ETV Bharat / science-and-technology

ನಿಧಾನವಾಗಲಿದೆ ಐಟಿ ಉದ್ಯೋಗಿಗಳ ನೇಮಕಾತಿ; ಐಸಿಆರ್​ಎ ವರದಿ - ಐಟಿ ಸೇವಾ ಉದ್ಯಮ

ಮುಂದಿನ ಕೆಲ ತ್ರೈಮಾಸಿಕಗಳಲ್ಲಿ ಐಟಿ ವಲಯದ ನೇಮಕಾತಿ ಕಡಿಮೆಯಾಗಬಹುದು ಎಂದು ವರದಿ ಹೇಳಿದೆ.

Hiring in Indian IT services industry to remain muted over next 2-3 quarters

author img

By ETV Bharat Karnataka Team

Published : Dec 4, 2023, 6:30 PM IST

ನವದೆಹಲಿ: ಮುಂದಿನ ಎರಡು-ಮೂರು ತ್ರೈಮಾಸಿಕಗಳಲ್ಲಿ ಭಾರತದ ಐಟಿ ವಲಯದ ನೇಮಕಾತಿ ಬಹುತೇಕ ಸ್ತಬ್ಧವಾಗುವ ಸಾಧ್ಯತೆಯಿದೆ ಎಂದು ಹೊಸ ವರದಿಯೊಂದು ಸೋಮವಾರ ತಿಳಿಸಿದೆ. ಬೇಡಿಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಐಟಿ ಕಂಪನಿಗಳು ತಮ್ಮ ಲಾಭವನ್ನು ಸ್ಥಿರವಾಗಿಟ್ಟುಕೊಳ್ಳುವ ಪ್ರಯತ್ನದಲ್ಲಿ ಹೊಸ ನೇಮಕಾತಿಗಳನ್ನು ಕಡಿಮೆ ಮಾಡಲಿವೆ ಎಂದು ವರದಿ ಹೇಳಿದೆ.

ಕೋವಿಡ್ -19 ಸಾಂಕ್ರಾಮಿಕ ಅಲೆಯ ನಂತರ ಡಿಜಿಟಲೀಕರಣದ ಬೇಡಿಕೆ ವೇಗಗೊಂಡಿದ್ದರಿಂದ, ಭಾರತೀಯ ಐಟಿ ಸೇವಾ ಕಂಪನಿಗಳು ಹಣಕಾಸು ವರ್ಷ 2021 ರ ಎರಡನೇ ತ್ರೈಮಾಸಿಕದಿಂದ ಹಣಕಾಸು ವರ್ಷ 2023 ರ ಎರಡನೇ ತ್ರೈಮಾಸಿಕದವರೆಗೆ ವ್ಯಾಪಕವಾಗಿ ಉದ್ಯೋಗಿಗಳನ್ನು ನೇಮಿಸಿಕೊಂಡಿವೆ ಎಂದು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಐಸಿಆರ್​ಎ ವರದಿ ತಿಳಿಸಿದೆ.

ಅದೇ ಸಮಯದಲ್ಲಿ 2022-23ರ ಅವಧಿಯಲ್ಲಿ ಪ್ರತಿಭಾವಂತ ಉದ್ಯೋಗಿಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ಇರುವ ಕಂಪನಿ ಬಿಟ್ಟು ಬೇರೆ ಕಡೆ ಕೆಲಸಕ್ಕೆ ಸೇರುವ ಉದ್ಯೋಗಿಗಳ ಪ್ರಮಾಣ ಶೇಕಡಾ 22 ರಿಂದ 23 ಕ್ಕೆ ಹೆಚ್ಚಳವಾಗಿದೆ. ಈ ಕಾರಣದಿಂದ 2022ರ ಹಣಕಾಸು ವರ್ಷದಲ್ಲಿ 2,73,000 ಮತ್ತು 2023ರ ಮೊದಲ ತ್ರೈಮಾಸಿಕದಲ್ಲಿ 94,400 ಉದ್ಯೋಗಿಗಳನ್ನು ಉದ್ಯಮದ ಅಗ್ರ ಐದು ಕಂಪನಿಗಳು ನೇಮಕ ಮಾಡಿಕೊಳ್ಳಲು ಕಾರಣವಾಯಿತು.

