೆ.

ಭಾರತ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್​​ನ (ICEA) ದತ್ತಾಂಶದ ಪ್ರಕಾರ, ಸರ್ಕಾರದ ಸ್ನೇಹಪರ ನೀತಿಗಳು ಮತ್ತು ಉತ್ಪಾದನಾ-ಸಂಯೋಜಿತ ಪ್ರೋತ್ಸಾಹ (PLI) ಯೋಜನೆಯಿಂದ ಉತ್ತೇಜಿತವಾಗಿರುವ ಭಾರತದ ಮಾರುಕಟ್ಟೆಯಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ (FY24) ಮೊಬೈಲ್ ರಫ್ತು 1,20,000 ಕೋಟಿ ರೂಪಾಯಿಗಳನ್ನು ದಾಟಲಿದೆ ಎಂದು ತಿಳಿದು ಬಂದಿದೆ. ಮೊಬೈಲ್ ರಫ್ತುಗಳಲ್ಲಿನ ಈ ಅದ್ಭುತ ಬೆಳವಣಿಗೆಯ ನಡುವೆ, ಹಣಕಾಸು ವರ್ಷ 2024 ರಲ್ಲಿ ಆ್ಯಪಲ್​​ನ ಪಾಲು ಶೇಕಡಾ 50 ಕ್ಕಿಂತ ಹೆಚ್ಚಾಗಿರುತ್ತದೆ.

ಇದನ್ನೂ ಓದಿ: iPhoneನ 5ನೇ ಅತಿದೊಡ್ಡ ಮಾರುಕಟ್ಟೆ ಭಾರತ: ಶೇ 68ರಷ್ಟು ಮಾರಾಟ ವೃದ್ಧಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.