ನವದೆಹಲಿ: ಗೂಗಲ್ ಇದೀಗ ತನ್ನ ಮೀಟ್ ಅಪ್ಲಿಕೇಶನ್‌ನಲ್ಲಿ ಗ್ರೂಪ್ ಕರೆಗಳಿಗೆ 1080 ಪಿಕ್ಸೆಲ್ಸ್ ಸ್ಟ್ರೀಮಿಂಗ್ ಅನ್ನು ವಿಸ್ತರಿಸಿದೆ. ಕಂಪನಿಯು ಈಗ ವೆಬ್‌ನಲ್ಲಿ ಮೂರು ಅಥವಾ ಹೆಚ್ಚಿನ ಜನರು ಪಾಲ್ಗೊಳ್ಳುವ ಮೀಟ್ಗಳ ವಿಡಿಯೋ ಕ್ವಾಲಿಟಿಯನ್ನು 1080 ಪಿಕ್ಸೆಲ್ಸ್ಗೆ ವಿಸ್ತರಿಸುತ್ತಿದೆ.
"ಪ್ರಸ್ತುತ ನಾವು ಮೂರು ಅಥವಾ ಹೆಚ್ಚಿನ ಜನರು ಭಾಗವಹಿಸುವ ಮೀಟ್ಗಳಿಗೆ 1080p ಅನ್ನು ವಿಸ್ತರಿಸುತ್ತಿದ್ದೇವೆ. 1080p ಕ್ಯಾಮೆರಾದೊಂದಿಗೆ ಕಂಪ್ಯೂಟರ್‌ಗಳನ್ನು ಬಳಸುವಾಗ, ಹೆಚ್ಚಿನ ರೆಸಲ್ಯೂಶನ್ ವೆಬ್‌ನಲ್ಲಿ ಲಭ್ಯವಿದೆ" ಎಂದು ಗೂಗಲ್ ಮಂಗಳವಾರ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ.
ರೆಸಲ್ಯೂಶನ್ ಆಯ್ಕೆ ಸೆಟ್ಟಿಂಗ್ಸ್ ಮೆನುವಿನಲ್ಲಿ ಲಭ್ಯ: 1080p ರೆಸಲ್ಯೂಶನ್ ಡಿಫಾಲ್ಟ್ ಆಗಿ ಆಫ್ ಆಗಿರುತ್ತದೆ. 1080p ಕ್ಯಾಮೆರಾಗಳನ್ನು ಹೊಂದಿರುವ ಬಳಕೆದಾರರಿಗೆ ಮೀಟ್ಗೆ ಪ್ರವೇಶಿಸುವ ಮೊದಲು ಹೆಚ್ಚಿನ ರೆಸಲ್ಯೂಶನ್ ಆಯ್ಕೆಯನ್ನು ಆನ್ ಮಾಡಲು ಪ್ರೇರೇಪಿಸಲಾಗುತ್ತದೆ ಅಥವಾ ಸೆಟ್ಟಿಂಗ್ಸ್ ಮೆನು ಮೂಲಕ ಅದನ್ನು ಆನ್ ಅಥವಾ ಆಫ್ ಮಾಡಬಹುದು ಎಂದು ಕಂಪನಿ ಹೇಳಿದೆ.
1080 ಪಿಕ್ಸೆಲ್ಸ್ ಸ್ಟ್ರೀಮಿಂಗ್: ಇದಲ್ಲದೇ, ಟೆಕ್ ದೈತ್ಯ "ಒಂದು ಅಥವಾ ಹೆಚ್ಚಿನ ಬಳಕೆದಾರರು 1080p ಸಕ್ರಿಯಗೊಳಿಸಿದ ಬಳಕೆದಾರರನ್ನು 1080p ವಿಡಿಯೋ ಫೀಡ್ ಅನ್ನು ನಿರೂಪಿಸಲು ಸಾಕಷ್ಟು ದೊಡ್ಡ ಸ್ಕ್ರೀನ್ ಮೇಲೆ ಪಿನ್ ಮಾಡಬೇಕಾಗುತ್ತದೆ. ಆ ನಿರ್ದಿಷ್ಟ ಸನ್ನಿವೇಶಗಳಲ್ಲಿ, 1080p ವಿಡಿಯೋ ಕಳುಹಿಸಲು ಹೆಚ್ಚುವರಿ ಬ್ಯಾಂಡ್‌ವಿಡ್ತ್ ಅಗತ್ಯವಿರುತ್ತದೆ. ಈ ಸಾಧನವು ಬ್ಯಾಂಡ್‌ವಿಡ್ತ್ ನಿರ್ಬಂಧಿತವಾಗಿದ್ದರೆ, ಮೀಟ್ ಸ್ವಯಂಚಾಲಿತವಾಗಿ ರೆಸಲ್ಯೂಶನ್ ಅನ್ನು ಸರಿಹೊಂದುತ್ತದೆ'' ಎಂದು ವಿವರಿಸಿದೆ.
