ETV Bharat / science-and-technology

ಮೆದುಳಿನ ಕ್ಯಾನ್ಸರ್​ - ವೈರಸ್​ನ ನಡುವಿನ ಲಿಂಕ್​ ಕಂಡುಕೊಂಡ ಭಾರತೀಯ ವಿಜ್ಞಾನಿಗಳು

ಭಾರತದಲ್ಲಿ ಮೆದುಳಿನ ಗೆಡ್ಡೆಗಳು 10 ನೇ ಅತ್ಯಂತ ಸಾಮಾನ್ಯ ರೀತಿಯ ಗೆಡ್ಡೆಯಾಗಿ ಸ್ಥಾನ ಪಡೆದಿವೆ. ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಕ್ಯಾನ್ಸರ್ ರಿಜಿಸ್ಟ್ರೀಸ್ (IACR) ಭಾರತದ ವರದಿಯ ಪ್ರಕಾರ ವಾರ್ಷಿಕವಾಗಿ 28,000 ಕ್ಕೂ ಹೆಚ್ಚು ಮೆದುಳಿನ ಗೆಡ್ಡೆಗಳ ಪ್ರಕರಣಗಳು ವರದಿಯಾಗುತ್ತವಂತೆ.

ಮೆದುಳಿನ ಕ್ಯಾನ್ಸರ್​ ಮತ್ತು ವೈರಸ್​ನ ನಡುವಿನ ಲಿಂಕ್​ ಕಂಡುಕೊಂಡ ಭಾರತೀಯ ವಿಜ್ಞಾನಿಗಳು

author img

By

Published : Jul 11, 2022, 9:15 PM IST

ನವದೆಹಲಿ: ಭಾರತೀಯ ವಿಜ್ಞಾನಿಗಳ ತಂಡವು ಮೆದುಳಿನ ಕ್ಯಾನ್ಸರ್ ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ಅಂಶವನ್ನು ಕಂಡುಕೊಂಡಿವೆ. ಕ್ಯಾನ್ಸರ್ ಉಂಟುಮಾಡುವ ವೈರಸ್ ಎಪ್ಸ್ಟೀನ್ ಬಾರ್ ವೈರಸ್ (ಇಬಿವಿ) ನರಕೋಶದ ಜೀವಕೋಶಗಳಿಗೆ ಸೋಂಕು ತಗುಲಿಸುತ್ತದೆ ಮತ್ತು ಕೊಬ್ಬಿನಾಮ್ಲಗಳು, ಕಾರ್ಬೋಹೈಡ್ರೇಟ್​​ಗಳು ಮತ್ತು ಪ್ರೋಟೀನ್ ಅಂಶಗಳಂತಹ ಜೈವಿಕ ಅಣುಗಳಲ್ಲಿ ವಿವಿಧ ಬದಲಾವಣೆಗಳನ್ನು ಉಂಟುಮಾಡುತ್ತದೆ ಎಂದು ತಿಳಿಸಿದೆ. ಇದು ಕೇಂದ್ರ ನರಮಂಡಲದ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಸಹ ಉಲ್ಲೇಖಿಸಲಾಗಿದೆ.

ಈ ಇಬಿವಿ ವೈರಸ್ ಮಾನವರ ನಡುವೆಯೇ ಇದ್ದು, ಸಾಮಾನ್ಯವಾಗಿ ಯಾವುದೇ ಹಾನಿಯನ್ನು ಉಂಟುಮಾಡುವುದಿಲ್ಲ. ಆದರೆ ,ಇದು ಪ್ರತಿರಕ್ಷಣಾ ಒತ್ತಡ ಅಥವಾ ಇಮ್ಯುನೊಕೊಂಪೆಟೆನ್ಸ್‌ನಂತಹ ಕೆಲವು ಅಸಾಮಾನ್ಯ ಪರಿಸ್ಥಿತಿಗಳಲ್ಲಿ ದೇಹದೊಳಗೆ ಪುನಃ ಸಕ್ರಿಯಗೊಳ್ಳುತ್ತದೆ. ಇದು ಬರ್ಕಿಟ್‌ನ ಲಿಂಫೋಮಾ, ಹೊಟ್ಟೆಯ ಕ್ಯಾನ್ಸರ್, ಮಲ್ಟಿಪಲ್ ಸ್ಕ್ಲೆರೋಸಿಸ್ ಸೇರಿದಂತೆ ಮುಂತಾದ ವಿವಿಧ ತೊಡಕುಗಳಿಗೆ ಕಾರಣವಾಗುತ್ತದಂತೆ.

