ETV Bharat / science-and-technology

ಜಾಗತಿಕ ಸ್ಮಾರ್ಟ್​ಫೋನ್ ಮಾರುಕಟ್ಟೆ ಕುಸಿತ; ಮಾರಾಟದಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಸ್ಯಾಮ್​ಸಂಗ್

author img

By ETV Bharat Karnataka Team

Published : Oct 17, 2023, 6:06 PM IST

ಜಾಗತಿಕವಾಗಿ ಸ್ಮಾರ್ಟ್​ಫೋನ್ ಮಾರಾಟದಲ್ಲಿ ಕುಸಿತ ಕಂಡು ಬಂದಿದೆ.

Global smartphone market declines for 9th consecutive quarter, Samsung leads

ನವದೆಹಲಿ: ಜಾಗತಿಕವಾಗಿ ಸ್ಮಾರ್ಟ್​ಫೋನ್ ಮಾರಾಟದಲ್ಲಿ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ. ಸ್ಮಾರ್ಟ್​ಫೋನ್ ಮಾರಾಟ ಪ್ರಮಾಣವು ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 8 ರಷ್ಟು (ವರ್ಷದಿಂದ ವರ್ಷಕ್ಕೆ) ಕುಸಿದಿದ್ದು, ಇದು ಸತತ ಒಂಬತ್ತನೇ ತ್ರೈಮಾಸಿಕದ ಇಳಿಕೆಯಾಗಿದೆ ಎಂದು ವರದಿ ಹೇಳಿದೆ. ಸ್ಮಾರ್ಟ್​ಫೋನ್ ಬದಲಿಸುವ ಅಭ್ಯಾಸದ ಬದಲಾವಣೆಯಿಂದಾಗಿ ವಿಶೇಷವಾಗಿ ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳಲ್ಲಿ, 2023 ರ ವರ್ಷಪೂರ್ತಿ ಮಾರುಕಟ್ಟೆ ಕುಸಿಯುವ ನಿರೀಕ್ಷೆಯಿದೆ. ಅಲ್ಲಿಗೆ ಇದು ದಶಕದಲ್ಲಿಯೇ ಅತಿ ಕಡಿಮೆ ಸ್ಮಾರ್ಟ್​ಫೋನ್ ಮಾರಾಟದ ಅವಧಿಯಾಗಲಿದೆ.

ಕೌಂಟರ್​ ಪಾಯಿಂಟ್ ರಿಸರ್ಚ್ ಪ್ರಕಾರ, ಪ್ರಮುಖವಾಗಿ ಗ್ರಾಹಕರಿಂದ ಬೇಡಿಕೆಯ ಪ್ರಮಾಣದಲ್ಲಿ ನಿರೀಕ್ಷೆಗಿಂತ ನಿಧಾನಗತಿಯ ಚೇತರಿಕೆಯಿಂದಾಗಿ ಸ್ಮಾರ್ಟ್​ಫೋನ್ ಮಾರಾಟ ಕುಸಿದಿದೆ. ಆದಾಗ್ಯೂ, ಮಾರುಕಟ್ಟೆಯ ತ್ರೈಮಾಸಿಕ ದಿಂದ ತ್ರೈಮಾಸಿಕ ಮಾರಾಟ ಬೆಳವಣಿಗೆಯು ಶೇಕಡಾ 2ರಷ್ಟು ಹೆಚ್ಚಾಗಿದ್ದು, ಸೆಪ್ಟೆಂಬರ್​ನಲ್ಲಿನ ಸಕಾರಾತ್ಮಕ ಬೆಳವಣಿಗೆಯು ಮುಂದಿನ ದಿನಗಳಲ್ಲಿ ಒಳ್ಳೆಯ ಸುದ್ದಿಯನ್ನು ತರಬಹುದು ಎಂದು ನಿರೀಕ್ಷಿಸಲಾಗಿದೆ.