ಜಿ-ಮೇಲ್ನಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರುವುದಾಗಿ ಹೇಳಿದ ಗೂಗಲ್: ಜೊತೆಗೆ ಸ್ಪ್ಯಾಮ್ ಮತ್ತು ಇತರ ಅನಗತ್ಯ ಇಮೇಲ್‌ಗಳನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಫೆಬ್ರವರಿ 2024 ರಿಂದ ಬಲ್ಕ್ ಆಗಿ ಇ-ಮೇಲೆ ಕಳುಹಿಸುವವರಿಗೆ Gmail ನಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರುವುದಾಗಿ ಗೂಗಲ್ ಘೋಷಿಸಿದೆ. "ಒಂದು ದಿನದಲ್ಲಿ Gmail ಖಾತೆಗಳಿಗೆ 5,000ಕ್ಕೂ ಹೆಚ್ಚು ಸಂದೇಶಗಳನ್ನು ಕಳುಹಿಸುವವರಿಗೆ, ನಿಮ್ಮ ಇನ್‌ಬಾಕ್ಸ್ ಅನ್ನು ಇನ್ನಷ್ಟು ಸುರಕ್ಷಿತವಾಗಿ ಮತ್ತು ಹೆಚ್ಚು ಸ್ಪ್ಯಾಮ್ ಮುಕ್ತವಾಗಿಡಲು ನಾವು ಬೃಹತ್ ಇ-ಮೇಲ್ ಕಳುಹಿಸುವವರಿಗೆ ಹೊಸ ಅವಶ್ಯಕತೆಗಳನ್ನು ಪರಿಚಯಿಸುತ್ತಿದ್ದೇವೆ" ಎಂದು ಕಂಪನಿ ಮಾಹಿತಿ ನೀಡಿದೆ.
ಗೂಗಲ್ ಸೈನ್ಇನ್ಗೆ ಕಡ್ಡಾಯವಾಗಲಿರುವ ಪಾಸ್ ಕೀ: ಮುಂಬರುವ ದಿನಗಳಲ್ಲಿ ಗೂಗಲ್ ಸೇವೆಗಳಿಗೆ ಸೈನ್ ಇನ್ ಆಗಲು ಪಾಸ್ವರ್ಡ್ ಬದಲಾಗಿ ಪಾಸ್ಕೀ ಬಳಕೆ ಮಾಡುವುದು ಕಡ್ಡಾಯ ಆಗಲಿದೆ. ಪಾಸ್ಕೀ (ಪಾಸ್ವರ್ಡ್ಗಳಿಗೆ ಪರ್ಯಾಯ) ಮೂಲಕವೇ ಡೀಫಾಲ್ಟ್ ಸೈನ್ಇನ್ ಪ್ರಕ್ರಿಯೆ ಆಗಲಿದೆ ಎಂದು ಗೂಗಲ್ ತಿಳಿಸಿದೆ. ಪಾಸ್ ಕೀ ಮೂಲಕ ಬಳಕೆದಾರರು ಬಯೋಮೆಟ್ರಿಕ್ ಸೆನ್ಸರ್ (ಫಿಂಗರ್ ಪ್ರಿಂಟ್ ಅಥವಾ ಮುಖ ಗುರುತಿಸುವಿಕೆಯಂತಹ), ಪಿನ್ ಅಥವಾ ಪ್ಯಾಟರ್ನ್ಗಳಿಂದ ಅಪ್ಲಿಕೇಶನ್ಗಳು ಮತ್ತು ವೆಬ್ಸೈಟ್ಗಳಿಗೆ ಸೈನ್ಇನ್ ಮಾಡಬಹುದು. ಇದರಿಂದಾಗಿ ಪಾಸ್ವರ್ಡ್ಗಳನ್ನು ನೆನಪಿಟ್ಟುಕೊಳ್ಳುವ ಕಿರಿಕಿರಿ ತಪ್ಪಲಿದೆ.
ಇದನ್ನೂ ಓದಿ: ಚಾಟ್ ಜಿಪಿಟಿ ಆದಾಯ ಕುಸಿತ; ಷೇರು ಮಾರಿ ಬಂಡವಾಳ ಸಂಗ್ರಹಕ್ಕೆ ಮುಂದಾದ ಓಪನ್ ಎಐ