ETV Bharat / science-and-technology

2023ರಲ್ಲಿ ಗೇಮಿಂಗ್ ಕಂಪನಿಗಳಿಂದ 9 ಸಾವಿರ ಉದ್ಯೋಗಿಗಳ ವಜಾ

2023ರಲ್ಲಿ ವಿಡಿಯೋ ಗೇಮಿಂಗ್ ಕಂಪನಿಗಳು ಸುಮಾರು 9 ಸಾವಿರ ನೌಕರರನ್ನು ವಜಾಗೊಳಿಸಿವೆ.

Over 9K employees fired by video gaming firms in 2023

author img

By ETV Bharat Karnataka Team

Published : Dec 31, 2023, 1:36 PM IST

ಸ್ಯಾನ್ ಫ್ರಾನ್ಸಿಸ್ಕೋ: 2023ರಲ್ಲಿ ವಿಡಿಯೋ ಗೇಮಿಂಗ್ ಉದ್ಯಮದಲ್ಲಿ ಕೂಡ ನೌಕರರ ವಜಾಗೊಳಿಸುವಿಕೆ ಗಮನಾರ್ಹ ಪ್ರಮಾಣದಲ್ಲಿ ನಡೆದಿದೆ. ಜಾಗತಿಕವಾಗಿ ವಿಡಿಯೋ ಗೇಮಿಂಗ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಕನಿಷ್ಠ 9,000 ಉದ್ಯೋಗಿಗಳನ್ನು ಈ ವರ್ಷ ತೆಗೆದುಹಾಕಲಾಗಿದೆ.

ಸೆಪ್ಟೆಂಬರ್​ನಲ್ಲಿ ಫೋರ್ಟ್​ನೈಟ್ ಗೇಮ್ ಡೆವಲಪರ್ ಎಪಿಕ್ ಗೇಮ್ಸ್ ತನ್ನ ಶೇಕಡಾ 16ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತು. ಇದರಿಂದ ಸುಮಾರು 870 ಜನ ನೌಕರರು ಉದ್ಯೋಗ ಕಳೆದುಕೊಂಡರು. ಕಂಪನಿಯ ಸುಮಾರು ಶೇಕಡಾ 16ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದಾಗಿ ಎಪಿಕ್ ಸಿಇಒ ಟಿಮ್ ಸ್ವೀನಿ ಉದ್ಯೋಗಿಗಳಿಗೆ ಕಳುಹಿಸಿದ ಇಮೇಲ್​ನಲ್ಲಿ ತಿಳಿಸಿದ್ದರು.

"ನಾವು ಗಳಿಸುವುದಕ್ಕಿಂತಲೂ ಹೆಚ್ಚಿನ ಹಣ ಖರ್ಚು ಮಾಡುತ್ತಿದ್ದೇವೆ. ಉದ್ಯೋಗಿಗಳನ್ನು ವಜಾ ಮಾಡದೆ ನಾವು ಮುಂದುವರಿಯಬಹುದು ಎಂದು ನಾನು ಬಹಳ ಸಮಯದಿಂದ ಆಶಾವಾದಿಯಾಗಿದ್ದೆ. ಆದರೆ ನನ್ನ ಈ ಅಭಿಪ್ರಾಯ ಅವಾಸ್ತವಿಕವಾಗಿತ್ತು" ಎಂದು ಸ್ವೀನಿ ಹೇಳಿದ್ದಾರೆ.

ನವೆಂಬರ್​ನಲ್ಲಿ ಅಸಾಸಿನ್ಸ್ ಕ್ರೀಡ್ ಮತ್ತು ಫಾರ್ ಕ್ರೈನಂತಹ ಜನಪ್ರಿಯ ಫ್ರಾಂಚೈಸಿಗಳನ್ನು ಪ್ರಕಟಿಸಿದ ಫ್ರೆಂಚ್ ವಿಡಿಯೋ ಗೇಮ್ ಕಂಪನಿ ಯುಬಿಸಾಫ್ಟ್, ಕಾರ್ಪೊರೇಟ್ ಪುನರ್​ ರಚನೆ ಮತ್ತು ಮರುಸಂಘಟನೆ ಪ್ರಯತ್ನದ ಭಾಗವಾಗಿ ಸುಮಾರು 124 ಉದ್ಯೋಗಿಗಳನ್ನು ವಜಾಗೊಳಿಸಿತು.

