ಸ್ಯಾನ್ ಪ್ರಾನ್ಸಿಸ್ಕೊ: ಟೆಕ್ ದೈತ್ಯ ಗೂಗಲ್ ಸುರಕ್ಷತೆಗಾಗಿ ಎಂ 108 ಆವೃತ್ತಿಯ ಕ್ರೋಮ್ ಪಾಸ್ ಕೀ ತರಲು ಮುಂದಾಗಿದೆ. ಈ ಪಾಸ್ ಕೀ ಪಾಸ್ವರ್ಡ್ ಮತ್ತು ಇತರ ದೃಢೀಕರಣ ಅಂಶಗಳನ್ನು ಸುರಕ್ಷೆ ಮಾಡುತ್ತದೆ. ಇವು ತುಂಬ ಸುರಕ್ಷಿತವಾಗಿದ್ದು, ಸರ್ವರ್ ಉಲ್ಲಂಘನೆ ಮೂಲಕ ಮಾಹಿತಿ ಸೋರಿಕೆ ಮಾಡುವುದಿಲ್ಲ ಜೊತೆಗೆ ಫಿಶಿಂಗ್ ದಾಳಿಯಿಂದಲೂ ರಕ್ಷಿಸುತ್ತವೆ.
ಉದ್ಯಮದ ಗುಣಮಟ್ಟಕ್ಕೆ ಅನುಗುಣವಾಗಿ ಈ ಪಾಸ್ ಕೀಯನ್ನು ತಯಾರಿಸಲಾಗಿದೆ. ಇದು ಅನೇಕ ಆಪರೇಟಿಂಗ್ ಸಿಸ್ಟಂಗಳನ್ನು ಕೆಲಸ ಮಾಡಲಿದೆ. ಇದನ್ನು ವೆಬ್ಸೈಟ್ ಮತ್ತು ಇದನ್ನು ಬೆಂಬಲಿಸುವ ಅಪ್ಲಿಕೇಶನ್ನಲ್ಲಿ ಬಳಸಬಹುದಾಗಿದೆ.
ಡಿವೈಸ್ ಅನ್ಲಾಕ್ ಮಾಡುವ ರೀತಿಯಲ್ಲೇ ಬಳಕೆದಾರರು ಸ್ವಯಂ ದೃಡೀಕರಿಸಿ, ಪಾಸ್ಕೀಗೆ ಸೈ ಇನ್ ಆಗಬೇಕಿದೆ. ಕ್ರೋಮ್ನ ಹೊಸ ಆವೃತ್ತಿಗಳಾದ ವಿಂಡೋಸ್ 11 ಮ್ಯಾಕ್ಒಎಸ್ ಮತ್ತು ಆಂಡ್ರಾಯ್ಡ್ಗಳಲ್ಲಿ ಈ ಪಾಸ್ ಕೀ ಇರಲಿದೆ.
ಆಂಡ್ರಾಯ್ಡ್ ಪಾಸ್ ಕೀ ಗೂಗಲ್ ಪಾಸ್ವರ್ಡ್ ಮ್ಯಾನೇಜರ್ ಜೊತೆ ಅಥವಾ ಇತರ ಬೆಂಬಲಿಸುವ ಪಾಸ್ವರ್ಡ್ ಮ್ಯಾನೇಜರ್ ಜೊತೆ ಸಂಯೋಜಿಸಲಾಗುವುದು. ಈ ಪಾಸ್ಕೀಯನ್ನು ಬಳಕೆದಾರರು ತಮ್ಮ ಸ್ಮಾರ್ಟ್ಫೋನ್ ಮತ್ತು ಡೆಸ್ಕ್ ಟಾಪ್ ಡಿವೈಸ್ಗಳಲ್ಲಿ ಪಡೆಯಬಹುದಾಗಿದೆ. ಸುರಕ್ಷಿತವಾಗಿ ರೂಪಿಸಲಾದ ಈ ಕೋಡ್ಗಳನ್ನು ವೆಬ್‌ಸೈಟ್‌ನೊಂದಿಗೆ ವಿನಿಮಯ ಮಾಡಿಕೊಳ್ಳಲಾಗುತ್ತದೆ, ಆದ್ದರಿಂದ ಸೋರಿಕೆಯಾಗಲು ಸಾಧ್ಯವೇ ಇಲ್ಲ. ಅಕ್ಟೋಬರ್‌ನಲ್ಲಿ ಪ್ರಾಯೋಗಿಕ ಆವೃತ್ತಿಯಾಗಿ, ಗೂಗಲ್ ತನ್ನ ಕ್ರೋಮ್ ಕ್ಯಾನರಿಯಲ್ಲಿ ಪಾಸ್‌ಕೀ ಬೆಂಬಲ ಬಿಡುಗಡೆ ಮಾಡಿತು.
ಇದನ್ನೂ ಓದಿ: ಆಪಲ್ - ಗೂಗಲ್ ಪೈಪೋಟಿ: ಮೈಕ್ರೋಸಾಫ್ಟ್ ಆಲ್ ಇನ್ ಒನ್ ಸೂಪರ್ ಆ್ಯಪ್ ಶೀಘ್ರ ಬಿಡುಗಡೆ