ETV Bharat / science-and-technology

ಕಡಿಮೆ ಬಳಕೆ ಕಾರಣ ಚೀನಾದಲ್ಲಿ ಗೂಗಲ್​ ಅನುವಾದ ಸೇವೆ ಬಂದ್​

author img

By

Published : Oct 4, 2022, 9:04 AM IST

ಅಮೆರಿಕ ಮತ್ತು ಮಧ್ಯೆ ತಾಂತ್ರಿಕ ಸಮರ ಏರ್ಪಡುತ್ತಿದೆ. ಕೆಲ ದಿನಗಳ ಹಿಂದೆ ಸರ್ಚ್​ ಎಂಜಿನ್​ ನಿಲ್ಲಿಸಿದ್ದ ಗೂಗಲ್​ ಈಗ ಅನುವಾದ ಸೇವೆಯನ್ನು ಸ್ಥಗಿತಗೊಳಿಸಿದೆ.

google-translate-shutting-down-in-china
ಚೀನಾದಲ್ಲಿ ಗೂಗಲ್​ ಅನುವಾದ ಸೇವೆ ಬಂದ್​

ವಾಷಿಂಗ್ಟನ್ (ಅಮೆರಿಕ): ಕಡಿಮೆ ಬಳಕೆಯ ಕಾರಣ ಚೀನಾದ ಹಲವೆಡೆ ಗೂಗಲ್​ ಅನುವಾದ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಅಮೆರಿಕದ ಟೆಕ್ ದೈತ್ಯ ಗೂಗಲ್ ಸೋಮವಾರ ಘೋಷಿಸಿದೆ.

ಚೀನಾದಲ್ಲಿ ಹಾಂಗ್​ಕಾಂಗ್​ ಅನುವಾದ ಸೇವೆ ಹೊರತುಪಡಿಸಿ ಬೇರೆ ಟ್ರಾನ್ಸ್​ಲೇಷನ್​ ಸೇವೆಗಳು ಉಚಿತವಲ್ಲದ ಕಾರಣ ಗೂಗಲ್​ ತರ್ಜುಮೆಯನ್ನು ಜನರು ಹೆಚ್ಚಾಗಿ ಬಳಕೆ ಮಾಡುತ್ತಿಲ್ಲ. ಹೀಗಾಗಿ ಕಡಿಮೆ ಬಳಕೆ ಮಾಡದ ಪ್ರದೇಶದಲ್ಲಿ ಸೇವೆಯನ್ನು ನಿಲ್ಲಿಸಲು ಗೂಗಲ್​ ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

2010 ರಲ್ಲಿ ಗೂಗಲ್​ ಚೀನಾದಲ್ಲಿ ಸರ್ಚ್ ಎಂಜಿನ್​ ಆಯ್ಕೆಯನ್ನೇ ನಿಲ್ಲಿಸಿತ್ತು. ಸರ್ಕಾರ ಅಲ್ಲಿನ ಜನರ ವೈಯಕ್ತಿಕ ದಾಖಲೆಗಳನ್ನು ಕ್ರೋಢೀಕರಿಸಲು ಶುರು ಮಾಡಿದೆ ಎಂಬ ಆರೋಪದ ಮೇಲೆ ಗೂಗಲ್​ ತನ್ನ ಸರ್ಚ್​ ಎಂಜಿನ್​ ಅನ್ನೇ ನಿಲ್ಲಿಸಿತ್ತು.

ಆರೋಪವನ್ನು ಚೀನಾ ನಿರಾಕರಿಸಿದೆ. ಅಂತಹ ಯಾವುದೇ ಸಂಗ್ರಹಣೆ ಮಾಡಲಾಗುತ್ತಿಲ್ಲ ಎಂದು ಹೇಳಿಕೆ ನೀಡಿತ್ತು. ಆದಾಗ್ಯೂ ಚೀನಾ ಸರ್ಕಾರದ ಬೇಹುಗಾರಿಕೆಯಿಂದ ತಂತ್ರಜ್ಞಾನಗಳ ವಿವರಗಳು, ಪೊಲೀಸ್ ಸಂಶೋಧನಾ ದಾಖಲೆಗಳು, ನೂರಾರು ಸಾರ್ವಜನಿಕ ಸಂಗ್ರಹಣೆ ದಾಖಲೆಗಳು ಹೊರಬಂದಿದ್ದವು.

ಓದಿ: 8 ವರ್ಷಗಳ ಕಾರ್ಯಾಚರಣೆ ಬಳಿಕ ಅಂತ್ಯ ಕಂಡ ಮಂಗಳಯಾನ: ಇಸ್ರೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.