ಶೆನ್ಜೆನ್ (ಚೀನಾ): ಅಮೆರಿಕನ್ ತಂತ್ರಜ್ಞಾನದ ಮೇಲಿನ ಅವಲಂಬನೆಯನ್ನು ಕೊನೆಗೊಳಿಸುವ ಉದ್ದೇಶದಿಂದ, ಹುವಾಯಿ ಸಂಸ್ಥೆಯು ಹಾರ್ಮನಿ ಓಎಸ್ 2.0 ಎಂಬ ಸ್ವಯಂ-ಅಭಿವೃದ್ಧಿ ಹೊಂದಿದ ಆಪರೇಟಿಂಗ್ ಸಿಸ್ಟಮ್ ಅನ್ನು ಪ್ರಾರಂಭಿಸಿದೆ. ಇದು ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಸುಮಾರು 100 ಸಾಧನಗಳಿಗೆ ಪವರ್ ನೀಡುತ್ತದೆ.
ಯುಎಸ್ ನಿರ್ಬಂಧಗಳಿಂದ ಬೇಸರಗೊಂಡ ಹುವಾಯಿ 2019ರಲ್ಲಿ ಮಾರುಕಟ್ಟೆ ನಾಯಕ ಗೂಗಲ್‌ನ ಆಂಡ್ರಾಯ್ಡ್ ಓಎಸ್ ಮೇಲಿನ ಅವಲಂಬನೆಯನ್ನು ಕೊನೆಗೊಳಿಸಲು ಹಾರ್ಮನಿಓಎಸ್ ಎಂಬ ತನ್ನದೇ ಆದ ಆಪರೇಟಿಂಗ್ ಸಿಸ್ಟಮ್ (ಓಎಸ್) ಅನ್ನು ನಿರ್ಮಿಸುವುದಾಗಿ ಘೋಷಿಸಿತ್ತು.
ಕಂಪನಿಯು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಹಾರ್ಮನಿಓಎಸ್‌ನ ಆವೃತ್ತಿಯನ್ನು ಪ್ರಕಟಿಸಿತ್ತು. ಹಾರ್ಮನಿಓಎಸ್ 2.0 ಸಾಫ್ಟ್‌ವೇರ್ ಬಸ್, ಡೇಟಾ ನಿರ್ವಹಣೆ ಮತ್ತು ಭದ್ರತೆ ಸೇರಿದಂತೆ ಅಸ್ತಿತ್ವದಲ್ಲಿರುವ ವಿತರಣಾ ಸಾಮರ್ಥ್ಯಗಳಿಗೆ ಸಮಗ್ರ ನವೀಕರಣವನ್ನು ತರಲಿದೆ ಎಂದು ಹುವಾಯಿ ಹೇಳಿದೆ.
ಹುವಾಯಿ ತನ್ನ ಹೊಸ ಹಾರ್ಮನಿಓಎಸ್ 2.0 ಆಪರೇಟಿಂಗ್ ಸಿಸ್ಟಮ್‌ನಿಂದ ನಡೆಸಲ್ಪಡುವ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಟ್ಯಾಬ್ಲೆಟ್‌ಗಳನ್ನು ಕೂಡಾ ಬಿಡುಗಡೆ ಮಾಡಿದೆ.