ಆದಾಗ್ಯೂ, 2023 ರ ಮೂರನೇ ತ್ರೈಮಾಸಿಕದಿಂದ, ಜಾಗತಿಕ ಸ್ಥೂಲ ಆರ್ಥಿಕ ಪರಿಸರದಲ್ಲಿನ ಅನಿಶ್ಚಿತತೆಯಿಂದಾಗಿ ಐಟಿ ಸೇವೆಗಳ ಒಟ್ಟಾರೆ ಬೇಡಿಕೆ ದುರ್ಬಲಗೊಂಡಿದೆ ಎಂದು ವರದಿ ತಿಳಿಸಿದೆ. ಇದು ಈ ಅವಧಿಯಲ್ಲಿ ನೇಮಕಾತಿ ಕಡಿಮೆಯಾಗಲು ಕಾರಣವಾಯಿತು. ಕಂಪನಿಗಳು ನೇಮಕಾತಿಯನ್ನು ಕಡಿಮೆ ಮಾಡಿ ಒಟ್ಟಾರೆ ಗುಣಮಟ್ಟವನ್ನು ಸುಧಾರಿಸುವತ್ತ ಗಮನ ಹರಿಸಿವೆ.

ಪ್ರಮುಖ ಮಾರುಕಟ್ಟೆಗಳಾದ ಯುಎಸ್ ಮತ್ತು ಯುರೋಪ್​ನಲ್ಲಿನ ಅನಿಶ್ಚಿತ ಆರ್ಥಿಕ ವಾತಾವರಣದಿಂದಾಗಿ ಭಾರತೀಯ ಐಟಿ ಸೇವಾ ಉದ್ಯಮದ ಆದಾಯದ ಬೆಳವಣಿಗೆ 2024 ರ ಹಣಕಾಸು ವರ್ಷದಲ್ಲಿ ಡಾಲರ್ ಲೆಕ್ಕದಲ್ಲಿ ಶೇಕಡಾ 3 ರಿಂದ 5 ರಷ್ಟು ಕಡಿಮೆಯಾಗಬಹುದು ಎಂದು ಐಸಿಆರ್​ಎ ನಿರೀಕ್ಷಿಸಿದೆ.

"ಐಟಿ ಉದ್ಯಮದ ಮಂದಗತಿಯು ಇನ್ನೂ ಒಂದೆರಡು ತ್ರೈಮಾಸಿಕಗಳವರೆಗೆ ಮುಂದುವರಿಯಬಹುದು. ಇದು ಒಟ್ಟಾರೆ ನೇಮಕಾತಿಯಲ್ಲಿ ನಿಧಾನಗತಿ ತರಲಿದೆ" ಎಂದು ವರದಿ ತಿಳಿಸಿದೆ. ಇತ್ತೀಚಿನ ತ್ರೈಮಾಸಿಕಗಳಲ್ಲಿ ಕೆಲಸ ಬದಲಾಯಿಸುವ ಉದ್ಯೋಗಿಗಳ ಪ್ರಮಾಣ ಕುಸಿದಿದೆ. ಇದು ಉದ್ಯಮದಲ್ಲಿ ಬೇಡಿಕೆ-ಪೂರೈಕೆ ಹೊಂದಾಣಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ : ದಾಖಲೆಯ ಏರಿಕೆ ಕಂಡ ಷೇರು ಮಾರುಕಟ್ಟೆ; ಸೆನ್ಸೆಕ್ಸ್​ 1383 & ನಿಫ್ಟಿ 418 ಪಾಯಿಂಟ್ ಹೆಚ್ಚಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.