ETV Bharat / science-and-technology

ಫೇಸ್​ಬುಕ್, ಇನ್​ಸ್ಟಾದಲ್ಲಿ ನಿಮ್ಮ ಇಂಟರ್​ನೆಟ್ ಜಾಲಾಟ ಟ್ರ್ಯಾಕ್​ ಮಾಡದಂತೆ ತಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಮ್ ನಿಮ್ಮ ಇಂಟರ್​ನೆಟ್ ಜಾಲಾಟವನ್ನು ಟ್ರ್ಯಾಕ್​ ಮಾಡದಂತೆ ತಡೆಯುವ ಹೊಸ ಫೀಚರ್ ಒಂದನ್ನು ಮೆಟಾ ಪರಿಚಯಿಸಿದೆ.

How to prevent Facebook Insta from tracking your internet network Heres the information

author img

By ETV Bharat Karnataka Team

Published : Nov 3, 2023, 7:08 PM IST

ಬೆಂಗಳೂರು: ಮೆಟಾ ಇತ್ತೀಚೆಗೆ ಆಕ್ಟಿವಿಟಿ ಆಫ್ ಎಂಬ ಪ್ರೈವಸಿ ಸೆಟಿಂಗ್​ ಒಂದನ್ನು ಜಾರಿ ಮಾಡಿದೆ. ಇದರ ಸಹಾಯದಿಂದ ಬಳಕೆದಾರರು ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಮ್ ಸೇರಿದಂತೆ ಮೆಟಾದ ಪ್ಲಾಟ್​ಫಾರ್ಮ್​ಗಳಲ್ಲಿ ತಾವು ಹಂಚಿಕೊಂಡ ಡೇಟಾವನ್ನು ನಿಯಂತ್ರಿಸಬಹುದಾಗಿದೆ.

ಇಲ್ಲಿಯವರೆಗೆ, ಮೆಟಾ ನಿರಂತರವಾಗಿ ಬಳಕೆದಾರರ ವೈಯಕ್ತಿಕ ಡೇಟಾವನ್ನು ಬೇರೆ ಕಾರಣಗಳಿಗಾಗಿ ಬಳಸುತ್ತಿರುವ ಆರೋಪಗಳನ್ನು ಎದುರಿಸುತ್ತಿದೆ. ಉದಾಹರಣೆಗೆ, ಕಂಪನಿಯು ಬಳಕೆದಾರರ ಆನ್​ಲೈನ್ ಚಟುವಟಿಕೆಗಳನ್ನು ವಾಡಿಕೆಯಂತೆ ಟ್ರ್ಯಾಕ್ ಮಾಡುತ್ತದೆ ಮತ್ತು ನಂತರ ಆ ಡೇಟಾವನ್ನು ಜಾಹೀರಾತು ಉದ್ದೇಶಗಳಿಗಾಗಿ ಇತರ ಕಂಪನಿಗಳಿಗೆ ಮಾರಾಟ ಮಾಡುತ್ತದೆ. ಉದಾಹರಣೆಗೆ, ನೀವು ಬ್ಯಾಗ್​ಗಳಿಗಾಗಿ ಸರ್ಚ್ ಮಾಡಿದರೆ, ಕೆಲವೇ ಕ್ಷಣಗಳ ನಂತರ ವಿವಿಧ ಕಂಪನಿಗಳ ಬ್ಯಾಗ್​ಗಳ ಜಾಹೀರಾತುಗಳು ನಿಮಗೆ ಕಾಣಿಸಲಾರಂಭಿಸುತ್ತವೆ.