ಭಾರತದಲ್ಲಿ ಮೆದುಳಿನ ಕ್ಯಾನ್ಸರ್ : ಭಾರತದಲ್ಲಿ ಕೇಂದ್ರ ನರಮಂಡಲದ (CNS) ಗೆಡ್ಡೆಗಳ ಸಂಭವವು 100,000 ಜನಸಂಖ್ಯೆಯಲ್ಲಿ 5 ರಿಂದ 10 ಜನರಿಗೆ ವಕ್ಕರಿಸುತ್ತಿರುವ ಜೊತೆಗೆ ಶೇ 2 ರಷ್ಟು ಮಾರಣಾಂತಿಕತೆಯನ್ನು ಹೊಂದಿದೆ. ದೇಶದಲ್ಲಿ ಮಿದುಳಿನ ಕ್ಯಾನ್ಸರ್ ಅಪರೂಪವಾಗಿದ್ದರೂ, ಇತರ ಮಾರಣಾಂತಿಕತೆಗಳಿಗೆ ಹೋಲಿಸಿದರೆ ಇದು ಯುವ ಮತ್ತು ಮಧ್ಯವಯಸ್ಕ ವ್ಯಕ್ತಿಗಳಲ್ಲಿ ಹೆಚ್ಚಿನ ಗಂಭೀರತೆ ಹೊಂದಿದೆ. ಅದರಲ್ಲೂ ಮರಣ ಸಂಖ್ಯೆ ಹೆಚ್ಚಾಗಲಿದೆ. ಇತ್ತೀಚಿನ ಕೆಲವು ಅಧ್ಯಯನಗಳ ಪ್ರಕಾರ, ದೇಶದಲ್ಲಿ ಮೆದುಳಿನ ಗೆಡ್ಡೆಗಳ ಪ್ರಮಾಣವು ಸಹ ಹೆಚ್ಚುತ್ತಿದೆಯಂತೆ.

ಮೆದುಳಿನ ಗೆಡ್ಡೆಗಳು ಭಾರತೀಯರಲ್ಲಿ 10 ನೇ ಅತ್ಯಂತ ಸಾಮಾನ್ಯ ರೀತಿಯ ಗೆಡ್ಡೆಯಾಗಿ ಸ್ಥಾನ ಪಡೆದಿವೆ. ಇಂಟರ್ನ್ಯಾಷನಲ್ ಅಸೋಸಿಯೇಷನ್ ​​ಆಫ್ ಕ್ಯಾನ್ಸರ್ ರಿಜಿಸ್ಟ್ರೀಸ್ (IACR) ವರದಿಯ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 28,000 ಕ್ಕೂ ಹೆಚ್ಚು ಮೆದುಳಿನ ಗೆಡ್ಡೆಗಳ ಪ್ರಕರಣಗಳು ವರದಿಯಾಗುತ್ತಿವೆ. ವಾರ್ಷಿಕವಾಗಿ 24,000 ಕ್ಕೂ ಹೆಚ್ಚು ಜನರು ಮೆದುಳಿನ ಗೆಡ್ಡೆಗಳಿಂದ ಸಾಯುತ್ತಾರೆ ಎಂದು ವರದಿಯಾಗಿದೆ.

