ETV Bharat / science-and-technology

ಸರ್ಕಾರಿ ಮತ್ತು ಅಗತ್ಯ ಸೇವಾ ಸಂಸ್ಥೆಗಳ ಮೇಲಿನ ಸೈಬರ್​ ದಾಳಿ ಹೆಚ್ಚಳ; ವರದಿಯಲ್ಲಿ ಬಹಿರಂಗ - ಸೆಕ್ಯುರಿಟಿ ಬಜೆಟ್ ಹಂಚಿಕೆಯಲ್ಲಿ

ಕಳೆದ 12 ತಿಂಗಳ ಅವಧಿಯಲ್ಲಿ ಭಾರತದ ಕಂಪನಿಗಳ ಮೇಲೆ ನಡೆಯುತ್ತಿರುವ ಸೈಬರ್​ ದಾಳಿಗಳ ಪ್ರಮಾಣ ಹೆಚ್ಚಾಗಿದೆ ಎಂದು ವರದಿಯೊಂದರಲ್ಲಿ ಹೇಳಲಾಗಿದೆ.

67% of Indian govt & essential services faced

author img

By ETV Bharat Karnataka Team

Published : Sep 7, 2023, 7:52 PM IST

ನವದೆಹಲಿ : 2022-2023ರ ಅವಧಿಯಲ್ಲಿ ಶೇ 67ರಷ್ಟು ಸರಕಾರಿ ಮತ್ತು ಅಗತ್ಯ ಸೇವೆಗಳ ಕಂಪನಿಗಳ ಮೇಲೆ ನಡೆದ ಸೈಬರ್ ದಾಳಿಗಳ ಪ್ರಮಾಣ ಶೇ 50ಕ್ಕಿಂತ ಹೆಚ್ಚಳವಾಗಿದೆ ಎಂದು ಹೊಸ ವರದಿಯೊಂದು ತಿಳಿಸಿದೆ. ಪಾಲೊ ಆಲ್ಟೊ ನೆಟ್ವರ್ಕ್​ ಸಂಶೋಧಕರ ಪ್ರಕಾರ, ಸುಮಾರು 45 ಪ್ರತಿಶತದಷ್ಟು ಭಾರತೀಯ ವ್ಯವಹಾರಗಳ ಮೇಲೆ ನಡೆದ ಸೈಬರ್​ ದಾಳಿಗಳ ಪ್ರಮಾಣ ಶೇಕಡಾ 50 ಕ್ಕಿಂತ ಹೆಚ್ಚಳ ಕಂಡಿದೆ ಎಂದು ಹೇಳಿದೆ. ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ (ಎಪಿಎಸಿ) ಅತಿ ಹೆಚ್ಚು ಸೈಬರ್ ದಾಳಿಯ ಘಟನೆಗಳು ನಡೆದಿವೆ ಎಂದು ವರದಿ ತಿಳಿಸಿದೆ.

ಬ್ಯಾಂಕಿಂಗ್ ಮತ್ತು ಹಣಕಾಸು, ಅಗತ್ಯ ಸೇವೆಗಳು, ಟೆಲ್ಕೊ, ಟೆಕ್, ಕಮ್ಯುನಿಕೇಷನ್ಸ್, ಚಿಲ್ಲರೆ, ಹೋಟೆಲ್, ಎಫ್ & ಬಿ, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಮತ್ತು ಉತ್ಪಾದನೆಯಂತಹ ಕ್ಷೇತ್ರಗಳಿಗೆ ಸೇರಿದ ಸೈಬರ್ ಭದ್ರತೆಯ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು, ಸಂಶೋಧಕರು 200 ಭಾರತೀಯ ಐಟಿ ನಿರ್ಧಾರ ತೆಗೆದುಕೊಳ್ಳುವವರು, ಸಿಟಿಒಗಳು, ಸಿಐಒಗಳು ಮತ್ತು ಹಿರಿಯ ನಿರ್ದೇಶಕರನ್ನು ಭೇಟಿ ಮಾಡಿ ಸಮೀಕ್ಷೆ ಮಾಡಿದ್ದಾರೆ.

