ETV Bharat / science-and-technology

ನೆಲ್ಲೈನಲ್ಲಿ ಗಗನಯಾನ ಎಂಜಿನ್​​​​​ನ ಪರೀಕ್ಷಾರ್ಥ ಪ್ರಯೋಗ ಯಶಸ್ವಿ : ಇಸ್ರೋ - ISRO scientists are fully engaged in the Gaganyaan

ಚಂದ್ರಯಾನ-3ರ ಯಶಸ್ಸಿನ ಬಳಿಕ ಇಸ್ರೋ ತನ್ನ ಚಟುವಟಿಕೆಗಳನ್ನು ತೀವ್ರಗೊಳಿಸಿದೆ. ಈಗಾಗಲೇ ನಿರ್ಧರಿಸುವಂತೆ 2024ರಲ್ಲಿ ಗಗನಯಾನ ಕೈಗೊಳ್ಳಲು ಸಿದ್ಧತೆ ಆರಂಭಿಸಿದೆ. ಅದಕ್ಕೆ ಪೂರಕ ಎಂಬಂತೆ ಬಾಹ್ಯಾಕಾಶ ಯಾನದ ಎಂಜಿನ್ ಪರೀಕ್ಷೆ ಯಶಸ್ವಿಯಾಗಿ ನಡೆಸಿದೆ.

Gaganyaan Engine test Successful in Nellai, Mahendragiri ISRO
ನೆಲ್ಲೈನಲ್ಲಿ ಗಗನಯಾನ ಎಂಜಿನ್​​​​​ನ ಯಶಸ್ವಿ ಪರೀಕ್ಷೆ: ಇಸ್ರೋ
author img

By ETV Bharat Karnataka Team

Published : Aug 31, 2023, 12:27 PM IST

ಚೆನ್ನೈ( ತಮಿಳುನಾಡು): ಚಂದ್ರಯಾನ -2 ಯಶಸ್ಸಿನ ನಂತರ ಇಸ್ರೋ ವಿಜ್ಞಾನಿಗಳು ಹುಮ್ಮಸ್ಸಿನಲ್ಲಿದ್ದಾರೆ. ಈಗಾಗಲೇ ರೂಪಿಸಿರುವ ಯೋಜನೆಗಳ ಯಶಸ್ಸಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಮುಂದಿನ ಬಾಹ್ಯಾಕಾಶ ಯೋಜನೆಗಳ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಯೋಜಿಸಿದಂತೆ 2024 ರಲ್ಲಿ ಗಗನಯಾನಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಭರದ ಸಿದ್ಧತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಮಹೇಂದ್ರಗಿರಿಯ ಇಸ್ರೋ ಕೇಂದ್ರ ನೆಲ್ಲೈನಲ್ಲಿ ನಡೆಸಿದ ಬಾಹ್ಯಾಕಾಶ ಯಾನದ ಎಂಜಿನ್ ಪರೀಕ್ಷೆ ಯಶಸ್ವಿಯಾಗಿ ನಡೆಸಿದೆ.

ಮಹೇಂದ್ರಗಿರಿ ಬಾಹ್ಯಾಕಾಶ ಸಂಶೋಧನಾ ಕೇಂದ್ರವು ತಿರುನಲ್ವೇಲಿ ಜಿಲ್ಲೆಯ ಪನಗುಡಿ ಬಳಿ ಇದೆ. ಈ ಬಾಹ್ಯಾಕಾಶ ಕೇಂದ್ರದಲ್ಲಿ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಗಗನಯಾನ್ ಕಾರ್ಯಕ್ರಮದ ಅಡಿ ಉಪಗ್ರಹಕ್ಕಾಗಿ ಬಳಸಲಾಗುವ ಕ್ರಯೋಜೆನಿಕ್ ಎಂಜಿನ್ ಅನ್ನು ಹಲವು ಹಂತಗಳಲ್ಲಿ ತಯಾರಿಸಲಾಗುತ್ತಿದೆ ಮತ್ತು ಅದೇ ವೇಳೆ, ನೌಕೆಯ ಉಡಾವಣಾ ಎಂಜಿನ್​​​​ ಅನ್ನು ಪರೀಕ್ಷೆ ಮಾಡಲಾಗುತ್ತಿದೆ.

