ಹೈದರಾಬಾದ್: Defense technology in India: ಅತ್ಯಾಧುನಿಕ ತಂತ್ರಜ್ಞಾನದ ಸಹಾಯದೊಂದಿಗೆ ನಡೆಯುವ ಹೈಟೆಕ್ ಯುದ್ಧಗಳಿಗೆ ಭಾರತವೂ ಸನ್ನದ್ಧವಾಗುತ್ತಿದೆ. ಅದಕ್ಕೆ ಹೊಂದಿಕೆಯಾಗುವ ಸಾಧನ ಸಂಪತ್ತನ್ನು ಒದಗಿಸುವುದು ಈಗಿನ ತುರ್ತು ಅಗತ್ಯವೂ ಆಗಿದೆ.
ಪ್ರಸ್ತುತ ವ್ಯವಸ್ಥೆಯ ಸಮರ್ಥತೆಯನ್ನು ಪರೀಕ್ಷಿಸಲಾಗುತ್ತಿದೆ. ರಷ್ಯಾ-ಉಕ್ರೆನ್‌ನಲ್ಲಿ ಆಧುನಿಕ ಸಂವಹನ, ಸೈಬರ್, ಶಿಕ್ಷಣದ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುವ ಯುದ್ಧದ ಬಗ್ಗೆ ಅಧ್ಯಯನ ಮಾಡಿ, ಆ ನಿಟ್ಟಿನಲ್ಲಿ ಭಾರತ ತನ್ನದೇ ಆದ ತಂತ್ರಗಳನ್ನು ರೂಪಿಸಿಕೊಳ್ಳುತ್ತಿದೆ. ಭಾರತ ಸೈನ್ಯ ಜುಲೈ 25 ರಿಂದ 29ರವರೆಗೆ ನಡೆದ 'ಸ್ಕೈಲೈಟ್' ಹೆಸರಿನ ಪ್ರಾಯೋಗಿಕ ಪರೀಕ್ಷೆಗಳನ್ನು ಕೈಗೊಂಡಿದೆ. ಆ ಸಂದರ್ಭದಲ್ಲಿ ರೋಡಸಿನಲ್ಲಿರುವ ತನ್ನ ವ್ಯವಸ್ಥೆಯನ್ನು ಪರೀಕ್ಷಿಸಿಕೊಂಡಿದೆ. ಉಪಗ್ರಹ ಆಧಾರಿತ ಸಂವಹನವನ್ನೂ ಇದೇ ಸಂದರ್ಭದಲ್ಲಿ ಪರಿಶೀಲನೆಗೊಳಪಡಿಸಿ, ಅದರ ಸಾಮರ್ಥ್ಯವನ್ನು ಪರೀಕ್ಷೆ ಮಾಡಿಕೊಂಡಿದೆ.
ಭಾರತ ಸೈಬರ್ ವಾರ್‌ಫೇರ್: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಗೆ ಸಂಬಂಧಿಸಿದ ಅನೇಕ ಉಪಗ್ರಹಗಳನ್ನು ಸೈನ್ಯ ಬಳಸುತ್ತಿದೆ. ವಿನ್ಯಾಸಗಳಲ್ಲಿ ಸ್ಟಾಟಿಕ್, ಸಾಗಣೆ ಯೋಗ್ಯ, ಸೈನಿಕರು ಮೋಸ ಹೋಗದಂತೆ ತಂತ್ರಜ್ಞಾನವನ್ನು ಅಧಿಕಾರಿಗಳು ಪರೀಕ್ಷಿಸಿದ್ದಾರೆ. ಶತ್ರು ಭೂಭಾಗದಲ್ಲಿ ಸಹ ಕಾರ್ಯನಿರ್ವಹಿಸಲು ಸಾಧ್ಯಗುವಂತಹ ಚಿಕ್ಕಪಾಟಿ ಟ್ಯಾಕ್ಟಿಕಲ್ ಸಂವಹನ ಸೇರಿದಂತೆ ಇತರ ತಾಂತ್ರಿಕ ಪರಿಕರಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ಅಷ್ಟೇ ಅಲ್ಲ ಉಕ್ರೇನ್ ಯುದ್ಧದ ಅನುಭವದ ಆಧಾರದ ಮೇಲೆ ಸೈನ್ಯವನ್ನು ಸನ್ನದ್ಧವಾಗಿಡಲು ಬೇಕಾದ ಕ್ರಮಗಳನ್ನು ಹಿರಿಯ ಅಧಿಕಾರಿಗಳು ಗುರುತಿಸಿದ್ದಾರೆ.
