ಜಾಗತಿಕವಾಗಿ ಇನ್ಸ್ಟಾಗ್ರಾಮ್ ತನ್ನ ಪಬ್ಲಿಕ್ ಅಕೌಂಟ್ಗಳಲ್ಲಿನ ವಿಡಿಯೋಗಳನ್ನು ಡೌನ್ಲೋಡ್ ಮಾಡಲು ಅವಕಾಶ ನೀಡಿದೆ. ಈ ವೈಶಿಷ್ಟ್ಯವನ್ನು ಮೊದಲು ಜುಲೈನಲ್ಲಿ ಅಮೆರಿಕದಲ್ಲಿ ಆರಂಭಿಸಲಾಗಿತ್ತು ಮತ್ತು ಈಗ ಜಗತ್ತಿನ ಎಲ್ಲೆಡೆಯ ಬಳಕೆದಾರರಿಗೆ ಲಭ್ಯವಿದೆ.
ಆದರೆ, ತಮ್ಮ ಅಕೌಂಟ್ಗಳಲ್ಲಿನ ವಿಡಿಯೋಗಳನ್ನು ಯಾರೆಲ್ಲ ಡೌನ್ಲೋಡ್ ಮಾಡಿಕೊಳ್ಳಬಹುದು ಎಂಬುದನ್ನು ಬಳಕೆದಾರರು ನಿರ್ಧರಿಸಬಹುದು. ಇನ್ನು ನಿರ್ದಿಷ್ಟ ಕ್ರಿಯೇಟರ್ ತನ್ನ ವಿಡಿಯೋಗಳನ್ನು ಬೇರೆಯವರು ಡೌನ್ಲೋಡ್ ಮಾಡುವ ಆಯ್ಕೆಯನ್ನು ಆನ್ ಮಾಡಿದ್ದರೆ ಮಾತ್ರ ಅಂಥ ಅಕೌಂಟಿನ ವಿಡಿಯೋಗಳನ್ನು ಡೌನ್ಲೋಡ್ ಮಾಡಲು ಸಾಧ್ಯ.
ನೀವು ಇನ್ಸ್ಟಾಗ್ರಾಮ್ನ ಯಾವುದಾದರೂ ಪಬ್ಲಿಕ್ ಅಕೌಂಟಿನಿಂದ ರೀಲ್ಗಳನ್ನು ಡೌನ್ಲೋಡ್ ಮಾಡಲು ಯೋಜಿಸುತ್ತಿದ್ದರೆ, ಅದನ್ನು ಹೇಗೆ ಮಾಡಬೇಕೆಂಬ ಬಗ್ಗೆ ಇಲ್ಲಿದೆ ಮಾಹಿತಿ.
ರೀಲ್ ಡೌನ್ಲೋಡ್ ಮಾಡುವ ಮುನ್ನ ತಿಳಿದುಕೊಳ್ಳಬೇಕಾದ ವಿಷಯಗಳು:
- ಮೊದಲನೆಯದಾಗಿ, ರೀಲ್ಗಳನ್ನು ಪಬ್ಲಿಕ್ ಇನ್ಸ್ಟಾಗ್ರಾಮ್ ಖಾತೆಗಳಿಂದ ಮಾತ್ರ ಡೌನ್ಲೋಡ್ ಮಾಡಬಹುದು
- ಕಂಟೆಂಟ್ ಕ್ರಿಯೇಟರ್ಗಳು ಅಕೌಂಟ್ ಸೆಟ್ಟಿಂಗ್ ಮೂಲಕ ತಮ್ಮ ರೀಲ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅನುಮತಿಸುವ ಅಥವಾ ತಡೆಗಟ್ಟುವ ಆಯ್ಕೆಯನ್ನು ಹೊಂದಿದ್ದಾರೆ.
- ಡೌನ್ಲೋಡ್ ಮಾಡಿದ ರೀಲ್ಗಳು ಇನ್ಸ್ಟಾಗ್ರಾಮ್ ವಾಟರ್ ಮಾರ್ಕ್, ಬಳಕೆದಾರರ ಹೆಸರು ಮತ್ತು ಆಡಿಯೊ ಅಂಶಗಳನ್ನು ಹೊಂದಿರುತ್ತವೆ.
- ರೀಲ್ಸ್ ಡೌನ್ಲೋಡ್ಗಳು ವೈಯಕ್ತಿಕ ಬಳಕೆಗಾಗಿ ಮಾತ್ರ ಇದ್ದು, ವಾಣಿಜ್ಯ ಬಳಕೆಗಾಗಿ ಅಲ್ಲ.