ಸ್ಯಾಮ್​ಸಂಗ್ ಈಗಲೂ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಮುನ್ನಡೆಯನ್ನು ಮುಂದುವರಿಸಿದ್ದು, ಮೂರನೇ ತ್ರೈಮಾಸಿಕದಲ್ಲಿ ಒಟ್ಟು ಮಾರಾಟದ ಐದನೇ ಒಂದು ಭಾಗವನ್ನು ತನ್ನದಾಗಿಸಿಕೊಂಡಿದೆ. ಹೊಸ ತಲೆಮಾರಿನ ಫೋಲ್ಡಬಲ್ ಫೋನ್​ಗಳಿಗೆ ಗ್ರಾಹಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫ್ಲಿಪ್ 5 ಫೋಲ್ಡಬಲ್ ಫೋನ್ ಸುಮಾರು ಎರಡು ಪಟ್ಟು ಹೆಚ್ಚು ಮಾರಾಟವಾಗಿದೆ. ಆದಾಗ್ಯೂ ಮಧ್ಯಮ ಬೆಲೆಯ ಶ್ರೇಣಿಯಲ್ಲಿ ಸ್ಯಾಮ್​ಸಂಗ್​ನ ಎ-ಸರಣಿ ಸ್ಮಾರ್ಟ್​ಫೋನ್​ಗಳು ಅತ್ಯಧಿಕವಾಗಿ ಮಾರಾಟವಾಗಿವೆ.

ಐಫೋನ್ 15 ಸರಣಿಯ ಸೀಮಿತ ಲಭ್ಯತೆಯ ಹೊರತಾಗಿಯೂ ಆ್ಯಪಲ್ ಶೇಕಡಾ 16 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಶಿಯೋಮಿ, ಒಪ್ಪೋ ಮತ್ತು ವಿವೋ ನಂತರದ ಸ್ಥಾನಗಳಲ್ಲಿವೆ. ಮೂರನೇ ತ್ರೈಮಾಸಿಕದಲ್ಲಿ, ಈ ಎಲ್ಲಾ ಬ್ರಾಂಡ್ ಗಳು ಚೀನಾ ಮತ್ತು ಭಾರತದಂಥ ಪ್ರಮುಖ ಮಾರುಕಟ್ಟೆಗಳಲ್ಲಿ ತಮ್ಮ ಸ್ಥಾನಗಳನ್ನು ಭದ್ರಪಡಿಸಲು ಕೆಲಸ ಮಾಡಿವೆ. ಹಾನರ್, ಹುವಾವೇ ಮತ್ತು ಟ್ರಾನ್ಷನ್ ಗ್ರೂಪ್ ವರ್ಷದಿಂದ ವರ್ಷಕ್ಕೆ ಮೂರನೇ ತ್ರೈಮಾಸಿಕದಲ್ಲಿ ಬೆಳವಣಿಗೆ ದಾಖಲಿಸಿದ ಕೆಲವೇ ಬ್ರಾಂಡ್​ಗಳಾಗಿವೆ ಎಂದು ವರದಿ ತಿಳಿಸಿದೆ.

"ಸೆಪ್ಟೆಂಬರ್ ನಲ್ಲಿ ಉತ್ತಮ ಮಾರಾಟದ ನಂತರ ಭಾರತದಲ್ಲಿ ಹಬ್ಬದ ಋತುವಿನ ಆಗಮನದೊಂದಿಗೆ ಸ್ಮಾರ್ಟ್​ಫೋನ್​ಗಳ ಮಾರಾಟ ವೇಗ ಪಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಚೀನಾದಲ್ಲಿ 11.11 ಸೇಲ್ಸ್​ ಇವೆಂಟ್​ ಮತ್ತು ಕ್ರಿಸ್ಮಸ್ ಮತ್ತು ವರ್ಷಾಂತ್ಯದ ಸೇಲ್ಸ್​ನಿಂದ ಕೂಡ ಮಾರಾಟ ವೃದ್ಧಿಯಾಗಲಿದೆ" ಎಂದು ವರದಿ ಹೇಳಿದೆ.

ಇದನ್ನೂ ಓದಿ : ಡೆಲಿವರಿ ಬಾಯ್​ಗಳಿಗೂ ಕನಿಷ್ಠ ವೇತನ ಕಾನೂನು ತರಲಿದೆ ಈ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.