ETV Bharat / science-and-technology

'ಡೆಂಘೀ - ಚಿಕೂನ್​ಗುನ್ಯಾ' ನಿಯಂತ್ರಣಕ್ಕೆ ಹೊಸ ಸೊಳ್ಳೆ ಜಾತಿ ಆವಿಷ್ಕಾರ

author img

By

Published : Jul 7, 2022, 5:06 PM IST

ಡೆಂಘೀ ಮತ್ತು ಚಿಕೂನ್​ಗುನ್ಯಾ ರೋಗಗಳ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಪುದುಚೇರಿಯ ವಿಸಿಆರ್​ಸಿ ಸಂಸ್ಥೆಯು wMel ಮತ್ತು wAlbB ವೋಲ್ಬಾಚಿಯಾ ತಳಿ ಸೋಂಕಿತ ಏಡೆಸ್ ಇಜಿಪ್ಟಿ ಜಾತಿ ಸೊಳ್ಳೆಯ Ae. aegypti (Pud) ಎಂದು ಕರೆಯಲಾಗುವ ಎರಡು ಕಾಲನಿಗಳನ್ನು ಅಭಿವೃದ್ಧಿಪಡಿಸಿದೆ.

ICMR-VCRC develops special mosquitoes to control Dengue, Chikungunya

ಪುದುಚೇರಿ : ಡೆಂಘೀ ಮತ್ತು ಚಿಕೂನ್​ಗುನ್ಯಾ ರೋಗಗಳ ನಿಯಂತ್ರಣಕ್ಕಾಗಿ ಐಸಿಎಂಆರ್​-ವೆಕ್ಟರ್ ಕಂಟ್ರೋಲ್ ರಿಸರ್ಚ್​ ಸೆಂಟರ್ (ICMR-Vector Control Research Centre -VCRC) ಸಂಸ್ಥೆಯು ಹೊಸ ಸೊಳ್ಳೆಗಳ ತಳಿಯೊಂದನ್ನು ಸೃಷ್ಟಿಸಿದೆ. ವಿಸಿಆರ್​ಸಿ ಕಂಡು ಹಿಡಿದ ಈ ಹೆಣ್ಣು ಸೊಳ್ಳೆಗಳು ಗಂಡು ಸೊಳ್ಳೆಯ ಜೊತೆ ಸಂಯೋಗವಾಗಿ ಹುಟ್ಟಿಸುವ ಲಾರ್ವಾಗಳಲ್ಲಿ ಡೆಂಘೀ ಮತ್ತು ಚಿಕೂನ್​ಗುನ್ಯಾ ವೈರಸ್​ಗಳೇ ಇರುವುದಿಲ್ಲ.

ಡೆಂಘೀ ಮತ್ತು ಚಿಕೂನ್​ಗುನ್ಯಾ ರೋಗಗಳ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಪುದುಚೇರಿಯ ವಿಸಿಆರ್​ಸಿ ಸಂಸ್ಥೆಯು wMel ಮತ್ತು wAlbB ವೋಲ್ಬಾಚಿಯಾ ತಳಿ ಸೋಂಕಿತ ಏಡೆಸ್ ಇಜಿಪ್ಟಿ ಜಾತಿ ಸೊಳ್ಳೆಯ Ae. aegypti (Pud) ಎಂದು ಕರೆಯಲಾಗುವ ಎರಡು ಕಾಲನಿಗಳನ್ನು ಅಭಿವೃದ್ಧಿಪಡಿಸಿದೆ. ವಿಸಿಆರ್​ಸಿ ಕಳೆದ ನಾಲ್ಕು ವರ್ಷಗಳಿಂದ ವೋಲ್ಬಾಚಿಯಾ (Wolbachia) ಸೊಳ್ಳೆಗಳ ಬಗ್ಗೆ ಸಂಶೋಧನೆ ನಡೆಸುತ್ತಿದೆ.

ಸ್ಥಳೀಯ ಪ್ರದೇಶಗಳಲ್ಲಿ ಪ್ರತಿವಾರವೂ ದೊಡ್ಡ ಸಂಖ್ಯೆಯ ಸೊಳ್ಳೆಗಳನ್ನು ಬಿಡುಗಡೆ ಮಾಡಬೇಕಿರುವುದರಿಂದ ಈ ಯೋಜನೆ ಪೂರ್ಣಗೊಳ್ಳಲು ಸರ್ಕಾರದಿಂದ ಹಲವಾರು ಹಂತಗಳಲ್ಲಿ ಅನುಮತಿಗಳು ಬೇಕಾಗಬಹುದು.

ಪುದುಚೇರಿಯ ಐಸಿಎಂಆರ್-ವಿಸಿಆರ್‌ಸಿ ನಿರ್ದೇಶಕ ಡಾ.ಅಶ್ವನಿ ಕುಮಾರ್ ಅವರು ಮಾತನಾಡಿ, "ಡೆಂಘೀ ಮತ್ತು ಚಿಕೂನ್‌ಗುನ್ಯಾ ಸೊಳ್ಳೆಗಳನ್ನು ಬದಲಾಯಿಸುವಂಥ ಸೊಳ್ಳೆಗಳನ್ನು ಸಿದ್ಧಪಡಿಸಿದ್ದೇವೆ. ನಾವು ಹೆಣ್ಣು ಸೊಳ್ಳೆಗಳನ್ನು ಬಿಡುಗಡೆ ಮಾಡುತ್ತೇವೆ, ಅದು ಗಂಡುಗಳೊಂದಿಗೆ ಮಿಲನವಾಗುತ್ತದೆ ಮತ್ತು ವೈರಸ್‌ಗಳಿಲ್ಲದ ಲಾರ್ವಾಗಳನ್ನು ಉತ್ಪಾದಿಸುತ್ತದೆ. ಸೊಳ್ಳೆಗಳು ಮತ್ತು ಅವುಗಳ ಮೊಟ್ಟೆಗಳನ್ನು ನಾವು ಈಗಾಗಲೇ ಸಿದ್ಧಪಡಿಸಿದ್ದು, ಅವನ್ನು ಯಾವಾಗ ಬೇಕಾದರೂ ಬಿಡುಗಡೆ ಮಾಡಬಹುದು" ಎಂದರು.

ನಾಲ್ಕು ವರ್ಷಗಳ ಹಿಂದೆ ಈ ಅಧ್ಯಯನ ಪ್ರಾರಂಭವಾಗಿತ್ತು ಮತ್ತು ಈಗ ಪೂರ್ಣಗೊಂಡಿದೆ. ಆದರೆ ಸರ್ಕಾರದಿಂದ ಸಿಗಬೇಕಾದ ಅನುಮತಿಗಳು ಇನ್ನೂ ಸಿಕ್ಕಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಡೆಂಗ್ಯೂ ವೇಗವಾಗಿ ಹರಡುತ್ತಿರುವ ಸೋಂಕುಗಳಲ್ಲಿ ಒಂದಾಗಿದೆ ಮತ್ತು ಸೊಳ್ಳೆಯಿಂದ ಹರಡುವ ವೈರಲ್ ಕಾಯಿಲೆಯಾಗಿದೆ.

ಇದನ್ನು ಓದಿ:ಮೆದುಳಿಗೂ ಹಾನಿ ಮಾಡುತ್ತಾ ಕೊರೊನಾ ವೈರಸ್​..? ಏನನ್ನುತ್ತೆ ಹೊಸ ಅಧ್ಯಯನ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.