ಏತನ್ಮಧ್ಯೆ ಪ್ರೈವಸಿಯನ್ನು ಹೆಚ್ಚು ಸುರಕ್ಷಿತವಾಗಿಸಲು ಮತ್ತು ಬಳಕೆದಾರರು ತಮ್ಮ ಆನ್​ಲೈನ್ ಚಟುವಟಿಕೆಯ ಮೇಲೆ ನಿಯಂತ್ರಣ ಸಾಧಿಸುವ ಸಲುವಾಗಿ ಮೆಟಾ ಆಕ್ಟಿವಿಟಿ ಆಫ್-ಮೆಟಾ ಟೆಕ್ನಾಲಜೀಸ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದು ಮೆಟಾ ಪ್ಲಾಟ್ ಫಾರ್ಮ್​​ನ ಅಪ್ಲಿಕೇಶನ್​ಗಳು ಮತ್ತು ವೆಬ್ ಸೈಟ್​ಗಳಲ್ಲಿ ಶೇರ್ ಮಾಡುವ ಡೇಟಾವನ್ನು ನೋಡಲು ಮತ್ತು ನಿಯಂತ್ರಿಸಲು ಬಳಕೆದಾರರಿಗೆ ಅವಕಾಶ ನೀಡುವ ಪ್ರೈವಸಿ ಸೆಟ್ಟಿಂಗ್ ಆಗಿದೆ. ಇದು ವ್ಯವಹಾರಗಳು ಮತ್ತು ಸಂಸ್ಥೆಗಳೊಂದಿಗೆ ಬಳಕೆದಾರರು ನಡೆಸುವ ಸಂವಹನಗಳ ಬಗೆಗಿನ ಮಾಹಿತಿಯನ್ನು ಒಳಗೊಂಡಿರುತ್ತದೆ. ಉದಾಹರಣೆಗೆ ವ್ಯವಹಾರಗಳ ಅಪ್ಲಿಕೇಶನ್​ಗಳು ಅಥವಾ ವೆಬ್ ಸೈಟ್​ಗಳಿಗೆ ಭೇಟಿ ನೀಡಿರುವುದರ ಮಾಹಿತಿಯನ್ನು ಒಳಗೊಂಡಿರುತ್ತದೆ.

ಈಗ ನೀವು ಭೇಟಿ ನೀಡುವ ಯಾವೆಲ್ಲ ವೆಬ್​ಸೈಟ್​ಗಳು ಮೆಟಾಗೆ ಡೇಟಾ ಕಳುಹಿಸುತ್ತಿವೆ ಎಂಬುದನ್ನು ನೋಡಬಹುದು, ನಿರ್ದಿಷ್ಟ ವೆಬ್​ಸೈಟ್​ಗಳು ಆ ರೀತಿ ಮಾಡದಂತೆ ತಡೆಯಬಹುದು ಅಥವಾ ಎಲ್ಲ ಡೇಟಾವನ್ನು ಡಿಲೀಟ್ ಮಾಡಲು ಬಳಕೆದಾರರು ಈ ಸಾಧನವನ್ನು ಬಳಸಬಹುದು.

ಇನ್​ಸ್ಟಾಗ್ರಾಮ್ ನಿಮ್ಮ ಇಂಟರ್​ನೆಟ್​ ಚಟುವಟಿಕೆಯನ್ನು ಟ್ರ್ಯಾಕ್ ಮಾಡದಂತೆ ತಡೆಯಲು ಹೀಗೆ ಮಾಡಿ:

  • ಇನ್​ಸ್ಟಾಗ್ರಾಮ್ ಅಪ್ಲಿಕೇಶನ್ ತೆರೆಯಿರಿ ಮತ್ತು ಕೆಳಗಿನ ಬಲ ಮೂಲೆಯಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ.
  • ಮೇಲಿನ ಬಲ ಮೂಲೆಯಲ್ಲಿರುವ ಮೂರು ಸಮತಲ ರೇಖೆಗಳ ಮೇಲೆ ಟ್ಯಾಪ್ ಮಾಡಿ ಮತ್ತು "Settings and Privacy" ಆಯ್ಕೆ ಮಾಡಿ.
  • "Activity" ಮತ್ತು ನಂತರ "Activity Off Meta Technologies" ಮೇಲೆ ಟ್ಯಾಪ್ ಮಾಡಿ.
  • ಇತರ ಅಪ್ಲಿಕೇಶನ್ ಗಳು ಮತ್ತು ವೆಬ್ ಸೈಟ್ ಗಳಲ್ಲಿ ನಿಮ್ಮ ಚಟುವಟಿಕೆಯನ್ನು ಇನ್​​ಸ್ಟಾಗ್ರಾಮ್ ಟ್ರ್ಯಾಕ್ ಮಾಡುವುದನ್ನು ತಡೆಯಲು "Disconnect Future Activity" ಮೇಲೆ ಟಾಗಲ್ ಮಾಡಿ.

