ನವದೆಹಲಿ: ಗ್ಯಾಲಕ್ಸಿ ಎಸ್ 21 ಮೊಬೈಲ್ ಫೋನ್ ಅನ್ನು ಬಿಡುಗಡೆ ಮಾಡುವ ವೇಳೆ ಮೊಬೈಲ್ನಲ್ಲಿ ಡಿಜಿಟಲ್ ಕಾರ್ ಕೀಗಳನ್ನು ಪರಿಚಯಿಸುವುದಾಗಿ ಹೇಳಿದ್ದ ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಕಂಪನಿ ಕೆಲವೊಂದು ಫೀಚರ್ಗಳನ್ನು ಸೇರಿಸಲು ಮುಂದಾಗಿದೆ.
ಅಮೆರಿಕನ್ ಟೆಕ್ನಾಲಜಿ ಬ್ಲಾಗ್ ದಿ ವರ್ಜ್ ಪ್ರಕಾರ ಕಾರು ಕೀಗಳಿಗೆ ultra-wideband (UWB) ಮತ್ತು NFC (Near-Field Communication) ಅನ್ನು ಅಳವಡಿಸಲಿದ್ದು, ಈ ಕಾರು ಕೀಗಳು ಮೊದಲು ದಕ್ಷಿಣ ಅಮೆರಿಕದಲ್ಲಿ ಮಾರಾಟವಾಗಲಿವೆ.
ಒಂದು ಕೀ ಒಂದು ಕಾರಿಗೆ ಮಾತ್ರ ಬಳಸುವ ಅವಕಾಶವಿದ್ದು, ಎಲ್ಲ Genesis GV60 ಕಾರುಗಳಿಗೆ ಅಳವಡಿಕೆ ಮಾಡಬಹುದಾಗಿದೆ. ಇದೊಂದು 'ಪ್ಯಾಸಿವ್ ಎಂಟ್ರಿ' ಎಂದು ಸ್ಯಾಮ್ಸಂಗ್ ಹೇಳಿಕೊಂಡಿದೆ.
ಅಂದರೆ ಮೊಬೈಲ್ನನ್ನು ಜೇಬಿನಿಂದ ಹೊರಗೆ ತೆಗೆಯದೇ ಕಾರು ಲಾಕ್ ಮತ್ತು ಅನ್ಲಾಕ್ ಮಾಡಬಹುದಾಗಿದೆ. ಈ ಕೀಗಳನ್ನ embedded Secure Element (eSE)ನಿಂದ ಸಂರಕ್ಷಣೆ ಮಾಡಲಾಗುತ್ತದೆ.
ಇದನ್ನೂ ಓದಿ: ಶಕ್ತಿಯುತ ಸ್ಫೋಟಕಗಳಲ್ಲಿ ಬಳಸುವ ಕೆಮಿಕಲ್ ಪತ್ತೆಗೆ ಸೆನ್ಸಾರ್ ಅಭಿವೃದ್ಧಿಪಡಿಸಿದ ಭಾರತೀಯ ವಿಜ್ಞಾನಿಗಳು