ETV Bharat / science-and-technology

ಕ್ರೋಮ್ ಬ್ರೌಸರ್ ಬಳಸುತ್ತಿದ್ದರೆ ತಕ್ಷಣ ಅಪ್ಡೇಟ್ ಮಾಡಿ.. ಇಲ್ಲದಿದ್ದರೆ ಅಪಾಯ ಖಚಿತ - ಕ್ರೋಮ್ ಅನ್ನು ರಿಲಾಂಚ್

ಗೂಗಲ್ ಕ್ರೋಮ್ ಬಳಸುವ ವಿಂಡೋಸ್, ಮ್ಯಾಕ್ ಮತ್ತು ಲಿನಕ್ಸ್​ ಬಳಕೆದಾರರಿಗಾಗಿ ಗೂಗಲ್ ಹೊಸ ಸೆಕ್ಯೂರಿಟಿ ಪ್ಯಾಚ್ ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ಈ ಪ್ಯಾಚ್ ಎಲ್ಲರಿಗೂ ಲಭ್ಯವಾಗಲಿದೆ.

ಕ್ರೋಮ್ ಬ್ರೌಸರ್ ಬಳಸುತ್ತಿದ್ದರೆ ತಕ್ಷಣ ಅಪ್ಡೇಟ್ ಮಾಡಿ.. ಇಲ್ಲದಿದ್ದರೆ ಅಪಾಯ ಖಚಿತ
Google warns users to quickly update Chrome to avoid hacking risk
author img

By

Published : Sep 6, 2022, 4:19 PM IST

ನವದೆಹಲಿ: ತನ್ನ ಕ್ರೋಮ್​ ಬ್ರೌಸರ್​​ನ ಹೊಸ ಸೆಕ್ಯೂರಿಟಿ ಅಪ್ಡೇಟ್ ಅನ್ನು ತಕ್ಷಣವೇ ಇನ್​ಸ್ಟಾಲ್ ಮಾಡಿಕೊಳ್ಳಿ ಎಂದು ಗೂಗಲ್ ತನ್ನ ಬಳಕೆದಾರರಿಗೆ ಸೂಚಿಸಿದೆ. ಪ್ರಬಲ ಬಗ್ ಒಂದರ ಮೂಲಕ ಹ್ಯಾಕರ್​ಗಳು ಹ್ಯಾಕಿಂಗ್​ ಪ್ರಯತ್ನಗಳನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಗೂಗಲ್ ಈ ಎಚ್ಚರಿಕೆ ರವಾನಿಸಿದೆ.

'CVE-2022-3075' ಹೆಸರಿನ ಬಗ್ ಕಾಣದಂತೆ ಇದ್ದು, ಇದರಿಂದ ಅಪಾಯವಿದೆ ಮತ್ತು Insufficient data validation in Mojo ಎಂಬ ಸಂದೇಶವನ್ನು ಇದು ತೋರಿಸುತ್ತದೆ ಎಂದು ಹೆಸರು ಬಹಿರಂಗಪಡಿಸದ ಸೆಕ್ಯೂರಿಟಿ ರಿಸರ್ಚರ್ ಒಬ್ಬರು ಹೇಳಿದ್ದಾರೆ. ಗೂಗಲ್ ಕ್ರೋಮ್ ಬಳಸುವ ವಿಂಡೋಸ್, ಮ್ಯಾಕ್ ಮತ್ತು ಲಿನಕ್ಸ್​ ಬಳಕೆದಾರರಿಗಾಗಿ ಗೂಗಲ್ ಈ ಹೊಸ ಸೆಕ್ಯೂರಿಟಿ ಪ್ಯಾಚ್ ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ಈ ಪ್ಯಾಚ್ ಎಲ್ಲರಿಗೂ ಲಭ್ಯವಾಗಲಿದೆ.

ಬಹುತೇಕ ಬಳಕೆದಾರರಿಗಾಗಿ ಈ ಸಮಸ್ಯೆಯನ್ನು ಅಪ್ಡೇಟ್ ಮೂಲಕ ಫಿಕ್ಸ್​ ಮಾಡಲಾಗಿದೆ ಮತ್ತು ಇತರೆ ಥರ್ಡ್​ ಪಾರ್ಟಿ ಲೈಬ್ರರಿಗಳಲ್ಲಿ ಈ ಬಗ್ ಉಳಿದುಕೊಂಡಿರುವುದು ಕಂಡು ಬಂದಲ್ಲಿ, ನಾವು ನಿರ್ಬಂಧಗಳನ್ನು ಮುಂದುವರಿಸಲಿದ್ದೇವೆ ಎಂದು ಗೂಗಲ್ ಹೇಳಿದೆ. ಇದು ಈ ವರ್ಷದಲ್ಲಿ ಕ್ರೋಮ್ ಎದುರಿಸುತ್ತಿರುವ ಆರನೇ ಝೀರೋ ಡೇ ವಲ್ನರೇಬಿಲಿಟಿ (zero-day vulnerability) ಅಪಾಯವಾಗಿದೆ.

ಹೊಸ ಸೆಕ್ಯೂರಿಟಿ ಅಪ್ಡೇಟ್ ಆ್ಯಕ್ಟಿವೇಟ್ ಮಾಡಿಕೊಳ್ಳಲು ಕ್ರೋಮ್ ಬಳಕೆದಾರರು ಕ್ರೋಮ್ ಅನ್ನು ರಿಲಾಂಚ್ ಮಾಡಬೇಕಾಗುತ್ತದೆ. ಆಗಸ್ಟ್ 30 ರಂದು ಗೂಗಲ್ ಕ್ರೋಮ್​ನ 105ನೇ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಈಗ ಅಪ್ಡೇಟ್ ನೀಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.