ETV Bharat / science-and-technology

ಹದಿಹರೆಯದವರನ್ನು ಸಾಮಾಜಿಕ ಮಾಧ್ಯಮಗಳಿಂದ ನಿಷೇಧಿಸದಂತೆ ಗೂಗಲ್ ಒತ್ತಾಯ - ಈಟಿವಿ ಭಾರತ ಕನ್ನಡ

ಆನ್ಲೈನ್​ನಲ್ಲಿ ಮಕ್ಕಳು ಹಾಗೂ ಹದಿಹರೆಯದವರನ್ನು ಗುರುತಿಸಲು ವಯಸ್ಸು ಗುರುತಿಸುವ ತಂತ್ರಜ್ಞಾನ ಅಳವಡಿಸಲು ಅಮೆರಿಕ ಮುಂದಾಗಿದೆ.

Google urges US lawmakers not to ban teenagers from social media

author img

By ETV Bharat Karnataka Team

Published : Oct 17, 2023, 12:47 PM IST

ಸ್ಯಾನ್ ಫ್ರಾನ್ಸಿಸ್ಕೋ: ಹದಿಹರೆಯದವರನ್ನು ಸಾಮಾಜಿಕ ಮಾಧ್ಯಮಗಳಿಂದ ನಿಷೇಧಿಸದಂತೆ ಗೂಗಲ್ ಯುಎಸ್ ಕಾಂಗ್ರೆಸ್​ಗೆ ಮನವಿ ಮಾಡಿದೆ. ಸಾಮಾಜಿಕ ಮಾಧ್ಯಮ ಬಳಸಲು ವಯಸ್ಸಿನ ಪರಿಶೀಲನೆ ತಂತ್ರಜ್ಞಾನ (age-verification technology) ಅಳವಡಿಸುವಂಥ ಸಮಸ್ಯಾತ್ಮಕ ರಕ್ಷಣಾ ಕ್ರಮಗಳನ್ನು ಅದು ಕೈಬಿಡುವಂತೆ ಸಂಸದರನ್ನು ಒತ್ತಾಯಿಸಿದೆ.

ಸೆನೆಟರ್ ಎಲಿಜಬೆತ್ ವಾರೆನ್ (ಡಿ-ಎಂಎ) ಹಾಗೂ ಇನ್ನೂ ಹಲವಾರು ಸಂಸದರು ಮಕ್ಕಳ ಆನ್​ಲೈನ್ ಸುರಕ್ಷತಾ ಕಾಯ್ದೆ ಜಾರಿಗೊಳಿಸುವಂತೆ ಒತ್ತಾಯಿಸಿದ ನಂತರ ಟೆಕ್ ದೈತ್ಯ ಗೂಗಲ್ ತನ್ನ 'ಆನ್​ಲೈನ್​ನಲ್ಲಿ ಮಕ್ಕಳು ಮತ್ತು ಹದಿಹರೆಯದವರನ್ನು ರಕ್ಷಿಸುವ ಶಾಸಕಾಂಗ ಮಾರ್ಗಸೂಚಿ' ಅನ್ನು ಬಿಡುಗಡೆ ಮಾಡಿದೆ.

ಆನ್​ಲೈನ್ ಬಳಕೆಯಲ್ಲಿ ಸುಧಾರಣೆಗಳನ್ನು ತರಲು ಮತ್ತು ಇಂಟರ್ನೆಟ್ ಬಳಸುವಾಗ ಮಕ್ಕಳು ಮತ್ತು ಹದಿಹರೆಯದವರನ್ನು ಸುರಕ್ಷಿತವಾಗಿಡಲು ಪ್ರಯತ್ನಿಸುವ ಕಾನೂನುಗಳಿಗೆ ಕೆಲ ತತ್ವಗಳನ್ನು ಈ ಮಾರ್ಗಸೂಚಿ ರೂಪಿಸುತ್ತದೆ ಎಂದು ಗೂಗಲ್ ಮತ್ತು ಆಲ್ಫಾಬೆಟ್​ನ ಜಾಗತಿಕ ವ್ಯವಹಾರಗಳ ಅಧ್ಯಕ್ಷ ಕೆಂಟ್ ವಾಕರ್ ಹೇಳಿದ್ದಾರೆ.