ಸ್ಪೇಸ್‌ಎಕ್ಸ್ ಸಂಸ್ಥೆಗೆ ಸೇರಿದ 'ಸ್ಟಾರ್‌ಲಿಂಕ್' ಮಾದರಿಯ ವಿಶ್ವಾಸಾರ್ಹ ಉಪಗ್ರಹ ಸಂವಹನವನ್ನು ಹೇಗೆಲ್ಲ ಸಮರ್ಥವಾಗಿ ಬಳಕೆ ಮಾಡಿಕೊಳ್ಳಬಹುದು ಎಂಬುದುನ್ನು ಸೇನಾಧಿಕಾರಿಗಳು ಗುರುತಿಸಿದ್ದಾರೆ. ಈ ಎಲ್ಲ ಸಂಗತಿಗ ಆಧಾರದ ಮೇಲೆ, ಉದ್ಯಮಗಳು, ವಿದ್ಯಾಸಂಸ್ಥೆಗಳ ಸಹಭಾಗಿತ್ವದಲ್ಲಿ ಕೈಯಲ್ಲಿ ಹಿಡಿದು ಹೋಗುವ, ಭದ್ರವಾದ ಉಪಗ್ರಹ ಫೋನ್‌ಗಳನ್ನು ಅಭಿವೃದ್ಧಿಪಡಿಸಲು ಭಾರತೀಯ ಸೇನೆ ಕಸರತ್ತು ನಡೆಸಿದೆ.
ಈ ಆಧುನಿಕ ಯುಗದಲ್ಲಿ ಮಾಹಿತಿ ಸುರಕ್ಷತೆಯ ಮೇಲೆ ಸಹ ಸೈನ್ಯ ಗಮನ ಇರಿಸಿದೆ. ಶತ್ರುದೇಶಗಳ ಕ್ವಾಂಟಮ್ ಕಂಪ್ಯೂಟರ್‌ಗಳ ದಾಳಿಯನ್ನು ಎದುರಿಸಲು ಸಮರ್ಥ ನೀತಿಯನ್ನು ರೂಪಿಸುತ್ತಿದೆ. ಸಾಂಪ್ರದಾಯಿಕ ಕ್ರಿಪ್ಟೋಗ್ರಾಫಿಕ್ ವ್ಯವಸ್ಥೆಗಳನ್ನು ಕ್ವಾಂಟಮ್ ಕಂಪ್ಯೂಟರ್ ಮೂಲಕ ಸಂಪೂರ್ಣವಾಗಿ ಅಥವಾ ಭಾಗಶಃ ಛೇದಿಸಲು ಸಾಧ್ಯವಾಗುವುದೇ ಎಂಬ ಬಗ್ಗೆಗೂ ಪರೀಕ್ಷಿಸಲಾಗುತ್ತಿದೆ. ಈ ಸಾಮರ್ಥ್ಯ ಒಂದು ದೇಶಕ್ಕೆ ದೊಡ್ಡ ಆಯುಧ. ಈ ಮೂಲಕ ಶತ್ರುದೇಶವನ್ನು ಘಾಸಿಗೊಳಿಸಬಹುದು. ಈ ಬಗ್ಗೆ ಸೇನೆ ಯೋಚಿಸುತ್ತಿದೆ.
ಇದನ್ನು ಓದಿ:ಚಂದ್ರನ ಬಳಿ ಪ್ರಯಾಣ ಬೆಳಸಿದ ದಕ್ಷಿಣ ಕೊರಿಯಾದ ಬಾಹ್ಯಾಕಾಶ ನೌಕೆ!