"ಸಾರಿಗೆ, ಉತ್ಪಾದನೆ ಮತ್ತು ಸಾರ್ವಜನಿಕ ವಲಯಗಳು ಅತ್ಯಾಧುನಿಕ ಮಾದರಿಯ ಸೈಬರ್​ ದಾಳಿಗೆ ಒಳಗಾಗಿವೆ ಎಂದು ನಮ್ಮ ಸಂಶೋಧನೆಗಳು ತೋರಿಸಿವೆ. ಭಾರತವು ಡಿಜಿಟಲ್ ರೂಪಾಂತರವನ್ನು ಅಳವಡಿಸಿಕೊಳ್ಳುತ್ತಿದ್ದಂತೆ, ಸೈಬರ್ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಅಳವಡಿಸಿಕೊಳ್ಳುವುದು ನಿರ್ಣಾಯಕವಾಗಿದೆ" ಎಂದು ಪಾಲೊ ಆಲ್ಟೊ ನೆಟ್ವರ್ಕ್​ ಭಾರತ ಮತ್ತು ಸಾರ್ಕ್​ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಪ್ರಾದೇಶಿಕ ಉಪಾಧ್ಯಕ್ಷ ಅನಿಲ್ ವಲ್ಲೂರಿ ಹೇಳಿದರು.

ಇದನ್ನೂ ಓದಿ : 130 ಕೋಟಿಗೆ ತಲುಪಿದ ಜಾಗತಿಕ 5G ಬಳಕೆದಾರರ ಸಂಖ್ಯೆ; ಭಾರತದಲ್ಲಿ ಅತ್ಯಧಿಕ ಚಂದಾದಾರರ ಸೇರ್ಪಡೆ

ಹಿಂದಿನ ವರ್ಷಕ್ಕೆ ಹೋಲಿಸಿದರೆ ಭಾರತವು 2023 ರ ಸೈಬರ್ ಸೆಕ್ಯುರಿಟಿ ಬಜೆಟ್ ಹಂಚಿಕೆಯಲ್ಲಿ ಶೇಕಡಾ 75 ರಷ್ಟು ಹೆಚ್ಚಳವನ್ನು ಕಂಡಿದ್ದರೂ, ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಸೈಬರ್ ದಾಳಿಗಳು ಕಂಡು ಬಂದಿವೆ ಎಂದು ವರದಿ ಹೇಳಿದೆ. ಇದಲ್ಲದೆ, ಶೇಕಡಾ 60 ರಷ್ಟು ಭಾರತೀಯ ಸಂಸ್ಥೆಗಳು ಮಾಲ್ವೇರ್ (ರಾನ್ಸಮ್​ವೇರ್​, ಸ್ಪೈವೇರ್, ಆಡ್ವೇರ್) ದಾಳಿಗಳ ಬಗ್ಗೆ ಹೆಚ್ಚು ಆತಂಕಗೊಂಡಿದ್ದರೆ, ಶೇಕಡಾ 57 ರಷ್ಟು ಭಾರತೀಯ ಟೆಲಿಕಾಂ ಕಂಪನಿಗಳು ರಾನ್ಸಮ್​ವೇರ್​ ಬಗ್ಗೆ ಹೆಚ್ಚು ಚಿಂತಿತವಾಗಿವೆ ಎಂದು ವರದಿ ಉಲ್ಲೇಖಿಸಿದೆ.

ಇದಲ್ಲದೆ, ಕಂಟೆಂಟ್​ ಕ್ರಿಯೇಶನ್ ಮತ್ತು ವರದಿ ತಯಾರಿಸುವಂಥ ವ್ಯವಹಾರಿಕ ಕಾರ್ಯಗಳ ಮೇಲೆ ಚಾಟ್​ಜಿಪಿಟಿ ಸಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಶೇಕಡಾ 68 ರಷ್ಟು ಜನರು ನಂಬಿದ್ದಾರೆ ಎಂದು ವರದಿ ಹೇಳಿದೆ. ಸುಮಾರು 42 ಪ್ರತಿಶತದಷ್ಟು ಭಾರತೀಯ ಸಂಸ್ಥೆಗಳು ಕ್ಲೌಡ್ ಭದ್ರತೆಯನ್ನು ಅಳವಡಿಸಿಕೊಳ್ಳಲು ತಮ್ಮ ಸೈಬರ್ ಭದ್ರತಾ ಕಾರ್ಯತಂತ್ರವನ್ನು ಸರಿಹೊಂದಿಸುತ್ತಿವೆ ಎಂದು ಹೇಳಿದರೆ, 94 ಪ್ರತಿಶತದಷ್ಟು ಸಂಸ್ಥೆಗಳು 5 ಜಿ ಕಾರ್ಯತಂತ್ರವನ್ನು ಹೊಂದಿವೆ ಎಂದು ತಿಳಿಸಿವೆ.

ಇದನ್ನೂ ಓದಿ : 2030ರ ವೇಳೆಗೆ ಟ್ರಿಲಿಯನ್​ ಟ್ರಾನ್ಸಿಸ್ಟರ್​​ ಚಿಪ್ ಪ್ಯಾಕೇಜ್ ನಿರ್ಮಾಣ; ಇಂಟೆಲ್​ ಹೇಳಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.