ಚಂದ್ರಯಾನ-3ರ ಯಶಸ್ಸಿನ ನಂತರ ಇಸ್ರೋ ಗಗನಯಾನ್ ಯೋಜನೆಯಡಿ ರಾಕೆಟ್‌ನಲ್ಲಿ ಮೂವರು ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಯೋಜನೆ ಸಿದ್ದಪಡಿಸಿ, ಪರೀಕ್ಷಾರ್ಥ ಪ್ರಯೋಗಗಳನ್ನು ಮಾಡುತ್ತಿದೆ. ಭೂಮಿಯಿಂದ ಸುಮಾರು 400 ಕಿ.ಮೀ ದೂರದ ಅಂತರಿಕ್ಷದಲ್ಲಿ ಮನುಷ್ಯರನ್ನು ಪ್ರಯಾಣಿಸುವಂತೆ ಮಾಡುವ ಸಂಶೋಧನೆಯಲ್ಲಿ ಇಸ್ರೋ ವಿಜ್ಞಾನಿಗಳು ತೊಡಗಿಸಿಕೊಂಡಿದ್ದಾರೆ. ಸಂಶೋಧನೆಯ ನಂತರ ಮಾನವರನ್ನು ಬಾಹ್ಯಕಾಶಕ್ಕೆ ಕಳುಹಿಸಿ ಸುರಕ್ಷಿತವಾಗಿ ಭೂಮಿಗೆ ಕರೆತರುವ ಯೋಜನೆಯ ಭಾಗವಾಗಿ ಇಸ್ರೋ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

ಯೋಜನೆ ಕಾರ್ಯಗತಗೊಳಿಸುವ ಮುನ್ನ ಗಗನಯಾನ ಯೋಜನೆಯಡಿ ಮಾನವ ರಹಿತ ರಾಕೆಟ್ ಉಡಾವಣೆ ಮಾಡಲು ಇಸ್ರೋ ಸಿದ್ಧತೆ ನಡೆಸಿದೆ. ಅಲ್ಲದೇ, ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೊದಲು ಮಾನವರಹಿತ ರಾಕೆಟ್‌ಗಳಲ್ಲಿ ರೋಬೋಟ್‌ಗಳನ್ನು ಕಳುಹಿಸಲು ಮತ್ತು ಪರೀಕ್ಷಿಸಲು ಇಸ್ರೋ ಪ್ಲಾನ್​ ವೊಂದನ್ನು ರೂಪಿಸುತ್ತಿದೆ. ಆದ್ದರಿಂದ, ಗಗನಯಾನ ಯೋಜನೆಯು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ಮೇಲೆ ಅತಿ ದೊಡ್ಡ ನಿರೀಕ್ಷೆಗಳನ್ನು ಸೃಷ್ಟಿಸುವಂತೆ ಮಾಡಿದೆ.

ಈ ಹಿನ್ನೆಲೆಯಲ್ಲಿ ಗಗನಯಾನ್ ಯೋಜನೆಗಾಗಿ ಸಿಇ-20 ಕ್ರಯೋಜೆನಿಕ್ ಎಂಜಿನ್‌ನ ಪರೀಕ್ಷೆಯ ಬುಧವಾರ ಅಂದರೆ ಅಗಸ್ಟ್​ 30ರಂದು ನೆಲ್ಲೈ ಮಹೇಂದ್ರಗಿರಿ ಬಾಹ್ಯಾಕಾಶ ಸಂಶೋಧನಾ ಕೇಂದ್ರದಲ್ಲಿ ನಡೆಯಿತು. 720 ಸೆಕೆಂಡುಗಳ ಕಾಲ ನಡೆದ ಈ ಪರೀಕ್ಷೆ ಯಶಸ್ವಿಯಾಗಿದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ. ಗಗನಯಾನ ಬಾಹ್ಯಾಕಾಶ ಕಾರ್ಯಕ್ರಮವು CE-20 ಕ್ರಯೋಜೆನಿಕ್ ಎಂಜಿನ್ ಅನ್ನು LVM 3 ರಾಕೆಟ್‌ನ ಮೇಲಿನ ಹಂತಕ್ಕೆ ಶಕ್ತಿ ತುಂಬಲು ಬಳಸುತ್ತದೆ. ಆದ್ದರಿಂದ, ಈ ಯಶಸ್ಸ ಗಗನಯಾನದ ಮುಂದಿನ ಮೈಲಿಗಲ್ಲು ಎಂದು ವಿಜ್ಞಾನಿಗಳು ಬಣ್ಣಿಸಿದ್ದಾರೆ.

ಚಂದ್ರಯಾನ-3ರ ಯಶಸ್ಸಿನ ನಂತರ ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತದ ಬೆಳವಣಿಗೆಯನ್ನು ವಿಶ್ವ ಬೆರಗುಗಣ್ಣಿನಿಂದ ನೋಡುತ್ತಿದೆ. ಈ ಹಿನ್ನೆಲೆಯಲ್ಲಿ ಇಸ್ರೋ ಗಗನಯಾನ ಯೋಜನೆಯ ಮುಂದಿನ ಹಂತದ ಕೆಲಸವನ್ನು ತೀವ್ರಗೊಳಿಸಿರುವುದು ಗಮನಾರ್ಹ.

ಇದನ್ನು ಓದಿ:'ಆದಿತ್ಯ ಎಲ್1' ಉಡ್ಡಯನ ಕಸರತ್ತು ಪೂರ್ಣ; ಚಂದ್ರನಲ್ಲಿ ವಿಕ್ರಮ್​ ಲ್ಯಾಂಡರ್‌ ಫೋಟೋ ತೆಗೆದ ಪ್ರಗ್ಯಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.