ನ್ಯೂರೋ ಡಿಜೆನೆರೇಟಿವ್ ಕಾಯಿಲೆಗಳಲ್ಲಿ ಇಬಿವಿ ವೈರಸ್‌ನ ಒಳಗೊಳ್ಳುವಿಕೆ: ಹಿಂದಿನ ಅಧ್ಯಯನಗಳು ವಿವಿಧ ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳಲ್ಲಿ ಇಬಿವಿ ಒಳಗೊಳ್ಳುವಿಕೆಯ ಲಿಂಕ್‌ಗಳನ್ನು ಕಂಡುಕೊಂಡಿದ್ದಾರೆ. ಆದಾಗ್ಯೂ, ಈ ವೈರಸ್ ಮೆದುಳಿನ ಕೋಶಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಅವುಗಳನ್ನು ಹೇಗೆ ಕೆಲಸ ಮಾಡುತ್ತವೆ ಎಂಬುದು ಇನ್ನೂ ಅರ್ಥವಾಗಿಲ್ಲ. ಐಐಟಿ ಇಂದೋರ್‌ನ ಸಂಶೋಧನಾ ತಂಡವು ಈ ಲಿಂಕ್ ಅನ್ನು ಅನ್ವೇಷಿಸಲು, ಮೆದುಳಿನ ಕೋಶಗಳ ಮೇಲೆ ಕ್ಯಾನ್ಸರ್ ಉಂಟುಮಾಡುವ ವೈರಸ್‌ನ ಸಂಭವನೀಯ ಪರಿಣಾಮಗಳನ್ನು ಅನ್ವೇಷಿಸಲು ರಾಮನ್ ಮೈಕ್ರೋಸ್ಪೆಕ್ಟ್ರೋಸ್ಕೋಪಿ ತಂತ್ರವನ್ನು ಬಳಸಿದೆ.

ರಾಮನ್ ಎಫೆಕ್ಟ್ ಆಧಾರಿತ ತಂತ್ರವು ಜೈವಿಕ ಮಾದರಿಗಳಲ್ಲಿ ಸೂಕ್ಷ್ಮ ರಾಸಾಯನಿಕ ಬದಲಾವಣೆಗಳನ್ನು ಕಂಡುಹಿಡಿಯಲು ಸರಳವಾದ, ವೆಚ್ಚ-ಪರಿಣಾಮಕಾರಿ ಸಾಧನವಾಗಿದೆ. ಈ ಸಂಶೋಧನೆಯನ್ನು FIST ಯೋಜನೆಯಡಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST) ಸೂಚಿಸಿದೆ. ಇನ್ನು ಎಸಿಎಸ್ ಕೆಮಿಕಲ್ ನ್ಯೂರೋಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ನರಕೋಶಗಳಲ್ಲಿನ ವಿವಿಧ ಜೈವಿಕ ಅಣುಗಳಲ್ಲಿ ಸಮಯೋಚಿತ ಮತ್ತು ಕ್ರಮೇಣ ಬದಲಾವಣೆಗಳಾಗಬಹುದು ಎಂದು ಉಲ್ಲೇಖಿಸಲಾಗಿದೆ. ಆಸ್ಟ್ರೋಸೈಟ್ ಮತ್ತು ಮೈಕ್ರೋಗ್ಲಿಯಾಗಳಂತಹ ಇತರ ಬೆಂಬಲ ಮೆದುಳಿನ ಕೋಶಗಳಲ್ಲಿ ಕಂಡುಬರುವ ಬದಲಾವಣೆಗಳಿಗೆ ಹೋಲಿಸಿದರೆ ಈ ಬದಲಾವಣೆಗಳು ವಿಭಿನ್ನವಾಗಿವೆ ಎಂದು ಕಂಡುಕೊಳ್ಳಲಾಗಿದೆ.

