ನವದೆಹಲಿ: ತೈವಾನ್ ಟೆಕ್ ಕಂಪನಿ ಏಸಸ್ (ASUS) ಇತ್ತೀಚಿನ ಶ್ರೇಣಿಯ ರಿಪಬ್ಲಿಕ್ ಆಫ್ ಗೇಮರ್ಸ್ (ಆರ್ಒಜಿ) ಗೇಮಿಂಗ್ ಲ್ಯಾಪ್ಟಾಪ್ಗಳನ್ನು ಬಿಡುಗಡೆ ಮಾಡಿದ್ದು, ಈ ಲ್ಯಾಪ್ಟಾಪ್ಗಳು 11ನೇ ಜನರೇಷನ್ನ ಇಂಟೆಲ್ ಕೋರ್ ಹೆಚ್ ಸಿರೀಸ್ನ ಪ್ರೊಸೆಸರ್ಗಳನ್ನು ಹೊಂದಿದೆ.
ಹೊಸ ಶೈಲಿಯೊಂದಿಗೆ ಶಕ್ತಿಶಾಲಿ ಹಾರ್ಡ್ವೇರ್ನೊಂದಿಗೆ ಇರುವ ಲ್ಯಾಪ್ಟಾಪ್ ಆರ್ಒಜಿ ಜೆಫೈರಸ್ ಎಸ್ 17 ಬೆಲೆ 2,99,990 ರೂಪಾಯಿ ಇದ್ದು, ಜೆಫೈರಸ್ ಎಂ16 ಲ್ಯಾಪ್ಟಾಪ್ನ ಬೆಲೆ 1,44,990 ರೂಪಾಯಿ ಇದೆ ಎಂದು ಸಂಸ್ಥೆ ಹೇಳಿದೆ.
ಈ ಲ್ಯಾಪ್ಟ್ಯಾಪ್ಗಳ ಜೊತೆಗೆ ಏಸಸ್ ಟಿಯುಎಫ್ ಎಫ್15 ಮತ್ತು ಎಫ್17 ಅನ್ನೂ ಸಂಸ್ಥೆ ಅನಾವರಣಗೊಳಿಸಿದ್ದು, ಎರಡರ ಬೆಲೆಯೂ ಕ್ರಮವಾಗಿ 1,04,990 ರೂಪಾಯಿ ಮತ್ತು 92,990 ರೂಪಾಯಿ ಇದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಏಸಸ್ ಇಂಡಿಯಾದ ಸಿಸ್ಟಮ್ ಬ್ಯುಸಿನೆಸ್ ಗ್ರೂಪ್ನ ಗ್ರಾಹಕ ಮತ್ತು ಗೇಮಿಂಗ್ ಪಿಸಿ ವ್ಯವಹಾರಗಳ ಮುಖ್ಯಸ್ಥ ಅರ್ನಾಲ್ಡ್ ಸು ನಮ್ಮ ಹೊಸ ಗೇಮಿಂಗ್ ಲ್ಯಾಪ್ಟಾಪ್ಗಳು ಹೊಸ ಅನುಭವ ನೀಡುತ್ತವೆ. ಒಂದೇ ಸಮಯದಲ್ಲಿ ಯಾವುದೇ ತಡವಿಲ್ಲದೇ ಅನೇಕ ಕಾರ್ಯ ಒಟ್ಟಿಗೆ ಮಾಡುವ ಸಾಮರ್ಥ್ಯವಿದೆ ಎಂದಿದ್ದಾರೆ.
ಇದನ್ನೂ ಓದಿ: ಅನಿರೀಕ್ಷಿತ ಬೆಳವಣಿಗೆ: ಟಿಎಂಸಿ ಸೇರಿದ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್..!
ಜಾಗತಿಕ ಮಾರುಕಟ್ಟೆಯಲ್ಲಿ ಈಗಾಗಲೇ ಈ ಗೇಮಿಂಗ್ ಲ್ಯಾಪ್ಟಾಪ್ಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಈಗ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಅರ್ನಾಲ್ಡ್ ಸು ಮಾಹಿತಿ ನೀಡಿದ್ದಾರೆ.
ಜೆಫೈರಸ್ ಎಂ16 ಲ್ಯಾಪ್ಟಾಪ್ 16 ಇಂಚಿನದಾಗಿದ್ದು, ತೆಳುವಾಗಿದೆ. ಇದರಲ್ಲಿನ ಬೆಳಕಿನ ವಿನ್ಯಾಸ ಈ ಲ್ಯಾಪ್ಟಾಪ್ ಅನ್ನು ಶಕ್ತಿಶಾಲಿಯಾಗಿಸಿದೆ. ಜೆಫೈರಸ್ ಎಸ್ 17 ಪ್ರೀಮಿಯಂ ಆಪ್ಟಿಕಲ್ ಮೆಕ್ಯಾನಿಕಲ್ ಕೀಬೋರ್ಡ್ ಹೊಂದಿದ್ದು, ಅತ್ಯುನ್ನತ ಮಟ್ಟದ ಕೂಲಿಂಗ್ ತಂತ್ರಜ್ಞಾನ ಹೊಂದಿದೆ.
ಟಿಯುಎಫ್ ಎಫ್15 ಮತ್ತು ಎಫ್17 11ನೇ ಜನರೇಷನ್ನ ಇಂಟೆಲ್ ಕೋರ್ ಹೆಚ್ ಸಿರೀಸ್ನ ಪ್ರೊಸೆಸರ್ ಹೊಂದಿವೆ. ಇದರ ಜೊತೆಗೆ ಕೇವಲ 30 ನಿಮಿಷದಲ್ಲಿ ಶೇಕಡಾ 50ರಷ್ಟು ಚಾರ್ಜಿಂಗ್ ಆಗುವ ಸಾಮರ್ಥ್ಯ ಹೊಂದಿವೆ.