ETV Bharat / science-and-technology

ವಾಟ್ಸಾಪ್​ನಿಂದ ಮಾನಸಿಕ ಆರೋಗ್ಯ ಉತ್ತಮವಾಗುತ್ತಂತೆ... ಹೇಗೆ ಗೊತ್ತಾ? - hjk

ಇಂಟರ್ನ್ಯಾಷನಲ್ ಜರ್ನಲ್ ಆಫ್ ಹ್ಯೂಮನ್-ಕಂಪ್ಯೂಟರ್ ಸ್ಟಡೀಸ್​ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಗ್ರೂಪ್​ ಚಾಟಿಂಗ್ ಮಾಡುವರ ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ತಿಳಿಸಲಾಗಿದೆ.

ವಾಟ್ಸಾಪ್​ನಿಂದ ನೀವು ಉತ್ತಮರಾಗಬಹುದು
author img

By

Published : Jul 1, 2019, 8:11 AM IST

Updated : Feb 16, 2021, 7:51 PM IST

ವಾಟ್ಸಾಪ್​ ಎಂಬ ಸಾಮಾಜಿಕ ಜಾಲತಾಣ ಈಗ ಎಲ್ಲರ ಮೊಬೈಲ್​ನಲ್ಲಿ ಇದ್ದೇ ಇರುತ್ತದೆ. ಈ ಆಪ್​ ಇರದ ಮೊಬೈಲ್​ಗಳೇ ಇಲ್ಲ. ಈಗ ವಾಟ್ಸಾಪ್​ನಿಂದ ಎಲ್ಲವನ್ನು ಮಾಡಬಹುದು. ಈ ಕಾರಣಕ್ಕಾಗೇ ಸಂಶೋಧಕರು ವಾಟ್ಸಾಪ್​ನಲ್ಲಿ ಒಂದು ಹೊಸ ಅನ್ವೇಷಣೆ ಮಾಡಿದ್ದಾರೆ. ಇದರ ಬಗ್ಗೆ ನೀವು ತಿಳಿದರೆ ಖಂಡಿತಾ ವಾಟ್ಸಾಪ್​ನ್ನು ಇನ್ನೂ ಹೆಚ್ಚಿಗೆ ಬಳಸುತ್ತೀರಾ.

ಹೌದು.., ಭಾವನೆಗಳಿಲ್ಲದ ವ್ಯಕ್ತಿಯೇ ಇಲ್ಲ. ಭಾವನೆ ಎಂಬುದು ಆಯಾ ವ್ಯಕ್ತಿಯ ವ್ಯಕ್ತಿತ್ವವನ್ನು ಪರಿಚಯಿಸುವ ಒಂದು ಸಾಧನ. ಈ ಕಾರಣಕ್ಕಾಗೆ ಇಂಟರ್ನ್ಯಾಷನಲ್ ಜರ್ನಲ್ ಆಫ್ ಹ್ಯೂಮನ್-ಕಂಪ್ಯೂಟರ್ ಸ್ಟಡೀಸ್​ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಗ್ರೂಪ್​ ಚಾಟಿಂಗ್ ಮಾಡುವರ ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ತಿಳಿಸಲಾಗಿದೆ.

ಸೈಕಾಲಜಿಕಲ್​ ಔಟ್​ಕಮ್ಸ್​ ಅಸೋಸಿಯೇಟೆಡ್​ ವಿತ್​ ಎಂಗೇಜ್ಮೆಂಟ್​ ವಿತ್​ ಆನ್​ಲೈನ್​ ಸಿಸ್ಟಮ್​ ( Psychosocial Outcomes Associated with Engagement with Online Chat Systems) ಎಂಬ ಹೆಸರಿನಲ್ಲಿ ನಡೆಸಲಾದ ಅಧ್ಯಯನದ ಪ್ರಕಾರ ಹೆಚ್ಚು ಸಮಯ ವಾಟ್ಸಾಪ್​ನಲ್ಲಿ ಸಮಯ ಕಳೆಯುತ್ತಿರುವ ಜನರು ಒಬ್ಬರೇ ಇದ್ದರೂ ಕೂಡ ಕುಟುಂಬ ಹಾಗೂ ಸ್ನೇಹಿತರ ಜೊತೆ ಹೆಚ್ಚು ಒಡನಾಡಿಯಾಗಿರುತ್ತಾರೆ ಎನ್ನಲಾಗಿದೆ.

ಈ ಸಂಬಂಧ ಎಡ್ಜ್ ಹಿಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಲಿಂಡಾ ಕೇ ತಮ್ಮ ವ್ಯಾಖ್ಯಾನ ನೀಡಿದ್ದು, ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ತೊಡಗುತ್ತಾರೆ. ಇದು ಕೆಟ್ಟದ್ದು ಎಂದು ಹಲವು ಚರ್ಚೆಗಳು ನಡೆದಿವೆ. ಆದರೆ, ಅಂದುಕೊಂಡಷ್ಟು ಈ ಸಾಧನದಿಂದ ಸ್ನೇಹಿತರು ಹಾಗೂ ಪೋಷಕರ ಜೊತೆ ಉತ್ತಮ ಸಂಬಂಧ ಇರಿಸಿಕೊಳ್ಳಲು ಸಹಕಾರಿ ಎಂದಿದ್ದಾರೆ.

ಇನ್ನು ಸಂಶೋದಕರ ಪ್ರಕಾರ, ವಾಟ್ಸಾಪ್​ ಒಂಟಿತನವನ್ನು ಓಡಿಸಿ ಎಲ್ಲರೊಂದಿಗೆ ಬೆರೆಯುವಂತೆ ಮಾಡುತ್ತದೆ. ಹೀಗಾಗಿ ಯಾವುದೇ ವ್ಯಕ್ತಿಯಲ್ಲಿ ಸಕಾರಾತ್ಮಕ ಮನೋಭಾವನೆ ಬೆಳೆಯಲಿದೆ ಎಂದು ತಿಳಿಸಿದ್ದಾರೆ.

ಈ ಸಂಶೋದನೆಗೆ 200 ಜನರನ್ನು ಆಯ್ಕೆ ಮಾಡಿದ್ದು, ಅದರಲ್ಲಿ 158 ಮಹಿಳೆಯರು, 42 ಪುರುಷರು ( 24 ವರ್ಷದವರು) ರನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ನಡೆಸಲಾಗಿದೆ. ಏನೇ ಆದರೂ ನಮ್ಮ ನಡುವೆ ವಾಟ್ಸಾಪ್​ ದಿನಬಳಕೆಯ ವಸ್ತುವಂತೆ ಆಗಿಬಿಟ್ಟಿದೆ. ಅದರಲ್ಲೂ ವಾಟ್ಸಾಪ್​ನಲ್ಲಿ ಎಲ್ಲವೂ ಸಾಧ್ಯ ಎಂಬಂತಾಗಿದೆ. ಹೀಗಾಗಿ ವಾಟ್ಸಾಪ್​ ಮೇಲೆ ಸಂಶೋಧನೆಗಳು ನಡೆದು ಇಂಥಹ ವಿಶೇಷ ಮತ್ತು ವಿಶಿಷ್ಠ ಮಾಹಿತಿ ಹೊರಬೀಳುತ್ತಿವೆ.

Intro:Body:

jkl

Conclusion:
Last Updated : Feb 16, 2021, 7:51 PM IST

For All Latest Updates

TAGGED:

hjk
ETV Bharat Logo

Copyright © 2024 Ushodaya Enterprises Pvt. Ltd., All Rights Reserved.