ಗೇಮಿಂಗ್ ಸ್ಟುಡಿಯೋಗಳು, ಮಾಧ್ಯಮ ಕಂಪನಿಗಳು ಮತ್ತು ದಿ ಲಾರ್ಡ್ ಆಫ್ ದಿ ರಿಂಗ್ಸ್ ನ ಐಪಿ ಹಕ್ಕುಗಳನ್ನು ಖರೀದಿಸಿದ ಕಾರಣಕ್ಕಾಗಿ ಅಬ್ರಸರ್ ಗ್ರೂಪ್ ಸಾಕಷ್ಟು ಸುದ್ದಿಯಲ್ಲಿದೆ. ಆದರೆ ಈ ವರ್ಷ ಕಂಪನಿಯು ಭಾರಿ ಪುನರ್​ ರಚನೆಗೆ ಮುಂದಾಗಿದೆ. ಮಾಡಿದ ಹೂಡಿಕೆಗಳು ವಿಫಲವಾದ ನಂತರ ಕಂಪನಿ ಮೂರು ಸ್ಟುಡಿಯೋಗಳನ್ನು ಸ್ಥಗಿತಗೊಳಿಸಿದೆ ಮತ್ತು ಭವಿಷ್ಯದ ಹಲವಾರು ಯೋಜನೆಗಳನ್ನು ರದ್ದುಗೊಳಿಸಿದೆ. ಇದರ ಭಾಗವಾಗಿ 900 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕಂಪನಿ ಕೈಬಿಟ್ಟಿದೆ.

ಗೇಮಿಂಗ್ ಕಂಪನಿ ಹ್ಯಾಸ್​ಬ್ರೊ 1,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದರಲ್ಲಿ ಲಾರಿಯನ್ ಸ್ಟುಡಿಯೋಸ್​ನೊಂದಿಗೆ ಬಾಲ್ಡರ್ನ ಗೇಟ್ 3 ನಲ್ಲಿ ಕೆಲಸ ಮಾಡಿದ ತಂಡವೂ ಸೇರಿದೆ. ಇನ್ನು ಮತ್ತೊಂದು ಗೇಮಿಂಗ್ ಕಂಪನಿ ಇಎ ತನ್ನ ಉದ್ಯೋಗಿಗಳ ಪೈಕಿ 6 ಪ್ರತಿಶತದಷ್ಟು ಅಥವಾ ಸುಮಾರು 780 ಜನರನ್ನು ವಜಾಗೊಳಿಸಿದೆ. ಇತರ ಗೇಮಿಂಗ್ ಕಂಪನಿಗಳಾದ ಬಯೋವೇರ್, ಮೈಕ್ರೋಸಾಫ್ಟ್, ಬಂಗಿ, ನಾಟಿ ಡಾಗ್, ಅಮೆಜಾನ್, ಸಿಡಿ ಪ್ರೊಜೆಕ್ಟ್ ರೆಡ್, ಸೆಗಾ, ಯುನಿಟಿ ಮತ್ತು ಆಕ್ಟಿವಿಷನ್ ಬ್ಲಿಝಾರ್ಡ್ ಈ ವರ್ಷ ಉತ್ತಮ ಯಶಸ್ಸು ಸಾಧಿಸಿವೆ.

ಇದನ್ನೂ ಓದಿ: ಭಾರತದಲ್ಲಿ $50 ಶತಕೋಟಿ ಮೌಲ್ಯದ ಮೊಬೈಲ್ ಫೋನ್ ಉತ್ಪಾದನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.