ಸಿಯೋಲ್: ಸ್ಮಾರ್ಟ್ಫೋನ್ ಬಳಕೆದಾರರಿಗೆ ಗುಡ್ ನ್ಯೂಸ್ ಇಲ್ಲಿದೆ. 5G ನೆಟ್ವರ್ಕ್ ಹೊಂದಿರುವ ಮೊಬೈಲ್ ಭಾರತಕ್ಕೆ ಯಾವಾಗ ಬರುತ್ತೆ ಅಂತ ಕಾದಿದ್ದವರ ಕಾಯುವಿಕೆ ಸದ್ಯದಲ್ಲೇ ಕೊನೆಗೊಳ್ಳಲಿದೆ.
ಇದೇ ಏಪ್ರಿಲ್ನಲ್ಲಿ 5G ನೆಟ್ವರ್ಕ್ ಹೊಂದಿರುವ ಮೊಬೈಲ್ ಭಾರತಕ್ಕೆ ಕಾಲಿಡಲಿದೆ ಎಂದು ತಿಳಿದು ಬಂದಿದೆ. ಸ್ಯಾಮ್ಸಂಗ್ ಕಂಪನಿಯ ಗ್ಯಾಲಕ್ಸಿ ಎಸ್10 ಮೊಬೈಲ್ ಭಾರತದಲ್ಲಿ 5G ನೆಟ್ವರ್ಕ್ ಸಾಮರ್ಥ್ಯದ ಮೊಬೈಲ್ ಏಪ್ರಿಲ್ ಮಧ್ಯಭಾಗದಲ್ಲಿ ಭಾರತದಲ್ಲಿ ಪರಿಚಯಿಸಲಿದೆ.
ಎಲ್ಜಿ ಸಹ ಏಪ್ರಿಲ್ ಮಧ್ಯಭಾಗದ ಸಮಯದಲ್ಲಿ 5G ನೆಟ್ವರ್ಕ್ ಸಾಮರ್ಥ್ಯದ ಮೊಬೈಲನ್ನು ಭಾರತದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.