ETV Bharat / science-and-technology

ಒಂಟಿ ಹೃದಯಗಳಿಗೆ ಜಂಟಿ ಮಾಡಿಕೊಳ್ಳುವ ಸುದ್ದಿ​: ಎಕ್ಸ್​ನಲ್ಲಿ ಡೇಟಿಂಗ್​ ಆ್ಯಪ್​ ಫೀಚರ್ಸ್​

Find your perfect match: ಮೈಕ್ರೋಬ್ಲಾಗಿಂಗ್​ ತಾಣವನ್ನು everything application ಮಾಡುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಲಾನ್​ ಮಸ್ಕ್​.

Elon musk
ಎಲಾನ್​ ಮಸ್ಕ್​
author img

By ETV Bharat Karnataka Team

Published : Nov 1, 2023, 6:25 PM IST

ಟ್ವಿಟರ್​ ಅನ್ನು ಜಗತ್ತಿನ ನಂ. 1 ಶ್ರೀಮಂತ ಎಲಾನ್​ ಮಸ್ಕ್​ ಅವರು ಖರೀದಿಸಿ ನಂತರ ಅದರ ಮೌಲ್ಯ ಅರ್ಧದಷ್ಟು ಕುಸಿದಿದೆ ಎನ್ನುವ ವರದಿ ಬಂದ ಬೆನ್ನಲ್ಲೇ, ಇದೀಗ ಎಲಾನ್ ಮಸ್ಕ್​ ಏಕಾಂಗಿ ಆಗಿರುವವರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಶೀಘ್ರದಲ್ಲೇ ಎಲಾನ್​ ಮಸ್ಕ್​ ಎಕ್ಸ್​ ಅನ್ನು ಉನ್ನತ ಡೇಟಿಂಗ್​ ಹಾಗೂ ಉದ್ಯೋಗ ನೇಮಕಾತಿ ವೇದಿಕೆಯನ್ನಾಗಿ ಮಾಡುವ ಉದ್ದೇಶ ಹೊಂದಿದ್ದಾರೆ. ಹೊಸ ಪೋಚರ್​ ಪರಿಚಯಿಸಲು ಮುಂದಾಗಿದ್ದಾರೆ.

ಎಕ್ಸ್​ (ಮಾಜಿ ಟ್ವಿಟರ್) ಅನ್ನು ​ಎಲಾನ್​ ಮಸ್ಕ್​ ಖರೀದಿಸಿದ ಬಳಿಕ ಮೊದಲ ವಾರ್ಷಿಕೋತ್ಸವ ಆಚರಿಸುತ್ತಿರುವ ಹೊತ್ತಲ್ಲಿ, ಇತ್ತೀಚೆಗೆ ಎಲಾನ್​ ಮಸ್ಕ್​ ಹಾಗೂ ಎಕ್ಸ್​ ಸಿಇಒ ಲಿಂಡಾ ಯಾಕರಿನೊ ಅವರು ತಮ್ಮ ಉದ್ಯೋಗಿಗಳೊಂದಿಗೆ ಆಯೋಜಿಸಿದ್ದ ಸಭೆಯೊಂದರಲ್ಲಿ ಎಕ್ಸ್​ಗೆ ಡೇಟಿಂಗ್​ ಆ್ಯಪ್​ ಫೀಚರ್​ಗಳನ್ನು ಸೇರಿಸುವ ಯೋಜನೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಬಳಕೆದಾರರಿಗೆ ಅವರ ಎಲ್ಲಾ ಅಗತ್ಯಗಳಿಗೆ ಸಮಗ್ರ ಪರಿಹಾರ ಒದಗಿಸಲು ಎಕ್ಸ್, ​ಯೂಟ್ಯೂಬ್​, ಲಿಂಕ್ಡ್​​ಇನ್​, ಫೇಸ್​ಟೈಮ್​ ಹಾಗೂ ಬ್ಯಾಂಕಿಂಗ್​ ಅಪ್ಲಿಕೇಶನ್​ಗಳಂತಹ ವಿವಿಧ ಆನ್​ಲೈನ್​ ಆ್ಯಪ್​ಗಳ ಜೊತೆಗೆ ಸ್ಪರ್ಧಿಸಬೇಕಿದೆ. ಹಾಗಾಗಿ ಮೈಕ್ರೋಬ್ಲಾಗಿಂಗ್​ ತಾಣವಾಗಿರುವ ಎಕ್ಸ್ಅನ್ನು​ ಇನ್ಮುಂದೆ ಎಲ್ಲಾ ಒಳಗೊಂಡ ಎವ್ರಿಥಿಂಗ್​ ಅಪ್ಲಿಕೇಶನ್ (Everything Application)​ ಆಗಿ ಪರಿವರ್ತಿಸಲು ಚಿಂತನೆ ನಡೆಸಿರುವುದಾಗಿ ಹೇಳಿದ್ದಾರೆ.