ಡಾ ಹೇಮ್​ಚಂದ್ರ ಝಾ ಹೇಳುವುದಿಷ್ಟು: ಈ ವಿಜ್ಞಾನಿಗಳ ಗುಂಪಿನಲ್ಲಿ ಐಐಟಿ ಇಂದೋರ್‌ನ ಇನ್‌ಫೆಕ್ಷನ್ ಬಯೋ ಇಂಜಿನಿಯರಿಂಗ್ ಗುಂಪಿನ ಗುಂಪಿನ ನಾಯಕ ಡಾ. ಹೇಮ್ ಚಂದ್ರ ಝಾ, ಅವರ ವಿದ್ಯಾರ್ಥಿಗಳಾದ ಓಂಕಾರ್ ಇಂದಾರಿ, ಶ್ವೇತಾ ಜಖಮೋಲಾ ಮತ್ತು ಮೀನಾಕ್ಷಿ ಕಂಡ್‌ಪಾಲ್ ಸೇರಿದ್ದಾರೆ. ಈ ತಂಡವು ವಸ್ತು ಮತ್ತು ಸಾಧನ ಪ್ರಯೋಗಾಲಯದ (ಭೌತಶಾಸ್ತ್ರ ವಿಭಾಗ) ಪ್ರಾಧ್ಯಾಪಕ ರಾಜೇಶ್ ಕುಮಾರ್ ನೇತೃತ್ವದ ತಂಡದ ಸಹಯೋಗದೊಂದಿಗೆ ಕೆಲಸ ಮಾಡಿದೆ. ಡಾ. ದೇವೇಶ್ ಕೆ. ಪಾಠಕ್ ಮತ್ತು ಶ್ರೀಮತಿ ಮನುಶ್ರೀ ತನ್ವಾರ್ ಅವರು ಈ ತಂಡದಲ್ಲಿದ್ದರು. ಈ ಜೀವಕೋಶಗಳಲ್ಲಿ ಕೆಲವು ಬಾರಿ ಸಾಮಾನ್ಯ ಜೈವಿಕ ಅಣು ಬದಲಾವಣೆಗಳನ್ನು ಗಮನಿಸಲಾಗಿದೆ ಎಂದು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ವಿಜ್ಞಾನಿಗಳು ಲಿಪಿಡ್, ಕೊಲೆಸ್ಟರಾಲ್, ಪ್ರೋಲಿನ್ ಮತ್ತು ಗ್ಲೂಕೋಸ್ ಅಣುಗಳು ವೈರಲ್ ಪ್ರಭಾವದ ಅಡಿ ಜೀವಕೋಶಗಳಲ್ಲಿ ಹೆಚ್ಚಾಗುವುದನ್ನು ಗಮನಿಸಿದ್ದಾರೆ. ಈ ಜೈವಿಕ ಅಣು ಘಟಕಗಳು ಅಂತಿಮವಾಗಿ ದೇಹದ ಜೀವಕೋಶಗಳ ನಿಯಂತ್ರಣವನ್ನು ತೆಗೆದುಕೊಳ್ಳುವ ವೈರಸ್‌ನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವಂತೆ. ಜೈವಿಕ ಅಣು ಬದಲಾವಣೆಗಳು ವೈರಸ್ ಹಾಗೂ ಅದರ ಸಂಬಂಧಿತ ಪರಿಣಾಮಗಳಿಗೆ ಮತ್ತು ನರವೈಜ್ಞಾನಿಕ ತೊಡಕುಗಳಿಗೆ ಸಂಬಂಧಿಸಬಹುದೇ ಎಂಬ ಬಗ್ಗೆ ಒಳನೋಟಗಳನ್ನು ಸಹ ಅಧ್ಯಯನವು ಕಂಡುಕೊಂಡಿದೆ.

ಇದನ್ನೂ ಓದಿ : ನಶೆಯಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ: ಕೊಟ್ಟಿರುವ ಸಾಲ ಕೇಳಿದ್ದಕ್ಕೆ ತಳ್ಳಿ ಕೊಲೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.