ಚೆನ್ನೈ (ತಮಿಳುನಾಡು): ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ದಿಕ್ಕಿನತ್ತ ಸಾಗುತ್ತಿದೆ. ಸಣ್ಣ ಉಪಗ್ರಹ ನಕ್ಷತ್ರ ಪುಂಜಗಳ ಟ್ರೆಂಡ್ನಿಂದಾಗಿ ಉಪಗ್ರಹ ತಯಾರಿಕೆಯು ವಿಸ್ತಾರವಾಗುತ್ತಿದ್ದು, ವಿದೇಶಿ ಕಂಪನಿಗಳು ಭಾರತದಲ್ಲಿ ಉಪಗ್ರಹ ತಯಾರಿಕಾ ಸೇವೆಗಳ ಲಾಭ ಪಡೆಯಲು ಎದುರು ನೋಡುತ್ತಿವೆ.
ಭಾರತದಲ್ಲಿ ಬಾಹ್ಯಾಕಾಶ ಪರಿಸರ ಅಭಿವೃದ್ಧಿಪಡಿಸುವುದು: ಅಂತರ್ಗತ ಬೆಳವಣಿಗೆಯ ಮೇಲೆ ಕೇಂದ್ರೀಕರಿಸುವುದು (Developing the space ecosystem in India: focusing on inclusive growth) ಎಂಬ ಶೀರ್ಷಿಕೆಯ ವರದಿಯನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ (ISpA) ಮತ್ತು ಇಝೆಡ್ (EY) ಸಿದ್ಧಪಡಿಸಿದೆ. ಈ ವರದಿಯ ಪ್ರಕಾರ ಭಾರತದಲ್ಲಿ ಉಪಗ್ರಹ ತಯಾರಿಕಾ ವ್ಯವಹಾರವು 2020ರಲ್ಲಿದ್ದ 2.1 ಶತಕೋಟಿ ಡಾಲರ್ನಿಂದ 2025ರ ವೇಳೆಗೆ 3.2 ಶತಕೋಟಿ ಡಾಲರ್ ತಲುಪುವ ನಿರೀಕ್ಷೆಯಿದೆ.
ಸಣ್ಣ ಉಪಗ್ರಹಗಳ ಬೇಡಿಕೆಯಿಂದ ಲಾಭ: ಹೊಸ ಯುಗದ ಲೋ ಅರ್ಥ್ ಆರ್ಬಿಟ್ (LEO) ಸ್ಥಳೀಯವಾಗಿ ನಿರ್ಮಿಸಲಾದ ಉಪಗ್ರಹ ಸಂವಹನ ಸಾಧನಗಳಿಗಾಗಿ ಭಾರತೀಯ ಕಂಪನಿಗಳನ್ನು ನಿಯಂತ್ರಿಸಲು ಅನುಕೂಲವಾಗಿದೆ. ವಿದೇಶಿ ಕಂಪನಿಗಳು ಭಾರತದಲ್ಲಿ ಉಪಗ್ರಹ ತಯಾರಿಕಾ ಸೇವೆಗಳ ಲಾಭ ಪಡೆಯಲು ಎದುರು ನೋಡುತ್ತಿವೆ. ಸರ್ಕಾರದ 'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮದಿಂದಲೂ ಸಣ್ಣ ಉಪಗ್ರಹಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ಲಾಭ ಪಡೆಯಲು ಉಪಗ್ರಹ ತಯಾರಕರು ಆದ್ಯತೆ ನೀಡುವಂತೆ ಆಗಿದೆ ಎಂದೂ ವರದಿ ಹೇಳಿದೆ.
ಪ್ರಸ್ತುತ ಉಪಗ್ರಹ ಬಸ್ ವ್ಯವಸ್ಥೆ ತಯಾರಿಸಲು ಭಾರತೀಯ ಬಾಹ್ಯಾಕಾಶ ಪರಿಸರ ವ್ಯವಸ್ಥೆಯು ಉತ್ತಮವಾಗಿ ಅಭಿವೃದ್ಧಿಗೊಂಡಿದೆ. ಆದಾಗ್ಯೂ, ನಿರ್ಣಾಯಕ ಪೇಲೋಡ್‌ಗಳ ತಯಾರಿಕೆಯು (ಉದಾಹರಣೆಗೆ ನಿಖರವಾದ ಕ್ಯಾಮರಾ) ಮುಖ್ಯವಾಗಿದೆ. ಇದರ ಜೊತೆಗೆ, ದೃಢತೆ ಮತ್ತು ದೀರ್ಘಾಯುಷ್ಯ ಖಾತ್ರಿಪಡಿಸುವಲ್ಲಿ ಉಪಗ್ರಹಗಳ ಪರೀಕ್ಷೆಯು ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ದೊಡ್ಡ ಮತ್ತು ನಿರ್ಣಾಯಕ ಉಪಗ್ರಹಗಳಿಗೆ ಕಠಿಣ ಪರೀಕ್ಷೆಯ ಅಗತ್ಯವಿದೆ ಎಂದು ಹೇಳಿದೆ.