ನಿಮ್ಮ ಹಿಂದಿನ ಚಟುವಟಿಕೆಯನ್ನು ನಿರ್ವಹಿಸಲು ಬಯಸಿದರೆ ಹೀಗೆ ಮಾಡಿ:

  • "Activity Off Meta Technologies" ಪುಟದಲ್ಲಿ "Your Information and Permissions" ಮತ್ತು ನಂತರ "Your Activity off Meta Technologies" ಅನ್ನು ಟ್ಯಾಪ್ ಮಾಡಿ.
  • ಈ ಪುಟದಲ್ಲಿ ನೀವು ಈ ಮುಂದೆ ತಿಳಿಸಲಾದ ವಿಷಯಗಳನ್ನು ನಿರ್ವಹಿಸಬಹುದು.
  • ನಿಮ್ಮ ಇತ್ತೀಚಿನ ಚಟುವಟಿಕೆಯನ್ನು ನೋಡಿ
  • ನಿರ್ದಿಷ್ಟ ಅಪ್ಲಿಕೇಶನ್ ಚಟುವಟಿಕೆಯನ್ನು ಸಂಪರ್ಕಕಡಿತಗೊಳಿಸಿ
  • ಹಳೆಯ ಡೇಟಾವನ್ನು ತೆರವುಗೊಳಿಸಿ
  • ವ್ಯವಹಾರಗಳು ಡೇಟಾವನ್ನು ಹಂಚಿಕೊಳ್ಳುವುದನ್ನು ತಡೆಯಲು ಭವಿಷ್ಯದ ಚಟುವಟಿಕೆಯನ್ನು ನಿರ್ವಹಿಸಿ

ನೀವು "Manage Future Activity" ಮತ್ತು "Disconnect Future Activity" ಆಯ್ಕೆ ಮಾಡಿದರೆ, ಅದು ನಿಮ್ಮ ಹಿಂದಿನ ಚಟುವಟಿಕೆಯನ್ನು ಡಿಲೀಟ್ ಮಾಡುತ್ತದೆ.

ಫೇಸ್​ಬುಕ್ ನಿಮ್ಮ ಇಂಟರ್​ನೆಟ್​ ಚಟುವಟಿಕೆಯನ್ನು ಟ್ರ್ಯಾಕ್ ಮಾಡದಿರಲು ಹೀಗೆ ಮಾಡಿ:

  • ನಿಮ್ಮ ಫೇಸ್​ಬುಕ್ ಪ್ರೊಫೈಲ್​ಗೆ ಹೋಗಿ ಮತ್ತು ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
  • "Settings & Privacy" ಮತ್ತು ನಂತರ "Settings" ಆಯ್ಕೆ ಮಾಡಿ.
  • ಎಡ ಕಾಲಂನಲ್ಲಿ "Your Facebook Information" ಕ್ಲಿಕ್ ಮಾಡಿ ಮತ್ತು ನಂತರ "Off-Facebook Activity." ಕ್ಲಿಕ್ ಮಾಡಿ.
  • "Manage Your Off-Facebook Activity" ಕ್ಲಿಕ್ ಮಾಡಿ ಮತ್ತು ನಂತರ "Manage Future Activity" ಕ್ಲಿಕ್ ಮಾಡಿ.
  • ಇತರ ಅಪ್ಲಿಕೇಶನ್ ಗಳು ಮತ್ತು ವೆಬ್ ಸೈಟ್ ಗಳಲ್ಲಿನ ನಿಮ್ಮ ಚಟುವಟಿಕೆಯನ್ನು ಫೇಸ್​ಬುಕ್ ಟ್ರ್ಯಾಕ್ ಮಾಡದಂತೆ ತಡೆಯಲು "Future Off-Facebook Activity" ಯನ್ನು ತೆಗೆದುಹಾಕಿ.

"Manage Your Off-Facebook Activity" ಬಟನ್ ಕ್ಲಿಕ್ ಮಾಡುವ ಮೂಲಕ ಮತ್ತು ನಂತರ "Manage Activity" ಕ್ಲಿಕ್ ಮಾಡುವ ಮೂಲಕ ಫೇಸ್​ಬುಕ್​ನಿಂದ ನಿರ್ದಿಷ್ಟ ಅಪ್ಲಿಕೇಶನ್​ಗಳು ಮತ್ತು ವೆಬ್​ಸೈಟ್​ಗಳು ನಿಮ್ಮ ಡೇಟಾ ಟ್ರ್ಯಾಕ್ ಮಾಡದಂತೆ ತಡೆಯಬಹುದು.

ಇದನ್ನೂ ಓದಿ : ವಾಟ್ಸ್​ಆ್ಯಪ್​​ ಡಬಲ್ ಟ್ಯಾಪ್ ಫೀಚರ್; ವಿಡಿಯೊ ಫಾರ್ವರ್ಡ್-ರಿವೈಂಡ್​ ಮಾಡುವುದಿನ್ನು ಸರಾಗ!​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.