"ನಮ್ಮ ಅನುಭವಗಳು ಮತ್ತು ದೃಷ್ಟಿಕೋನಗಳನ್ನು ಹಂಚಿಕೊಳ್ಳುವುದರಿಂದ ಸಮಸ್ಯೆಗಳ ಪರಿಹಾರದಲ್ಲಿ ತೊಡಗಿಸಿಕೊಂಡಿರುವ ನೀತಿ ನಿರೂಪಕರು ಮತ್ತು ಕಾನೂನು ತಜ್ಞರ ಕೆಲಸದಲ್ಲಿ ಸಹಾಯಕವಾಗಲಿದೆ ಎಂದು ನಾವು ಭಾವಿಸುತ್ತೇವೆ ಮತ್ತು ಅವರೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ" ಎಂದು ವಾಕರ್ ಸೋಮವಾರ ತಡರಾತ್ರಿ ಹೇಳಿದರು.

ಆನ್​ಲೈನ್​ನಲ್ಲಿನ ಅನುಭವಗಳು ಆರೋಗ್ಯಕರವಾಗಿರುವಂತೆ ಅದನ್ನು ವಿನ್ಯಾಸಗೊಳಿಸುವ ಮತ್ತು ನಿರ್ಮಿಸುವ ಜವಾಬ್ದಾರಿ ತಂತ್ರಜ್ಞಾನ ಕಂಪನಿಗಳದ್ದಾಗಿದೆ ಎಂಬ ಸಾರ್ವಜನಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ತಜ್ಞರ ಅಭಿಪ್ರಾಯವನ್ನು ಕಂಪನಿ ಒಪ್ಪುತ್ತದೆ ಎಂದು ಗೂಗಲ್ ಹೇಳಿದೆ.

"ಕಾನೂನು ರೂಪಿಸುವವರು ಈ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುತ್ತಿರುವಾಗ, ಅವರು ಈ ಮಸೂದೆಗಳ ವ್ಯಾಪಕ ಪರಿಣಾಮಗಳನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು ಮತ್ತು ಅಗತ್ಯ ಸೇವೆಗಳಿಗೆ ಪ್ರವೇಶ ನಿರ್ಬಂಧಿಸುವುದು, ಜನರು (ವಯಸ್ಕರು ಸೇರಿದಂತೆ) ಅನಗತ್ಯ ಗುರುತಿಸುವಿಕೆ ಅಥವಾ ಸೂಕ್ಷ್ಮ ವೈಯಕ್ತಿಕ ಮಾಹಿತಿ ಸಲ್ಲಿಸುವಂತೆ ಒತ್ತಾಯಿಸುವುದು ಅಥವಾ ವಯಸ್ಸಾದ ಹದಿಹರೆಯದವರನ್ನು ಕಿರಿಯ ಮಗುವಿನಂತೆ ಪರಿಗಣಿಸುವುದು ಮುಂತಾದ ಅಡ್ಡಪರಿಣಾಮಗಳನ್ನು ತಪ್ಪಿಸಬೇಕು" ಎಂದು ಗೂಗಲ್ ವಾದಿಸಿದೆ.

ಮಕ್ಕಳನ್ನು ಗುರಿಯಾಗಿಸಿ ಜಾಹೀರಾತು ತೋರಿಸುವುದನ್ನು ನಿಲ್ಲಿಸುವಂತೆ ಅಮೆರಿಕ ಸಂಸದರು ಟೆಕ್ ಕಂಪನಿಗಳಿಗೆ ಕರೆ ನೀಡಿದ್ದಾರೆ. ಈ ವಿಷಯದಲ್ಲಿ ಬ್ಲಾಗ್ ಪೋಸ್ಟ್​ನಲ್ಲಿ ಬರೆದಿರುವ ಯೂಟ್ಯೂಬ್ ಸಿಇಒ ನೀಲ್ ಮೋಹನ್, ಯೂಟ್ಯೂಬ್ ಮಕ್ಕಳಿಗೆ ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ತೋರಿಸುವುದಿಲ್ಲ ಮತ್ತು ಪೋಷಕರಿಗೆ ಪೇರೆಂಟಲ್ ಕಂಟ್ರೋಲ್ ಗಳನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ನಾಸಾ ರೋವರ್ ಚಾಲೆಂಜ್​ಗೆ ಅರ್ಹತೆ ಪಡೆದ ಭಾರತದ 7 ತಂಡಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.