ಬಾಹ್ಯಾಕಾಶ ಪಾರ್ಕ್ಗಳ ಸ್ಥಾಪನೆಗೆ ಅವಕಾಶ: ಭಾರತದಲ್ಲಿ ಪರೀಕ್ಷಾ ಸೌಲಭ್ಯಗಳು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO-ಇಸ್ರೋ)ನಲ್ಲಿವೆ. ದೇಶಾದ್ಯಂತ ಬಾಹ್ಯಾಕಾಶ ಪಾರ್ಕ್ಗಳನ್ನು ಸ್ಥಾಪಿಸುವುದು ಹಾಗೂ ವಿಶೇಷವಾಗಿ ಉತ್ಪಾದನೆಗೆ ಪೂರಕವಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುವ ಜಾಗತಿಕ ಸ್ಟಾರ್ಟ್ ಅಪ್‌ಗಳನ್ನು ಆಕರ್ಷಿಸಲು ಇದು ಪ್ರಮುಖವಾಗಿದೆ. ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿಗಳಿಗೆ ನೆರವು ನೀಡಲು ಸಹಾಯ ಮಾಡುತ್ತದೆ ಎಂದು ವರದಿಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಡ್ರೋನಿ.. ಡ್ರೋನ್ ಕ್ಯಾಮೆರಾ ಲಾಂಚ್ ಮಾಡಿದ ಧೋನಿ
ಬಾಹ್ಯಾಕಾಶ ಪಾರ್ಕ್ಗಳು ಎಸ್ಎಂಬಿಗಳು (small - ಸಣ್ಣ, medium - ಮಧ್ಯಮ, business - ವ್ಯಾಪಾರ) ಮತ್ತು ಉಪಗ್ರಹ ತಯಾರಿಕೆಯ ಘಟಕ ಮತ್ತು ಉಪಘಟಕಗಳ ಮೇಲೆ ಕೇಂದ್ರೀಕರಿಸಿದ ಸ್ಟಾರ್ಟ್‌ಅಪ್‌ಗಳಿಗೆ ಸಿದ್ಧ ಪರಿಸರ ವ್ಯವಸ್ಥೆ ಒದಗಿಸುತ್ತವೆ ಹೆಚ್ಚುವರಿಯಾಗಿ, ಬಾಹ್ಯಾಕಾಶ ಪಾರ್ಕ್ಗಳು ಹಂಚಿಕೆಯ ಸಂಪನ್ಮೂಲಗಳು ಮತ್ತು ಸೌಲಭ್ಯಗಳನ್ನು ಬಳಸಿಕೊಂಡು ಉಪಗ್ರಹ ತಯಾರಕರ ಘಟಕವು ಆರ್ಥಿಕತೆಯು ಗಣನೀಯವಾಗಿ ಸುಧಾರಿಸಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಉಪಗ್ರಹ ತಯಾರಿಕೆಯ ಹೊರತಾಗಿ ಬಾಹ್ಯಾಕಾಶ ಪಾರ್ಕ್ಗಳು ಉಪಗ್ರಹ ಅಪ್ಲಿಕೇಶನ್ ಜಾಗದಲ್ಲಿ ಕಂಪನಿಗಳಿಗೆ ಹೊಸ ಉತ್ಪನ್ನ ಸ್ಥಳವಾಗಿದೆ. ಇದು ಡೌನ್‌ಸ್ಟ್ರೀಮ್ ವಿಭಾಗದಲ್ಲಿ ಹೊಸ ವ್ಯಾಪಾರ ಪ್ರಕರಣಗಳೊಂದಿಗೆ ಬರಲು ಮತ್ತು ಆದಾಯವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಗುರುತಿಸಲು ಸಹಾಯ ಮಾಡುತ್ತದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: ಕಸದಿಂದ ರಸ.. ಬಳಸಿ ಬಿಸಾಡಿದ ಮೀನುಗಾರಿಕಾ ಬಲೆಯಿಂದ ಫೋನ್ ತಯಾರಿಸಿದ ಸ್ಯಾಮ್ಸಂಗ್