- 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇನ್ಸ್ಟಾಗ್ರಾಮ್ ಬಳಕೆದಾರರ ಡೌನ್ಲೋಡ್ ಆಯ್ಕೆಯು ಪೂರ್ವನಿಯೋಜಿತವಾಗಿ ಆಫ್ ಆಗಿರುತ್ತದೆ.
ನಿಮ್ಮ ಇನ್ಸ್ಟಾಗ್ರಾಮ್ ಖಾತೆಗೆ ರೀಲ್ ಡೌನ್ಲೋಡ್ ಆಯ್ಕೆಯನ್ನು ಸಕ್ರಿಯಗೊಳಿಸುವುದು ಹೇಗೆ?:
- ಮೊದಲಿಗೆ ನಿಮ್ಮರೀಲ್ ಅನ್ನು ರೆಕಾರ್ಡ್ ಮಾಡುವ ಮತ್ತು ಎಡಿಟ್ ಮಾಡುವ ಮೂಲಕ ಪ್ರಾರಂಭಿಸಿ.
- ಕೆಳಗಿನ ಬಲ ಮೂಲೆಯಲ್ಲಿರುವ "Next"" ಟ್ಯಾಪ್ ಮಾಡಿ.
- ಕೆಳಭಾಗದಲ್ಲಿ "More options" ಟ್ಯಾಪ್ ಮಾಡಿ.
- ಕೆಳಗೆ ಸ್ಕ್ರಾಲ್ ಮಾಡಿ ಮತ್ತು "Advanced Settings" ಟ್ಯಾಪ್ ಮಾಡಿ.
- "Allow people to download your reels" ಹುಡುಕಿ ಮತ್ತು ಸೆಟ್ಟಿಂಗ್ ಅನ್ನು ಆನ್ ಅಥವಾ ಆಫ್ ಮಾಡಿ.
- ಎಲ್ಲ ರೀಲ್ ಗಳಿಗೆ ಡೌನ್ ಲೋಡ್ ಅನ್ನು ಕ್ರಿಯಾತ್ಮಕಗೊಳಿಸಬೇಕೆ ಅಥವಾ ನಿಷ್ಕ್ರಿಯಗೊಳಿಸಬೇಕೆ ಅಥವಾ ನೀವು ಅಪ್ ಲೋಡ್ ಮಾಡುತ್ತಿರುವುದನ್ನು ಮಾತ್ರ ಆಯ್ಕೆಮಾಡಿ.
- ಹಿಂತಿರುಗಲು ಮೇಲಿನ ಎಡ ಬಾಣವನ್ನು ಟ್ಯಾಪ್ ಮಾಡಿ.
- ಅಂತಿಮವಾಗಿ, ಕೆಳಭಾಗದಲ್ಲಿ "Share" ಟ್ಯಾಪ್ ಮಾಡಿ.
ಪಬ್ಲಿಕ್ ಅಕೌಂಟಿನಿಂದ ರೀಲ್ ಡೌನ್ಲೋಡ್ ಮಾಡುವುದು ಹೇಗೆ?
- ಇನ್ಸ್ಟಾಗ್ರಾಮ್ ಅಪ್ಲಿಕೇಶನ್ ತೆರೆಯಿರಿ ಮತ್ತು ನೀವು ಡೌನ್ಲೋಡ್ ಮಾಡಲು ಬಯಸುವ ರೀಲ್ಗೆ ನ್ಯಾವಿಗೇಟ್ ಮಾಡಿ.
- "Share" ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು "Download" ಆಯ್ಕೆಯನ್ನು ಆರಿಸಿ.
- ಈಗ ರೀಲ್ ಡೌನ್ ಲೋಡ್ ಆಗುತ್ತದೆ ಮತ್ತು ಮೊಬೈಲ್ನ ಕ್ಯಾಮೆರಾ ರೋಲ್ ನಲ್ಲಿ ಸೇವ್ ಆಗುತ್ತದೆ.
ಇದನ್ನೂ ಓದಿ: ವರ್ಷಕ್ಕೆ ₹6 ಲಕ್ಷ ಗಳಿಸುತ್ತಿದ್ದಾರೆ ಭಾರತದ ವೃತ್ತಿಪರ ಗೇಮರ್ಸ್: ಅಧ್ಯಯನ ವರದಿ