ETV Bharat / science-and-technology

ಮೈಕ್ರೋಸಾಪ್ಟ್​ನಿಂದ ಎಕ್ಸ್​ ಬಾಕ್ಸ್ ವೈರ್​​ಲೆಸ್​ ಹೆಡ್​ ಫೋನ್ ಬಿಡುಗಡೆ: ಹೇಗಿದೆ ನೋಡಿ..

ಗೇಮಿಂಗ್ ಸಾಫ್ಟ್​​ವೇರ್ ಹಾಗೂ ತಂತ್ರಾಂಶ ಕ್ಷೇತ್ರದ ದಿಗ್ಗಜ ಮೈಕ್ರೋಸಾಫ್ಟ್ ಇದೀಗ ವೈರ್​ಲೆನ್ಸ್ ಎಕ್ಸ್ ಬಾಕ್ಸ್ ಸೀರಿಸ್​ನಲ್ಲಿ ಹೊಸ ಹೆಡ್​ ಫೋನ್ ಮಾರುಕಟ್ಟೆಗೆ ತರಲು ಮುಂದಾಗಿದೆ.

features-and-specifications-of-xbox-wireless-headset
ಮೈಕ್ರೋಸಾಪ್ಟ್​ನಿಂದ ಎಕ್ಸ್​ಬಾಕ್ಸ್ ವೈಯರ್​​ಲೆಸ್​ ಹೆಡ್​ಫೋನ್ ಬಿಡುಗಡೆ
author img

By

Published : Feb 17, 2021, 3:41 PM IST

ಹೈದರಾಬಾದ್: ಮೈಕ್ರೋಸಾಫ್ಟ್ ತನ್ನ ಗೇಮಿಂಗ್​ ವಲಯದಲ್ಲಿ ಹೊಸ ಉಪಕರಣಗಳನ್ನು ಹೊರತರಲು ಮುಂದಾಗಿದೆ. ಈ ಸರಣಿಯಲ್ಲಿ ವೈರ್​​​ಲೆಸ್ ಹೆಡ್​ಫೋನ್​ ಪ್ರಮುಖವಾಗಿದ್ದು, ಇದರ ಎಕ್ಸ್​ ಸೀರಿಸ್​​​​ ಅವತರಣಿಕೆಯಲ್ಲಿ ಹೊಸ ಹೆಡ್ ​ಫೋನ್ ಬಿಡುಗಡೆಯಾಗಿದೆ.

ಎಕ್ಸ್ ​ಬಾಕ್ಸ್ ಸೀರಿಸ್​​ನ ವೈರ್​​ಲೆಸ್​​ ಹೆಡ್​ ಫೋನ್ ಇದಾಗಿದ್ದು, ವಿಶೇಷವಾಗಿ ವಿಡಿಯೋ ಗೇಮಿಂಗ್ ಗ್ರಾಹಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾರುಕಟ್ಟೆಗೆ ಪರಿಚಯಿಸಿದೆ.

ಮೈಕ್ರೋಸಾಪ್ಟ್​ನಿಂದ ಎಕ್ಸ್ ​ಬಾಕ್ಸ್ ವೈಯರ್​​ಲೆಸ್​ ಹೆಡ್​ ಫೋನ್

ಈ ಎಕ್ಸ್​ ಬಾಕ್ಸ್ ಹೆಡ್​ಫೋನ್​​​ನ ಕೆಲ ವೈಶಿಷ್ಟ್ಯ ನೋಡುವುದಾದರೆ:

  • ಬ್ಲೂಟೂತ್​ ಆನ್ ಮಾಡಿದಾಕ್ಷಣ ನೇರ ಕನ್ಸೋಲ್ ಡಿವೈಸ್​​ಗೆ ಕನೆಕ್ಟ್ ಆಗಲಿದೆ.
  • ಅತೀ ಹೆಚ್ಚಿನ ಬಾಸ್​ ಸೌಂಡ್ ಎಫೆಕ್ಟ್ ನೀಡಲಿದೆ.
  • ಫ್ಲೆಕ್ಸಿಬಲ್ ಮೋಡ್​ನಲ್ಲಿ ಬಳಕೆ ಮಾಡಬಲ್ಲ ಹೆಡ್​​ ಫೋನ್ ಇದಾಗಿದ್ದು, ಕಡಿಮೆ ತೂಕ ಹೊಂದಿದೆ. (312 ಗ್ರಾಂ)
  • ಕಿವಿಯ ಎರಡೂ ಕಡೆಯ ಸ್ಪೀಕರ್​​ಗಳ ಹೊರ ಭಾಗವು ಮೃದುವಾಗಿದೆ. ನಿಮಗೆ ಬೇಕಾದಾ ಹಾಗೆ ಅದನ್ನು ಜೋಡಿಸಿಕೊಳ್ಳಬಹುದು.
  • ಹಿಂದಿನ ಎಕ್ಸ್ ಬಾಕ್ಸ್ ಸೀರಿಸ್​​​ನಂತೆ ಇದೂ ಕೂಡ ಹಲವು ಶಬ್ದ ತಂತ್ರಜ್ಞಾನ ಒಳಗೊಂಡಿದೆ. ಡಾಲ್ಬಿ, ವಿಂಡೋಸ್ ಸೋನಿಕ್, ಡಿಟಿಎಸ್​​ ಸಿಸ್ಟಂ ಸೌಂಡ್ ಸಪೋರ್ಟ್ ಮಾಡಲಿದೆ.
  • ಇದರಲ್ಲಿನ ಮೈಕ್ ಬಳಕೆ ಮಾಡದಿದಾಗ ಸ್ಪೀಕರ್ ಬಾಕ್ಸ್​ನೊಳಗೆ ಅಡಗಿರಲಿದೆ. ನಿಮ್ಮ ಅವಶ್ಯಕತೆಗೆ ಬೇಕಾದಾಗ ಮಾತ್ರ ಅದರ ಬಳಕೆ ಮಾಡಲು ಮುಂದೆ ಎಳೆದುಕೊಳ್ಳಬೇಕಾಗುತ್ತದೆ. ಇದರಿಂದ ಬೇಡದ ಸಮಯದಲ್ಲಿ ಕಿರಿಕಿರಿ ತಪ್ಪಿಸಬಹುದಾಗಿದೆ.
  • ವಾಯ್ಸ್ ಆಂಬಿಯನ್ಸ್​​ನಿಂದಾಗಿ ಹೊರಗಿನ ಶಬ್ದ ನಿಯಂತ್ರಣವಾಗಲಿದೆ.
  • ಮೈಕ್ರೋಫೋನ್​ ಬಳಕೆ ಮಾಡದೇ ಇರುವ ವೇಳೆ ಮೈಕ್​​ ಆಟೋಮ್ಯಾಟಿಕ್​​​ ಆಗಿ ಆಟೋ ಮ್ಯೂಟ್​ ಆಗಿರಲಿದೆ.
  • ಎಕ್ಸ್ ಬಾಕ್ಸ್​ ಆ್ಯಪ್​ ಬಳಸಿ ನೀವು ಈ ಹೆಡ್​​ ಫೋನ್​​ ಕಂಟ್ರೋಲ್ ಮಾಡಬಹುದು. ಆ್ಯಪ್​ ಮೂಲಕ ಈಕ್ವೆಲೈಸರ್ ಸೆಟ್ಟಿಂಗ್ಸ್, ಬಾಸ್​, ಆಟೋ ಮ್ಯೂಟ್, ಸೆನ್ಸಿಟಿವಿಟಿ ಹಾಗೂ ಸ್ಪೀಕರ್​ನ ಎಲ್​ಇಡಿ ಲೈಟ್​​​ನ ಬ್ರೈಟ್​​ನೆಸ್ ಅನ್ನೂ ಸಹ ಕಂಟ್ರೋಲ್ ಮಾಡಬಹುದು.
  • ಇದು ಬ್ಲೂಟೂತ್ 4.2 ವರ್ಷನ್ ಸಪೋರ್ಟ್ ಮಾಡಲಿದೆ.
  • 15 ಗಂಟೆಗಳ ಕಾಲ ಸುದೀರ್ಘ ಬ್ಯಾಟರಿ ಬಾಳಿಕೆ ಬರಲಿದೆ. 30 ನಿಮಿಷಗಳ ಕಾಲ ಚಾರ್ಜ್ ಮಾಡಿದರೆ 4 ಗಂಟೆಗಳ ಕಾಲ ಬಳಸಬಹುದು. ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಲು 3 ಗಂಟೆ ಸಮಯ ತೆಗೆದುಕೊಳ್ಳಲಿದೆ.

ಇದನ್ನೂ ಓದಿ: ಟಾಟಾ ಗ್ರೂಪ್​ನೊಂದಿಗೆ ಯಾವುದೇ ಷೇರು ಪಾಲು ಇಲ್ಲ: ಬಿಗ್‌ಬಾಸ್ಕೆಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.