ಸ್ಯಾನ್ ಫ್ರಾನ್ಸಿಸ್ಕೋ: ಹೊಸ ಕ್ರೋಮ್ ಆವೃತ್ತಿಯೊಂದಿಗೆ ಮುಂದಿನ ವರ್ಷದ ಆರಂಭದಲ್ಲಿ ವಿಂಡೋಸ್ 7 ಮತ್ತು ವಿಂಡೋಸ್ 8.1 ಗೆ ಸಪೋರ್ಟ್ ಕೊನೆಗೊಳಿಸುವುದಾಗಿ ಗೂಗಲ್ ಘೋಷಿಸಿದೆ. 2023 ಫೆಬ್ರವರಿ 7 ರಂದು ಟೆಕ್ ದೈತ್ಯ ವಿಂಡೋಸ್ 7 ಮತ್ತು ವಿಂಡೋಸ್ 8.1 ಗೆ ಬೆಂಬಲವನ್ನು ಅಧಿಕೃತವಾಗಿ ನಿಲ್ಲಿಸಲಿದೆ. ಅದೇ ಸಮಯದಲ್ಲಿ ಕ್ರೋಮ್ 110 ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಭವಿಷ್ಯದ ಕ್ರೋಮ್ ಅಪ್ಡೇಟ್ ವರ್ಷನ್ಗಳನ್ನು ಪಡೆಯಲು ಬಳಕೆದಾರರು ತಮ್ಮ ಕಂಪ್ಯೂಟರ್ ವಿಂಡೋಸ್ 10 ಅಥವಾ ನಂತರದ ಸಿಸ್ಟಮ್ನಲ್ಲಿ ರನ್ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಈ ಆಪರೇಟಿಂಗ್ ಸಿಸ್ಟಮ್‌ಗಳ ಬಳಕೆದಾರರಿಗೆ ಯಾವುದೇ ಹೊಸ ಅಪ್ಡೇಟ್ ಇರಲ್ಲ. ಆದರೆ ಕ್ರೋಮ್ನ ಹಳೆಯ ಆವೃತ್ತಿಗಳು ಅದರಲ್ಲಿ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಇನ್ನೂ ವಿಂಡೋಸ್ 7 ಅಥವಾ ವಿಂಡೋಸ್ 8.1 ಬಳಸುತ್ತಿದ್ದರೆ, ಅವರು ಕ್ರೋಮ್ನ ಸೆಕ್ಯೂರಿಟಿ ಅಪ್ಡೇಟ್ ಮತ್ತು ಹೊಸ ವೈಶಿಷ್ಟ್ಯಗಳನ್ನು ಪಡೆಯುವುದನ್ನು ಮುಂದುವರಿಸಲು ಬಯಸಿದರೆ ವಿಂಡೋಸ್‌ನ ಬೆಂಬಲಿತ ಆವೃತ್ತಿಗೆ ಅಪ್‌ಗ್ರೇಡ್ ಮಾಡಲು ಸಲಹೆ ನೀಡಲಾಗುತ್ತದೆ ಎಂದು ಕಂಪನಿ ಹೇಳಿದೆ.
2022 ರ ವೇಳೆಗೆ 303 ದುರ್ಬಲತೆಗಳು ಮತ್ತು ಒಟ್ಟು 3,159 ದುರ್ಬಲತೆಗಳೊಂದಿಗೆ ಗೂಗಲ್ ಕ್ರೋಮ್ ಲಭ್ಯವಿರುವ ಅತ್ಯಂತ ದುರ್ಬಲ ಬ್ರೌಸರ್ ಆಗಿದೆ ಎಂದು ವರದಿಯೊಂದು ಹೇಳಿದೆ. ಈ ವರದಿಯ ಅಂಕಿಅಂಶಗಳು ಜನವರಿ 1 ರಿಂದ ಅಕ್ಟೋಬರ್ 5 ರವರೆಗಿನ ಡೇಟಾಬೇಸ್‌ನ ಡೇಟಾ ಆಧರಿಸಿವೆ. ಅಕ್ಟೋಬರ್‌ನಲ್ಲಿನ ಐದು ದಿನಗಳಲ್ಲಿ CVE-2022-3318, CVE-2022-3314 ಸೇರಿದಂತೆ ಗೂಗಲ್ ಕ್ರೋಮ್ ಮಾತ್ರ ದುರ್ಬಲತೆಗಳನ್ನು ಹೊಂದಿರುವ ಬ್ರೌಸರ್ ಆಗಿದೆ.
ಇದನ್ನೂ ಓದಿ: 300 ತಪ್ಪುಗಳನ್ನು ಗುರುತಿಸಿದ್ದಕ್ಕೆ ಇವರಿಗೆ ಸಿಕ್ಕಿದ್ದು ಬರೋಬ್ಬರಿ 66 ಕೋಟಿ!.. ಈ ಬಹುಮಾನ ಕೊಟ್ಟಿದ್ದು ಯಾರು.. ಏಕೆ?