ಅದರಲ್ಲೂ ಮಸ್ಕ್​ ಅವರು ಎಕ್ಸ್​ ಗೆ ಡೇಟಿಂಗ್​ ಅಪ್ಲಿಕೇಶನ್​ ತರಹದ ಫೀಚರ್​ಗಳನ್ನು ಪರಿಚಯಿಸವ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ. ಈ ವೇದಿಕೆ ಬಳಕೆದಾರರು ತಮ್ಮ ಪ್ರೀತಿಯನ್ನು ಹುಡುಕಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಬಗ್ಗೆ ಮಸ್ಕ್​ ದೃಷ್ಟಿಕೋನ ಸ್ಪಷ್ಟವಾಗಿದ್ದು, ಎಕ್ಸ್​ನಲ್ಲಿ ಪೋಸ್ಟ್​ ಮಾಡುವ ವಿಷಯಗಳು ವೃತ್ತಿಪರ ಸಂಪರ್ಕಗಳಿಗೆ ಮಾತ್ರವಲ್ಲದೆ, ಪ್ರೀತಿಯ ಕೊಂಡಿಯನ್ನೂ ಬೆಸೆಯುವಂತಾಗಬೇಕು ಎನ್ನುವ ನಿರ್ಧಾರವನ್ನು ಮಸ್ಕ್​ ಮಾಡಿದ್ದಾರೆ.

ಎಕ್ಸ್​ನಲ್ಲಿ ಈಗಾಗಲೇ ದೀರ್ಘ ರೂಪದ ಟ್ವೀಟ್​ಗಳು ಹಾಗೂ ವಿಡಿಯೋ ಹಂಚಿಕೊಳ್ಳುವ ಆಯ್ಕೆಗಳು ಇವೆ. ಇಷ್ಟಕ್ಕೆ ಸೀಮಿತವಾಗಿರುವ ಈ ಮೈಕ್ರೋಬ್ಲಾಗಿಂಗ್​ ತಾಣವನ್ನು ವಿಡಿಯೋ ಕಾಲ್, ವಾಯ್ಸ್​ ಕಾಲ್​, ಪೇಮೆಂಟ್​ ಹಾಗೂ ಉದ್ಯೋಗ ಹುಡುಕಾಟದಂತಹ ಹೆಚ್ಚಿನ ಫೀಚರ್​ಗಳನ್ನು ಶೀಘ್ರದಲ್ಲೇ ನೀಡುವ ಮೂಲಕ Everything Application ಆಗಿ ಅಪ್​ಗ್ರೇಡ್​ ಮಾಡುವ ಯೋಜನೆಯನ್ನು ಎಲಾನ್​ ಮಸ್ಕ್​ ಹೊಂದಿದ್ದಾರೆ.

ಉತ್ತಮ ಕ್ಯಾಂಡಿಡೇಟ್​ ಅನ್ನು ಎಕ್ಸ್​ ಮೂಲಕ ಆಯ್ಕೆ ಮಾಡಿಕೊಳ್ಳಿ ಎಂದು ಸಭೆಯಲ್ಲಿ ಹೇಳಿರುವ ಎಲಾನ್​ ಮಸ್ಕ್​, ಡೇಟಿಂಗ್​ ಹಾಗೂ ಇತರ ಫೀಚರ್​ಗಳೊಂದಿಗೆ, ಕ್ರೀಡೆ ಹಾಗೂ ರಾಜಕೀಯ ಘಟನೆಗಳ ವಿಡಿಯೋ, ಲೈವ್​ ಸ್ಟ್ರೀಮಿಂಗ್​ ನೀಡುವ ಆಯ್ಕೆ ಬಗ್ಗೆಯೂ ಹೆಚ್ಚು ಒತ್ತು ನೀಡಿದ್ದಾರೆ.

ಮಸ್ಕ್​ ಟ್ವಿಟರ್​ ಅನ್ನು ಖರೀದಿಸಿದ ನಂತರ, ಒಂದಾದ ನಂತರ ಒಂದರಂತೆ ಟ್ವಿಟರ್​ಗೆ ಹಲವು ಬದಲಾವಣೆಗಳನ್ನು ಮಾಡಿದ್ದಾರೆ. ಟ್ವಿಟರ್​ ಎಂದಿದ್ದ ಮೈಕ್ರೋಬ್ಲಾಗಿಂಗ್​ ತಾಣವನ್ನು ಎಕ್ಸ್​ ಎಂಬ ಹೆಸರಿನೊಂದಿಗೆ ಬದಲಾವಣೆ ಮಾಡಿದ್ದಾರೆ. ಇತ್ತೀಚಿಗೆ ಟ್ವಿಟರ್​ ಅನ್ನು ಮಸ್ಕ್​ ಸ್ವಾಧೀನ ಪಡಿಸಿಕೊಂಡ ನಂತರ ಎಕ್ಸ್​ ತನ್ನ ಅರ್ಧ ಮೌಲ್ಯವನ್ನು ಕಳೆದುಕೊಂಡಿದೆ ಎಂದು ವರದಿಯಾಗಿತ್ತು.

ಇದನ್ನೂ ಓದಿ: ಸುದ್ದಿಗಳ ಹೆಡ್​ಲೈನ್​ ಲಿಂಕ್​ ಕಣ್ಮರೆ, ಕೇವಲ ಇಮೇಜ್​ ಮಾತ್ರ ಪೋಸ್ಟ್​​; Xನಲ್ಲಿ ಮತ್ತೊಂದು ಬದಲಾವಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.