ಸ್ಯಾನ್ ಫ್ರಾನ್ಸಿಸ್ಕೋ: ಟೆಕ್ ದೈತ್ಯ ಸಂಸ್ಥೆ ಗೂಗಲ್ ತನ್ನ ಭಾರಿ ನಿರೀಕ್ಷಿತ ಸ್ಮಾರ್ಟ್‌ಫೋನ್ ಪಿಕ್ಸೆಲ್ 6 ಎ ಮತ್ತು ಪಿಕ್ಸೆಲ್ ವಾಚ್ ಬಿಡುಗಡೆಯನ್ನು ಅಮೆರಿಕದಲ್ಲಿ ಜುಲೈ ಅಂತ್ಯದವರೆಗೆ ಮುಂದೂಡಬಹುದು ಎನ್ನಲಾಗಿದೆ.
ಗೂಗಲ್ ಪಿಕ್ಸೆಲ್ 6 ಫೋನ್ ಹಾಗೂ ಪಿಕ್ಸೆಲ್ ವಾಚ್‌ಗಳ ಬಿಡಿ ಭಾಗಗಳ ದಾಸ್ತನು ಕೊರತೆ ಇದೆ ಎಂದು ಹೇಳಲಾಗುತ್ತಿರುವುದರಿಂದ ಗೂಗಲ್ ಈ ನಿರ್ಧಾರ ಕೈಗೊಂಡಿದೆ ಎಂದು ಆಂಡ್ರಾಯ್ಡ್ ಸೆಂಟ್ರಲ್ ವರದಿ ಮಾಡಿದೆ.
ಹೀಗಾಗಿಯೇ ಅತ್ಯುತ್ತಮ ಬಜೆಟ್‌ನ ಆಂಡ್ರಾಯ್ಡ್ ಫೋನ್‌ಗಳನ್ನು ಗೂಗಲ್ ಜುಲೈಗೆ ಮುಂದೂಡಿದೆ ಎಂದು ಹೇಳಿದೆ. 2022ರ ಮೇ 26ಕ್ಕೆ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಈ ಮೊದಲು ಹೇಳಿತ್ತು. ಈ ಉತ್ಪನ್ನಗಳ ವಿಳಂಬದ ಹಿಂದೆ ಜಾಗತಿಕ ಚಿಪ್ ಕೊರತೆಯೂ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: 2021ರಲ್ಲಿ ಭಾರತದ ಟಿವಿ ಮಾರುಕಟ್ಟೆ ದಾಖಲೆಯ ಏರಿಕೆ.. ಸ್ಮಾರ್ಟ್ ಟಿವಿಗಳದ್ದೇ ಮೇಲುಗೈ