ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಟ್ವಿಟರ್ ಸದ್ಯ ಹೊಸ ಫೀಚರ್ ಹೊರತರಲು ಮುಂದಾಗಿದೆ. ಮೊದಲು ಟ್ವಿಟರ್ನಲ್ಲಿ ಯೂಸರ್ಗಳನ್ನ ಬ್ಲಾಕ್ ಮಾಡುವ ಅವಕಾಶವಿತ್ತು. ಆದರೆ, ಈ ರೀತಿ ಬ್ಲಾಕ್ ಮಾಡಿದರೆ, ಅವರ ಮುಂದಿನ ಟ್ವೀಟ್ಗಳು ಸಹ ನಮ್ಮ ಪೇಜ್ನಲ್ಲಿ ಕಾಣಿಸುತ್ತಿರಲಿಲ್ಲ. ಆದರೆ, ಇದೀಗ ಹೊಸದಾಗಿ ‘ಸಾಫ್ಟ್ ಬ್ಲಾಕ್’ ಫೀಚರ್ ಪರಿಚಯಿಸಿದೆ.
ಇದರಲ್ಲಿ ಟ್ವಿಟರ್ ಬಳಕೆದಾರರು ಅನಗತ್ಯವಾದ ಟ್ವೀಟ್ ಹ್ಯಾಂಡ್ಲರ್ ಅನ್ನು ಪ್ರೊಫೈಲ್ನಿಂದ ರಿಮೂವ್ ಮಾಡಬಹುದಾಗಿದೆ. ಹೀಗಂತ ಟ್ವಿಟರ್ ತನ್ನ ಅಧಿಕೃತ ಹ್ಯಾಂಡಲ್ನಲ್ಲಿ ಮಾಹಿತಿ ನೀಡಿದೆ. ಇದೊಂದು ಇನ್ಸಸ್ಟಾಗ್ರಾಮ್ ಪ್ರೈವಸಿ ಪಾಲಿಸಿಯ ‘ಕ್ಲೋಸ್ ಫ್ರೆಂಡ್’ ಆಯ್ಕೆಯಂತೆ ಕೆಲಸ ಮಾಡಲಿದೆ.
ಟ್ವಿಟರ್ ಬಳಕೆದಾರರ ಟ್ವೀಟ್ನ ಬಲಭಾಗದಲ್ಲಿ ಕಾಣುವ ಮೂರು ಚುಕ್ಕಿಗಳ ಮೇಲೆ ಕ್ಲಿಕ್ ಮಾಡಿ ಅದರಲ್ಲಿನ ಬ್ಲಾಕ್ ಯೂಸರ್, ಮ್ಯೂಟ್ ಟೂಲ್ನ ಜೊತೆಗೆ ಇನ್ಮುಂದೆ ಸಾಫ್ಟ್ ಬ್ಲಾಕ್ ಎಂಬ ಟೂಲ್ ಸಹ ಕಾಣಸಿಗಲಿದೆ. ಸಾಫ್ಟ್ ಬ್ಲಾಕ್ ಅಥವಾ ರಿಮೂವ್ ಫಾಲೋವರ್ ಎಂಬ ಆಯ್ಕೆ ಇರಲಿದೆ. ನೀವು ಒಬ್ಬ ವ್ಯಕ್ತಿಯನ್ನ ಬ್ಲಾಕ್ ಮಾಡುವುದಕ್ಕಿಂತಲೂ ಆತನನ್ನು ರಿಮೂವ್ ಮಾಡುವುದು ಉತ್ತಮ ಎನ್ನುತ್ತಿದೆ ಸಂಸ್ಥೆ. ಆದರೆ, ಈ ಆಯ್ಕೆ ಪರೀಕ್ಷಾ ಹಂತವಾಗಿ ವೆಬ್ನಲ್ಲಿ ಮಾತ್ರ ಜಾರಿ ಮಾಡಲಾಗಿದೆ ಎಂದು ಟ್ವಿಟರ್ ತಿಳಿಸಿದೆ.